ಕೋವಿಡ್-19: 5 ಲಕ್ಷದವರೆಗೆ ಬಾಕಿ ಇರುವ ಎಲ್ಲಾ ಆದಾಯ ತೆರಿಗೆ ಮರುಪಾವತಿಗೆ ಕೇಂದ್ರ ಸಿದ್ದ

ಬಾಕಿ ಇರುವ 5 ಲಕ್ಷದವರೆಗಿನ ಎಲ್ಲಾ ಆದಾಯ ತೆರಿಗೆ ಮರುಪಾವತಿಗಳನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಆದಾಯ ತೆರಿಗೆ ಇಲಾಖೆ ಘೋಷಿಸಿದೆ.
ಆದಾಯ ತೆರಿಗೆ
ಆದಾಯ ತೆರಿಗೆ

ನವದೆಹಲಿ: ಬಾಕಿ ಇರುವ 5 ಲಕ್ಷದವರೆಗಿನ ಎಲ್ಲಾ ಆದಾಯ ತೆರಿಗೆ ಮರುಪಾವತಿಗಳನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಆದಾಯ ತೆರಿಗೆ ಇಲಾಖೆ ಘೋಷಿಸಿದೆ.

ದೇಶದಲ್ಲಿ ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಈ ನಿರ್ಧಾರಕ್ಕೆ ಬರಲಾಗಿದ್ದು ಈ ನಿರ್ಧಾರದಿಂದ ಸುಮಾರು 14 ಲಕ್ಷ ತೆರಿಗೆದಾರರಿಗೆ ಪ್ರಯೋಜನವಾಗಲಿದೆ.

ಈ ಬಗ್ಗೆ ಆದಾಯ ತೆರಿಗೆ ಇಲಾಖೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ. ವೇತನ ಕಡಿತ ಅಥವಾ ಉದ್ಯೋಗ ನಷ್ಟದಿಂದಾಗಿ ನಗದು ಬಿಕ್ಕಟ್ಟು ಎದುರಿಸುತ್ತಿರುವ ಅಥವಾ ಅವರ ಉದ್ಯೋಗದಾತರು ತಮ್ಮ ಸಂಬಳ ಅಥವಾ ವೇತನವನ್ನು ಬಿಡುಗಡೆ ಮಾಡಲು ಕಾಯುತ್ತಿರುವ ವ್ಯಕ್ತಿಗಳಿಗೆ ಈ ಇದರಿಂದ ಪ್ರಯೋಜನವಾಗಲಿದೆ.

ಕೊರೋನಾ ವೈರಸ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮತ್ತು ತೆರಿಗೆದಾರರಿಗೆ ತಕ್ಷಣದ ಪರಿಹಾರ ನೀಡುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. 5 ಲಕ್ಷ ರೂ.ವರೆಗೆ ಬಾಕಿ ಇರುವ ಎಲ್ಲಾ ಆದಾಯ ತೆರಿಗೆ ಮರುಪಾವತಿಗಳನ್ನು ಮತ್ತು ಜಿಎಸ್ಟಿ ಕಸ್ಟಮ್ ಮರುಪಾವತಿಯನ್ನು ತಕ್ಷಣದಿಂದ ಜಾರಿಗೆ ತರಲು ಜಿಒಐ ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com