ಅಮೆರಿಕ-ಇರಾನ್ ಸಂಘರ್ಷ; ತೈಲ ಬೆಲೆ ಮತ್ತೆ ಗಗನಕ್ಕೆ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಮೇಲೆ ಇದರ ವ್ಯತಿರಿಕ್ತ ಪರಿಣಾಮ ಬೀರಿದ್ದು, ತೈಲ ಬೆಲೆ ಮತ್ತೆ ಗಗನದತ್ತ ಮುಖ ಮಾಡಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಮೇಲೆ ಇದರ ವ್ಯತಿರಿಕ್ತ ಪರಿಣಾಮ ಬೀರಿದ್ದು, ತೈಲ ಬೆಲೆ ಮತ್ತೆ ಗಗನದತ್ತ ಮುಖ ಮಾಡಿವೆ.

ಕೆಲದಿನಗಳಿಂದ ತಾರಕಕ್ಕೇರಿರುವ ಅಮೆರಿಕ ಹಾಗೂ ಇರಾನ್ ದೇಶಗಳ ನಡುವಿನ ಸಂಘರ್ಷ ಇತರೆ ಅಭಿವೃಧಿಶೀಲ ರಾಷ್ಟ್ರಗಳ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರತೊಡಗಿದ್ದು, ಕಚಾತೈಲದ ಬೆಲೆ ಕೂಡ ಇದೀಗ ಗಗನದತ್ತ ಮುಖಮಾಡುವಂತೆ ಆಗಿದೆ. ಕಳೆದ ಐದು ದಿನಗಳಿಂದ ಸತತವಾಗಿ ತೈಲ ಬೆಲೆ ಏರಿಕೆಯಾಗುತ್ತಲೇ ಇದ್ದು, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಚಾ ತೈಲ 70 ಡಾಲರ್ ಗೆ ಏರಿಕೆಯಾಗಿದೆ.

ಇದು ಭಾರತದಲ್ಲಿ ತೈಲ ದರ ಏರಿಕೆ ಕಾರಣವಾಗಿದ್ದು, ಅಲ್ಲದೆ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 72 ರೂ ಗಡಿ ದಾಟಿದೆ. ಇದೂ ಕೂಡ ಭಾರತದಲ್ಲಿ ತೈಲ ದರ ಏರಿಕೆಗೆ ಕಾರಣ ಎನ್ನಲಾಗಿದೆ.

ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 15-16 ಪೈಸೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 17-18 ಪೈಸೆ ದರ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ಸದ್ಯಕ್ಕೆ ಒಂದು ಲೀಟರ್ ಪೆಟ್ರೋಲ್ ಬೆಲೆ 78.28 ರೂ ಇದ್ದು, ಡೀಸೆಲ್ ಬೆಲೆ 70.27ರೂ ಗೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ 75.69 ರೂ ಇದ್ದು, ಕೋಲ್ಕತಾದಲ್ಲಿ 78.28 ರೂ, ಮುಂಬೈನಲ್ಲಿ 81.28 ರೂ, ಚೆನ್ನೈನಲ್ಲಿ 78.64 ರೂ ಗಳಾಗಿದೆ.

ಅಂತೆಯೇ ಡೀಸೆಲ್ ದರ ದೆಹಲಿಯಲ್ಲಿ ಪ್ರತೀ ಲೀಟರ್ ಗೆ 68.68ರೂ, ಮುಂಬೈನಲ್ಲಿ 72.02 ರೂ, ಕೋಲ್ಕತಾದಲ್ಲಿ 71.04 ರೂ ಮತ್ತು ಚೆನ್ನೈನಲ್ಲಿ 72.58 ರೂ ಗಳಿಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com