ಕೊರೋನಾ ವೈರಸ್ ಭೀತಿ: ಸೆನ್ಸೆಕ್ಸ್ 1941.67 ಅಂಕ ಇಳಿಕೆ!

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ವಹಿವಾಟಿನ ಅಂತ್ಯಕ್ಕೆ 1941.67 ಅಂಕ ಇಳಿಕೆ ಕಂಡು 35,634.95 ರಲ್ಲಿತ್ತು.
ಷೇರುಮಾರುಕಟ್ಟೆ (ಸಂಗ್ರಹ ಚಿತ್ರ)
ಷೇರುಮಾರುಕಟ್ಟೆ (ಸಂಗ್ರಹ ಚಿತ್ರ)

ಮುಂಬೈ: ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ವಹಿವಾಟಿನ ಅಂತ್ಯಕ್ಕೆ 1941.67 ಅಂಕ ಇಳಿಕೆ ಕಂಡು 35,634.95 ರಲ್ಲಿತ್ತು. ಒಂದೇ ದಿನ ಸೂಚ್ಯಂಕ ಇಷ್ಟು ಗಣನೀಯ ಪ್ರಮಾಣದಲ್ಲಿ ಕುಸಿಯಲು ಕಚ್ಚಾ ತೈಲ ಬೆಲೆಗಳ ಇಳಿಕೆ ಮತ್ತು ಪ್ರಪಂಚದಾದ್ಯಂತ ಹರಡಿರುವ ಕರೋನವೈರಸ್ (ಕೋವಿಡ್ -19) ಭೀತಿ ಕಾರಣ ಎನ್ನಲಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 538 ಅಂಕ ಇಳಿಕೆ ಕಂಡು 10,451.45 ರಲ್ಲಿತ್ತು. ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 36,950.20 ಮತ್ತು 35,109.18. ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 10,751.55 ಮತ್ತು 10,294.45.

ಒಎನ್ ಜಿಎಸ್ ಸೆನ್ಸೆಕ್ಸ್ ನಲ್ಲಿ ಅತಿ ಹೆಚ್ಚು ಅಂಕ ಕಳೆದುಕೊಂಡಿದ್ದು, ಶೇ.16 ರಷ್ಟು ಕುಸಿತ ಕಂಡಿದ್ದರೆ, ರಿಲಾಯನ್ಸ್ ಇಂಡಸ್ಟ್ರೀಸ್, ಇಂಡಸ್ ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಟಿಸಿಎಸ್, ಎಸ್ ಬಿಐ, ಐಸಿಐಸಿಐ ಬ್ಯಾಂಕ್, ಬಜಾಜ್ ಆಟೋ ಸಂಸ್ಥೆಗಳು ಕುಸಿತ ಕಂಡಿವೆ. ಯೆಸ್ ಬ್ಯಾಂಕ್ ನಲ್ಲಿ 2.450 ಕೋಟಿ ರೂಪಾಯಿ ನೀಡಿ ಶೇ.49 ರಷ್ಟು ಪಾಲುಪಡೆಯುವುದಾಗಿ ಹೇಳಿದ ನಂತರ ಎಸ್ ಬಿಐ ನ ಷೇರುಗಳು ಶೇ.6 ರಷ್ಟು ಕುಸಿತ ಕಂಡಿದೆ. ಮತ್ತೊಂದೆಡೆ ಯೆಸ್ ಬ್ಯಾಂಕ್ ನ ಷೇರುಗಳು ಶೇ.31 ರಷ್ಟು ಕುಸಿತ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com