ಏಪ್ರಿಲ್ ನಲ್ಲಿ 82 ಲಕ್ಷ ಚಂದಾದಾರರನ್ನು ಕಳೆದುಕೊಂಡ ಟೆಲಿಕಾಂ ಸಂಸ್ಥೆಗಳು!

ಏಪ್ರಿಲ್ ನಲ್ಲಿ ಸಂಪೂರ್ಣ ಲಾಕ್ ಡೌನ್ ಸಮಯದಲ್ಲಿ ಟೆಲಿಕಾಂ ಉದ್ಯಮವು 82 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ.
ಟೆಲಿಕಾಂ ಸಂಸ್ಥೆ
ಟೆಲಿಕಾಂ ಸಂಸ್ಥೆ

ಮುಂಬೈ: ಏಪ್ರಿಲ್ ನಲ್ಲಿ ಸಂಪೂರ್ಣ ಲಾಕ್ ಡೌನ್ ಸಮಯದಲ್ಲಿ ಟೆಲಿಕಾಂ ಉದ್ಯಮವು 82 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ.

ಏಪ್ರಿಲ್ ನಲ್ಲಿ ಗೂ ಮುನ್ನ ಮಾರ್ಚ್ ನಲ್ಲಿ 28 ಲಕ್ಷ ಸಂಪರ್ಕಗಳು ಕಡಿತಗೊಂಡಿದ್ದವು. ಇದು ಲಾಕ್ ಡೌನ್ ಎಫೆಕ್ಟ್ ಎಂದು ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ವರದಿಯಲ್ಲಿ ತಿಳಿಸಿದೆ. 

ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು ಅತಿ ಹೆಚ್ಚು ಚಂದಾದಾರರನ್ನು ಕಳೆದುಕೊಂಡಿದೆ. ರಿಲಯನ್ಸ್ ಜಿಯೋ ಮಾತ್ರ ಚಂದಾದಾರರನ್ನು ವೃದ್ಧಿಸಿಕೊಂಡಿದೆ. 

ಕೈಗಾರಿಕಾ-ವ್ಯಾಪಕ ಚಂದಾದಾರರ ಸಂಖ್ಯೆ ತಿಂಗಳಿಗೆ ಕ್ರಮವಾಗಿ 2.8 ಮಿಲಿಯನ್ ಮತ್ತು ಮಾರ್ಚ್ ಮತ್ತು ಏಪ್ರಿಲ್ 2020 ರಲ್ಲಿ 8.2 ಮಿಲಿಯನ್ ಇಳಿಕೆಯಾಗಿದೆ. ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಮತ್ತು ಭಾರ್ತಿ ಏರ್ಟೆಲ್ ಲಿಮಿಟೆಡ್ ನ ಚಂದಾದಾರರ ಸಂಖ್ಯೆಯಲ್ಲಿನ ಇಳಿಕೆಗೆ ಈ ಕುಸಿತ ಕಾರಣವಾಗಿದೆ. ಇದು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಚಂದಾದಾರರ ಬೆಳವಣಿಗೆಯನ್ನು ಸರಿದೂಗಿಸುವುದಕ್ಕಿಂತ ಹೆಚ್ಚಿನದನ್ನು ಹೊಂದಿದೆ.

ಕೋವಿಡ್ 19 ಮಹಾಮಾರಿ ಹಿನ್ನಲೆಯಲ್ಲಿ ಮಾರ್ಚ್ ಅಂತ್ಯದವರೆಗೆ ಏಕಾಏಕಿ ಲಾಕ್ ಡೌನ್ ವಿಧಿಸಲಾಗಿತ್ತು. ನಂತರ ಏಪ್ರಿಲ್ ತಿಂಗಳ ಪೂರ್ಣ ಅವಧಿಯವರೆಗೆ ಇದು ವಿಸ್ತರಣೆಯಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಚಂದಾದಾದರು ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.

ಲಾಕ್‌ಡೌನ್ ನಿಂದಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಕುಂಠಿತವಾಗಿದ್ದು ಇದು ಆರ್ಥಿಕತೆಯ ಕ್ಷೇತ್ರಗಳಲ್ಲಿ ತೀವ್ರ ಪರಿಣಾಮ ಬೀರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com