ಈರುಳ್ಳಿ ನಂತರ ಬೇಳೆ ಕಾಳುಗಳ ಬೆಲೆ ಹೆಚ್ಚಳದ ಶಾಕ್!

ಈರುಳ್ಳಿ ಬೆಲೆ ಏರಿಕೆ ನಂತರ ಈಗ ಬೇಳೆ ಕಾಳುಗಳ ಬೆಲೆ ವಿಪರೀತವಾಗಿ ಜನರಿಗೆ ಜನರಿಗೆ ಶಾಕ್ ಉಂಟು ಮಾಡುತ್ತಿವೆ.
ಸಂಗ್ರಹಚಿತ್ರ
ಸಂಗ್ರಹಚಿತ್ರ

ನವದೆಹಲಿ: ಈರುಳ್ಳಿ ಬೆಲೆ ಏರಿಕೆ ನಂತರ ಈಗ ಬೇಳೆ ಕಾಳುಗಳ ಬೆಲೆ ವಿಪರೀತವಾಗಿ ಜನರಿಗೆ ಜನರಿಗೆ ಶಾಕ್ ಉಂಟು ಮಾಡುತ್ತಿವೆ.

ಕಳೆದ 15 ದಿನಗಳ ಅವಧಿಯಲ್ಲಿ ಬೇಳೆ ಕಾಳು ಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಉದ್ದಿನ ಬೇಳೆ ದರ ಶೇಕಡ 40 ರಷ್ಟು ಏರಿಕೆಯಾಗಿದೆ. ಇದರ ಜೊತೆಗೆ ತೊಗರಿ ಬೇಳೆ ದರವೂ ಶೇಕಡ 12 ರಷ್ಟು, ಕಾಬೂಲ್ ಕಡಲೆ ದರ ಶೇಕಡ 8 ರಷ್ಟು ಏರಿಕೆಯಾಗಿದೆ. ಭಾರಿ ಮಳೆಯಿಂದಾಗಿ ವ್ಯಾಪಕ ಪ್ರಮಾಣದ ಬೆಳೆ ಹಾಳಾಗಿರುವುದರಿಂದ ಬೇಳೆಕಾಳು ದರದಲ್ಲಿ ಏರಿಕೆಯಾಗಿದೆ.

ಕಳೆದ 15 ದಿನಗಳ ಹಿಂದೆ ಕೆಜಿಗೆ 56 ರೂಪಾಯಿ ಇದ್ದ ಉದ್ದಿನ ಬೇಳೆ ದರ 87 ರೂಪಾಯಿಗೆ ಏರಿಕೆಯಾಗಿದೆ. ಮಳೆ ಕಾರಣದಿಂದ ಬೆಳೆ ಹಾಳಾಗಿದ್ದು ನಿರೀಕ್ಷಿತ ಉತ್ಪಾದನೆ ಇಳಿಮುಖವಾಗಿರುವುದೇ ಬೆಲೆ ಹೆಚ್ಚಳಕ್ಕೆ ಕಾರಣವಾಗಿದ್ದು, ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ. ಈಗಾಗಲೇ ಈರುಳ್ಳಿ, ಬೆಳ್ಳುಳ್ಳಿ, ತರಕಾರಿಗಳ ಬೆಲೆ ಏರಿಕೆಯಾಗಿ ಜನರು ತತ್ತರಿಸಿದ್ದು, ಬೆಳೆ ಕಾಳು ಏರಿಕೆಯಾಗಿ ಪರದಾಡುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com