ಅವ್ಯವಹಾರ ಮುಚ್ಚಿಡಲು ಪಿಎಂಸಿ ಬ್ಯಾಂಕ್ ನಿಂದ ಬರೋಬ್ಬರಿ 21 ಸಾವಿರ ನಕಲಿ ಖಾತೆ ಸೃಷ್ಟಿ!

ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್(ಪಿಎಂಸಿ) ದೊಡ್ಡ ಮಟ್ಟದ ಅವ್ಯವಹಾರದಲ್ಲಿ ತೊಡಗಿದ್ದು ಬರೋಬ್ಬರಿ 21 ಸಾವಿರ ನಕಲಿ ಖಾತೆಗಳನ್ನು ಸೃಷ್ಟಿಸಲಾಗಿತ್ತು ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್(ಪಿಎಂಸಿ) ದೊಡ್ಡ ಮಟ್ಟದ ಅವ್ಯವಹಾರದಲ್ಲಿ ತೊಡಗಿದ್ದು ಬರೋಬ್ಬರಿ 21 ಸಾವಿರ ನಕಲಿ ಖಾತೆಗಳನ್ನು ಸೃಷ್ಟಿಸಲಾಗಿತ್ತು ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದ್ದಾರೆ. 

ಹೌಸಿಂಗ್ ಡೆವಲಪ್‌ಮೆಂಟ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ವಾಧವನ್ ಮತ್ತು ಅವರ ಪುತ್ರ ಸಾರಂಗ್ ನನ್ನು ಬಂಧಿಸಿದ್ದು ನಂತರ ನಗರ ಪೊಲೀಸರ ಆರ್ಥಿಕ ಅಪರಾಧ ವಿಭಾಗಗಳು ಮಾಹಿತಿಯನ್ನು ಬಹಿರಂಗಪಡಿಸಿವೆ.

ಈ ಸಂಬಂಧ ಕೋರ್ಟ್ ರಾಕೇಶ್ ವಾಧವನ್ ಮತ್ತು ಸಾರಂಗ್ ರನ್ನು ಅಕ್ಟೋಬರ್ 9ರವರೆಗೆ ಪೊಲೀಸ್ ವಶಕ್ಕೆ ನೀಡಿದೆ. ಬ್ಯಾಂಕ್ ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ತಪ್ಪೊಪ್ಪಿಕೊಂಡಿದ್ದು ಸುಮಾರು 6.500 ಕೋಟಿ ರೂ. ಅವ್ಯವಹಾರವನ್ನು ಮುಚ್ಚಿಡಲಾಗಿತ್ತು ಎಂದು ಹೇಳಿದ್ದಾರೆ. 

10 ವರ್ಷಗಳ ಕಾಲ ಆರ್ಬಿಐಗೆ ತಪ್ಪು ವರದಿ ಸಲ್ಲಿಸುತ್ತಿದ್ದ ಪಿಎಂಸಿ ಬ್ಯಾಂಕ್ ನ 6 ಅಧಿಕಾರಿಗಳು ಇದಕ್ಕಾಗಿ 21,049 ನಕಲಿ ಖಾತೆಗಳನ್ನು ತೆರೆದಿದ್ದರು ಎಂಬುದು ಇದೀಗ ಬಯಲಾಗಿದೆ. ಮುಂಬೈ ಮೂಲದ ನಿರ್ಮಾಣ ವಲಯದ ಎಚ್‌ಡಿಐಎಲ್ ಕಂಪನಿಯು ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ ನಿಂದ ಪಡೆದಿದ್ದ ಸಾಲ ಮರು ವಸೂಲಾಗದೆ 6,500 ಕೋಟಿ ರೂ,ಗಳ ಅವ್ಯವಹಾರವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com