ರಿಯಲ್ ಎಸ್ಟೇಟ್: ಮನೆಗಳ ಮಾರಾಟದಲ್ಲಿ ಭಾರೀ ಕುಸಿತ, ಬೆಂಗಳೂರಿಗೆ ಫಸ್ಟ್ ಪ್ಲೇಸ್!

ದೇಶದ ಏಳು ಪ್ರಮುಖ ನಗರಗಳಲ್ಲಿ ಗೃಹ ಮಾರಾಟ ಕ್ಷೇತ್ರದಲ್ಲಿ ಭಾರೀ ಇಳಿಕೆಯಾಗಿದೆ ಎಂದು ರಿಯಲ್ ಎಸ್ಟೇಟ್ ಸೇವೆಗಳ ಸಂಸ್ಥೆ ಅನರಾಕ್ ವರದಿ ಮಾಡಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಏಳು ಪ್ರಮುಖ ನಗರಗಳಲ್ಲಿ ಮನೆ ಖರೀದಿಯು 18 ಶೇಕಡಾದಷ್ಟು ಇಳಿಕೆಯಾಗಿದೆ.ಈ ತ್ರೈಮಾಸಿಕದಲ್ಲಿ ಏಳೂ ನಗರಗಳಲ್ಲಿ ಒಟ್ಟು 55,080 ಮನೆಗಳು ಮಾರಾಟವಾಗಿದೆ ಎಂದು ವರದಿ ಹೇಳಿದೆ.

Published: 30th September 2019 07:18 PM  |   Last Updated: 30th September 2019 07:18 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ನವದೆಹಲಿ: ದೇಶದ ಏಳು ಪ್ರಮುಖ ನಗರಗಳಲ್ಲಿ ಗೃಹ ಮಾರಾಟ ಕ್ಷೇತ್ರದಲ್ಲಿ ಭಾರೀ ಇಳಿಕೆಯಾಗಿದೆ ಎಂದು ರಿಯಲ್ ಎಸ್ಟೇಟ್ ಸೇವೆಗಳ ಸಂಸ್ಥೆ ಅನರಾಕ್ ವರದಿ ಮಾಡಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಏಳು ಪ್ರಮುಖ ನಗರಗಳಲ್ಲಿ ಮನೆ ಖರೀದಿಯು 18 ಶೇಕಡಾದಷ್ಟು ಇಳಿಕೆಯಾಗಿದೆ.ಈ ತ್ರೈಮಾಸಿಕದಲ್ಲಿ ಏಳೂ ನಗರಗಳಲ್ಲಿ ಒಟ್ಟು 55,080 ಮನೆಗಳು ಮಾರಾಟವಾಗಿದೆ ಎಂದು ವರದಿ ಹೇಳಿದೆ. 

ದೆಹಲಿ-ಎನ್‌ಸಿಆರ್, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು, ಪುಣೆ ಮತ್ತು ಹೈದರಾಬಾದ್ ನಗರಗಳಲ್ಲಿ ಗೃಹ ಖರೀದಿ-ಮಾರಾಟದಲ್ಲಿ ಇಳಿಕೆಯಾಗಿದೆ. ಈ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಮೇಲಿನ ನಗರಗಳಲ್ಲಿ 67,140  ಮನೆಗಳು ಮಾರಾಟವಾಗಿದ್ದವು.

2019ರ ತೃತೀಯ ತ್ರೈಮಾಸಿಕದಲ್ಲಿ ಸುಮಾರು 55,080 ಮನೆಗಳು ಮಾರಾಟವಾಗಿದೆ. ಇದು ದ್ವಿತೀಯ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 20 ಕಡಿಮೆಯಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 18ರಷ್ಟು ಕುಸಿತವಾಗಿದೆ-  ಅನರಾಕ್ ವರದಿ ಉಲ್ಲೇಖಿಸಿದೆ.

ಭಾವನೆಗಳ ಹೊರತಾಗಿ ಮನೆ ಮಾರಾಟದ ಕುಸಿತಕ್ಕೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿನ ಅನಪೇಕ್ಷಿತ ಆಫರ್ ಗಳು ಹಾಗೂ ಪಿತೃಪಕ್ಷದ ದಿನಗಳು ಕಾರಣವಾಗಿದೆ.ಅದಾಗ್ಯೂ ಗೃಅಹೋದ್ಯಮ ಕ್ಷೇತ್ರದ ಉತ್ತೇಜನಕ್ಕಾಗಿ ಸರ್ಕಾರವು ಆರ್ಥಿಕತೆಯನ್ನು ಹೆಚ್ಚಿಸುವ ಕ್ರಮಕ್ಕೆ ಮುಂದಾಗಿದ್ದು ಮುಂಬರುವ ಹಬ್ಬದ ಋತುವಿನಲ್ಲಿ ಗೃಹ ಮಾರಾಟ ಕ್ಷೇತ್ರ ಮತ್ತೆ ಚಿಗಿತಗೊಳ್ಳುವ ಲಕ್ಷಣವಿದೆ ಎಂದು ಅದು ಹೇಳಿದೆ.

ವರದಿಯಂತೆ ಬೆಂಗಳೂರಿನಲ್ಲಿ ಗರಿಷ್ಠ 35 ಶೇಕಡಾ ಇಳಿಕೆಯಾಗಿ 10,500 ಯುನಿಟ್‌ಗಳಿಗೆ ತಲುಪಿದ್ದರೆ, ಹೈದರಾಬಾದ್ ನಂತರದ ಸ್ಥಾನ (ಶೇ 32), ಕೋಲ್ಕತ್ತಾ (ಶೇಕಡಾ 27), ದೆಹಲಿ (ಶೇ 13), ಚೆನ್ನೈ (ಶೇ 11), ಪುಣೆ (ಶೇ .8) ಮತ್ತು ಮುಂಬೈ  6 ಶೇಕಡಾ) ಇಳಿಕೆ ದಾಖಲಿಸಿದೆ. ಇನ್ನು ಈ ಏಳು ನಗರಗಳಲ್ಲಿ ಪ್ರಸ್ತುತ ಮಾರಾಟವಾಗದ ಮನೆಗಳ ಸಂಖ್ಯೆ ಒಟ್ಟಾರೆ  6.56 ಲಕ್ಷದಷ್ಟಿದೆ.ಇದು ಜೂನ್ ತ್ರೈಮಾಸಿಕದ ಕೊನೆಯಲ್ಲಿ 6.66 ಲಕ್ಷಕ್ಕೆ ಹೋಲಿಸಿದರೆ ತುಸು ಕಡಿಮೆಯಾಗಿದೆ.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp