10 ಲಕ್ಷ ಕೋಟಿ ರೂ ಮಾರುಕಟ್ಟೆ ಮೌಲ್ಯ ದಾಟಿದ ದೇಶದ ಮೊದಲ ಕಂಪನಿ ರಿಲಯನ್ಸ್‌!

ದೇಶದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮತ್ತೊಂದು ಮೈಲುಗಲ್ಲು ಸ್ಥಾಪನೆ ಮಾಡಿದ್ದು, ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ ತಲುಪಿದ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ದೇಶದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮತ್ತೊಂದು ಮೈಲುಗಲ್ಲು ಸ್ಥಾಪನೆ ಮಾಡಿದ್ದು, ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ ತಲುಪಿದ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಿಲಯನ್ಸ್‌ ಷೇರು ಗುರುವಾರ ಸಾರ್ವಕಾಲಿಕ ಗರಿಷ್ಠ 1,581ರೂ ತಲುಪುವ ಮೂಲಕ ಮಾರುಕಟ್ಟೆ ಮೌಲ್ಯ ದಾಖಲೆಯ ಮಟ್ಟಕ್ಕೆ ಹೆಚ್ಚಿದೆ ಎಂದು ಅರ್ಥಿಕ ತಜ್ಞರು ಹೇಳಿದ್ದಾರೆ. ಅಂತೆಯೇ 2019ರಲ್ಲಿ ರಿಲಯನ್ಸ್‌ ಷೇರು ಶೇ 40ರಷ್ಟು ಏರಿಕೆ ಕಂಡಿದೆ. ಸೌದಿ ಅರಾಮ್ಕೊ ಕಂಪನಿಗೆ ರಿಲಯನ್ಸ್‌ ಷೇರುಗಳನ್ನು ಮಾರಾಟ ಮಾಡುವ ಮೂಲಕ 18 ತಿಂಗಳಲ್ಲಿ ಸಂಸ್ಥೆಯನ್ನು ಸಾಲಮುಕ್ತಗೊಳಿಸುವುದಾಗಿ ಮುಖೇಶ್‌ ಅಂಬಾನಿ ಘೋಷಿಸಿದ್ದರು. ಜಿಯೊದ ಸೇವಾ ದರಗಳಲ್ಲೂ ಹೆಚ್ಚಳ ಮಾಡುವುದಾಗಿ ಇತ್ತೀಚಿಗೆ ರಿಲಯನ್ಸ್‌ ಘೋಷಿಸಿತ್ತು. ಈ ಎಲ್ಲ ಕಾರಣಗಳಿಂದ ಹೂಡಿಕೆದಾರರು ರಿಲಯನ್ಸ್‌ ಷೇರು ಖರೀದಿ ಮುಂದುವರಿಸಿದ್ದಾರೆ ಎಂದು ಅಭಿಪ್ರಾಯಪಡಲಾಗಿದೆ.

ಗುಜರಾತ್‌ನ ಜಾಮ್‌ ನಗರದಲ್ಲಿ ರಿಲಯನ್ಸ್‌ ಜಗತ್ತಿನ ಅತಿ ದೊಡ್ಡ ತೈಲ ಸಂಸ್ಕರಣ ಘಟಕವನ್ನು ಹೊಂದಿದ್ದು, ಇದಲ್ಲದೆ ಡಿಜಿಟಲ್‌ ಕಂಪನಿ ಸ್ಥಾಪನೆಗೆ 1 ಲಕ್ಷ ಕೋಟಿರೂ ಹೂಡಿಕೆ ಮಾಡುವ ಮೂಲಕ ಜಿಯೊ ಮೇಲಿರುವ ಸಾಲದ ಹೊರೆಯನ್ನು ಇಳಿಸಲು ಸಂಸ್ಥೆ ಉದ್ದೇಶಿಸಿತ್ತು. 

ಇನ್ನು ಇಂದು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್‌ ಶೇ 0.13 ಏರಿಕೆ ಮೂಲಕ 41,073 ತಲುಪಿದರೆ, ನಿಫ್ಟಿ ಸಹ ಶೇ 0.09 ಹೆಚ್ಚಳ ಕಂಡು 12,112 ಅಂಶ ತಲುಪಿತು. ಟಿಸಿಎಸ್‌, ಟಾಟಾ ಸ್ಟೀಲ್‌, ಐಸಿಐಸಿಐ ಬ್ಯಾಂಕ್‌, ಎಲ್‌ಆ್ಯಂಡ್‌ಟಿ ಹಾಗೂ ಎಸ್‌ಬಿಐ ಷೇರುಗಳು ಶೇ 1ರ ವರೆಗೂ ಗಳಿಕೆ ಕಂಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com