ಪೆಟ್ರೋಲ್ ದರ ಸ್ಥಿರ, ಡೀಸೆಲ್ ದರದಲ್ಲಿ ಮತ್ತೆ 7 ಪೈಸೆ ಇಳಿಕೆ

ಗಗನಕ್ಕೇರಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಇದೀಗ ಇಳಿಕೆಯತ್ತ ಮುಖ ಮಾಡಿದ್ದು, ಇಂದು ಪೆಟ್ರೋಲ್ ದರ ಸ್ಥಿರವಾಗಿದೆಯಾದರೂ, ಡೀಸೆಲ್ ದರದಲ್ಲಿ 7 ಪೈಸೆ ಕಡಿತವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗಗನಕ್ಕೇರಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಇದೀಗ ಇಳಿಕೆಯತ್ತ ಮುಖ ಮಾಡಿದ್ದು, ಇಂದು ಪೆಟ್ರೋಲ್ ದರ ಸ್ಥಿರವಾಗಿದೆಯಾದರೂ, ಡೀಸೆಲ್ ದರದಲ್ಲಿ 7 ಪೈಸೆ ಕಡಿತವಾಗಿದೆ.

ಶುಕ್ರವಾರವಷ್ಟೇ 10 ಪೈಸೆ ಇಳಿಕೆ ಕಂಡಿದ್ದ ಡೀಸೆಲ್ ದರದಲ್ಲಿ ಇಂದು ಮತ್ತೆ 07 ಪೈಸೆ ಇಳಿಕೆ ಕಂಡು ಬಂದಿದೆ. ಪೆಟ್ರೋಲ್ ದರದಲ್ಲಿ ಸತತ ನಾಲ್ಕನೇ ದಿನವೂ ಯಾವುದೇ ಬದಲಾವಣೆ ಆಗಿಲ್ಲ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ದೆಹಲಿಯಲ್ಲಿ ಬುಧವಾರ ಬೆಳಿಗ್ಗೆ ಪೆಟ್ರೋಲ್ ಪ್ರತಿ ಲೀಟರ್‌ಗೆ 73.27 ರೂ. ಡೀಸೆಲ್ ಅನ್ನು ಲೀಟರ್‌ಗೆ 66.24 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 75.72 ರೂ. ಮತ್ತು ಡೀಸೆಲ್ ಬೆಲೆಯಲ್ಲಿ 7ಪೈಸೆ ಕಡಿತವಾಗಿದ್ದು, 68.44 ರೂ. ಆಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದ್ದು, ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com