ಇನ್ಫೋಸಿಸ್ ಸಹ ಸಂಸ್ಥಾಪಕ ಶಿಬುಲಾಲ್ ಕುಟುಂಬದಿಂದ 786  ಕೋಟಿ ಮೌಲ್ಯದ ಷೇರು ಮಾರಾಟ 

 ಜುಲೈ 22 ಮತ್ತು 24 ರ ನಡುವೆ ಕಳೆದ ಮೂರು ಸೆಷನ್‌ಗಳಲ್ಲಿ ತಾನು ಮತ್ತು ಅವರ ಕುಟುಂಬವು ಕಂಪನಿಯ 8.5 ಮಿಲಿಯನ್ ಷೇರುಗಳನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಮಾರಾಟ ಮಾಡಿರುವುದಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ ಎಸ್‌ಡಿ ಶಿಬುಲಾಲ್ ಶನಿವಾರ ಹೇಳಿದ್ದಾರೆ
ಇನ್ಫೋಸಿಸ್
ಇನ್ಫೋಸಿಸ್

ಬೆಂಗಳೂರು: ಜುಲೈ 22 ಮತ್ತು 24 ರ ನಡುವೆ ಕಳೆದ ಮೂರು ಸೆಷನ್‌ಗಳಲ್ಲಿ ತಾನು ಮತ್ತು ಅವರ ಕುಟುಂಬವು ಕಂಪನಿಯ 8.5 ಮಿಲಿಯನ್ ಷೇರುಗಳನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಮಾರಾಟ ಮಾಡಿರುವುದಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ ಎಸ್‌ಡಿ ಶಿಬುಲಾಲ್ ಶನಿವಾರ ಹೇಳಿದ್ದಾರೆ. 

ವಹಿವಾಟಿನ ಒಟ್ಟು ಮೌಲ್ಯವು 786 ಕೋಟಿ ರೂ. ಆಗಿದ್ದು ಈ ಮಾರಾಟವನ್ನು ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ ಏಕೈಕ ಬ್ರೋಕರ್ ಆಗಿ ನಿರ್ವಹಿಸಿತು. ಶುಕ್ರವಾರ ಇನ್ಫೋಸಿಸ್ ಮಾರುಕಟ್ಟೆ ಬಂಡವಾಳ ಮೌಲ್ಯ 3,92,962.68 ಕೋಟಿ ರೂ. ಆಗಿತ್ತು.

 "ಕಳೆದ ಮೂರು ದಿನಗಳಲ್ಲಿ (ಜುಲೈ 22-24), ಕುಟುಂಬ ಸದಸ್ಯರು ಇನ್ಫೋಸಿಸ್ ಲಿಮಿಟೆಡ್‌ನಲ್ಲಿ ತಮ್ಮ ಪಾಲಿನ ಒಂದು ಭಾಗವನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಮಾರಾಟ ಮಾಡಿದ್ದಾರೆ.ಭಾಗಶಃ ಪಾಲು ಹಣಗಳಿಕೆಯಿಂದ ಬರುವ ಆದಾಯವನ್ನು ಲೋಕೋಪಕಾರಿ ಮತ್ತು ಹೂಡಿಕೆ ಚಟುವಟಿಕೆಗಳ ಸಂಯೋಜನೆಗೆ ಬಳಸಿಕೊಳ್ಳಲಾಗುವುದು ”ಎಂದು ಶಿಬುಲಾಲ್ ಅವರ ಫ್ಯಾಮಿಲಿ ಆಫೀಸ್ ಹೇಳಿಕೆ ತಿಳಿಸಿದೆ. . ಈ ವರ್ಷದ ಜೂನ್ 30 ರ ಹೊತ್ತಿಗೆ, ಎಸ್ ಡಿ ಶಿಬುಲಾಲ್ ಅವರು 17.6 ಲಕ್ಷ ಷೇರುಗಳನ್ನು ಹೊಂದಿದ್ದರು. (ಇನ್ಫೋಸಿಸ್ನಲ್ಲಿ ಶೇ 0.04 ರಷ್ಟು ಪಾಲು). ಇದೇ ವೇಳೆ ಶಿಬುಲಾಲ್ ಅವರ ಮಗ ಜೂನ್ ವರೆಗೆ 1.8 ಕೋಟಿ ಇನ್ಫಿ ಷೇರುಗಳನ್ನು ಹೊಂದಿದ್ದರು 

ಶಿಬುಲಾಲ್ ಅವರ ಪತ್ನಿ ಕುಮಾರಿ ಶಿಬುಲಾಲ್ ಅವರು 1.04 ಕೋಟಿ ಷೇರುಗಳನ್ನು (ಶೇ 0.25), ಮಗ ಶ್ರೇಯಾಸ್ ಶಿಬುಲಾಲ್ 1.80 ಕೋಟಿ ಷೇರುಗಳನ್ನು (ಶೇ 0.66) ಮತ್ತು ಮಗಳು ಶ್ರುತಿ ಶಿಬುಲಾಲ್ 27.37 ಲಕ್ಷ ಷೇರುಗಳನ್ನು (ಶೇ 0.06) ಹೊಂದಿದ್ದಾರೆ. ಶಿಬುಲಾಲ್ ಅವರ ಮೊಮ್ಮಗ ಮಿಲನ್ ಮಂಚಂದಾ 1.54 ಕೋಟಿ ಈಕ್ವಿಟಿ ಷೇರುಗಳನ್ನು (ಶೇ 0.36), ಅಳಿಯ ಗೌರವ್ ಮಂಚಂದಾ 1.55 ಕೋಟಿ ಪೇಡ್-ಅಪ್ ಇಕ್ವಿಟಿ ಷೇರುಗಳನ್ನು (ಶೇ 0.36) ಮತ್ತು ಸೊಸೆ ಭೈರವಿ ಮಧುಸೂದನ್ ಶಿಬುಲಾಲ್ 63.34 ಲಕ್ಷ ಷೇರುಗಳನ್ನು (0.15) ಹೊಂದಿದ್ದಾರೆ

ಶಿಬುಲಾಲ್ 1981 ರಲ್ಲಿ ಎನ್ ಆರ್ ನಾರಾಯಣ ಮೂರ್ತಿ ಮತ್ತು ಇತರ ಐದು ಜನರೊಂದಿಗೆ ಇನ್ಫೋಸಿಸ್ ಅನ್ನು ಸ್ಥಾಪಿಸಿದರು. 2014 ರಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನದಿಂದ ಕೆಳಗಿಳಿದ ನಂತರ, ಶಿಬುಲಾಲ್ ಅವರು ಆಕ್ಸಿಕ್ಸಿಲರ್ ಉದ್ಯಮಗಳನ್ನು ಕ್ರಿಸ್ ಗೋಪಾಲಕೀಷ್ಣನ್ ಅವರೊಂದಿಗೆ ಸ್ಥಾಪಿಸಿದರು, ಇದು ಡೀಪ್ ಟೆಕ್ ಸ್ಟಾರ್ಟ್ಅಪ್‌ಗಳಲ್ಲಿ ಹೂಡಿಕೆ ಮಾಡುತ್ತದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com