ಅಕ್ಟೋಬರ್ 24ರಿಂದ ಸಾಲು ಸಾಲು ರಜೆ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ!

ಇದೇ ಅಕ್ಟೋಬರ್ 24ರಿಂದ ಸಾಲು ಸಾಲು ಸರ್ಕಾರ ರಜೆ ಇರುವ ಹಿನ್ನಲೆಯಲ್ಲಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇದೇ ಅಕ್ಟೋಬರ್ 24ರಿಂದ ಸಾಲು ಸಾಲು ಸರ್ಕಾರ ರಜೆ ಇರುವ ಹಿನ್ನಲೆಯಲ್ಲಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಹೌದು... ಹಬ್ಬದ ಪ್ರಯುಕ್ತ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ ಇದ್ದು ಬ್ಯಾಂಕ್ ವ್ಯವಹಾರಗಳಿದ್ದರೆ ಇನ್ನೆರಡು ದಿನದಲ್ಲಿ ಮುಗಿಸಿಕೊಳ್ಳುವುದು ಉತ್ತಮ. ಶನಿವಾರದಿಂದ ಬ್ಯಾಂಕ್ ಗಳಿಗೆ ನಿರಂತರ ರಜೆ ಇರಲಿದ್ದು, ಸಾಲು ಸಾಲು ರಜೆ ಹಿನ್ನೆಲೆ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಹಬ್ಬ ವಾರಾಂತ್ಯ ರಜೆಗಳ ಕಾರಣ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದ್ದು, ಕ್ಯಾಶ್ ವಿತ್ ಡ್ರಾ, ಠೇವಣಿ, ಚೆಕ್ ಮೊದಲಾದ ವ್ಯವಹಾರಗಳನ್ನು ಈಗಲೇ ಮುಗಿಸಿಕೊಳ್ಳುವುದು ಉತ್ತಮ.

ಅಕ್ಟೋಬರ್ 24ರಂದು 4ನೇ ಶನಿವಾರದ ರಜೆಯಾಗಿದ್ದು, ಅಕ್ಟೋಬರ್ 25 ಭಾನುವಾರ ಮತ್ತು ಆಯುಧ ಪೂಜೆ ರಜೆ ಇರಲಿದೆ. ಅಕ್ಟೋಬರ್ 26 ಸೋಮವಾರ ವಿಜಯದಶಮಿ ಹಬ್ಬದ ನಿಮಿತ್ತ ರಜೆ ಇರಲಿದೆ. ಅಂತೆಯೇ ಅಕ್ಟೋಬರ್ 30 ಶುಕ್ರವಾರದಂದು ಈದ್ ಮಿಲಾದ್ ಇದ್ದು, ಅಕ್ಟೋಬರ್ 31ರಂದು ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ನವೆಂಬರ್ 1 ಭಾನುವಾರ ಕನ್ನಡ ರಾಜ್ಯೋತ್ಸವ ಇರಲಿದೆ.

ಹೀಗಾಗಿ ಇನ್ನೆರಡು ದಿನಗಳಲ್ಲಿ ನಿಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com