ಕೊರೊನಾ ಭೀತಿಯಿದ್ದರೂ ಷೇರು ಮಾರುಕಟ್ಟೆ ಮುಚ್ಚಲು ಸಾಧ್ಯವಿಲ್ಲವೇಕೆ? ಇಲ್ಲಿವೆ ಮೂರು ಕಾರಣಗಳು

ಭಾರತೀಯ ಇಕ್ವಿಟಿ ಮಾರುಕಟ್ಟೆಗಳನ್ನು ಸೋಮವಾರ  45 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು. ಎಸ್ ಆಂಡ್ ಪಿ  ಬಿಎಸ್ಇ ಸೆನ್ಸೆಕ್ಸ್ ಶೇಕಡಾ 10 ರಷ್ಟು ಇಳಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಭಾರತೀಯ ಇಕ್ವಿಟಿ ಮಾರುಕಟ್ಟೆಗಳನ್ನು ಸೋಮವಾರ  45 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು. ಎಸ್ ಆಂಡ್ ಪಿ  ಬಿಎಸ್ಇ ಸೆನ್ಸೆಕ್ಸ್ ಶೇಕಡಾ 10 ರಷ್ಟು ಇಳಿಕೆಯಾಗಿದೆ.

ಸೆನ್ಸೆಕ್ಸ್ 3,219.78 ಪಾಯಿಂಟ್‌ಗಳನ್ನು ಕಳೆದುಕೊಂಡು 26,696.18ಗೆ ತಲುಪಿದೆ.  ನಿಫ್ಟಿ 50 ಸೂಚ್ಯಂಕ 940.60 ಪಾಯಿಂಟ್‌ಗಳಷ್ಟು ಕುಸಿದು  7,804.85 ಕ್ಕೆ ತಲುಪಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ಭಿತಿ  ಪ್ರಾರಂಭವಾದಾಗಿನಿಂದ  ಜಾಗತಿಕ ಮಾರುಕಟ್ಟೆಗಳು ಪಾತಾಳದತ್ತ ಕುಸಿಯುತ್ತಿವೆ. ಅಲ್ಲದೆ ಆಗಾಗಾ ಸ್ವಯಂಪ್ರೇರಿತ  ಸರ್ಕ್ಯೂಟ್ ಬ್ರೇಕರ್‌ಗಳನ್ನು ಜಾರಿಗೊಳಿಸುತ್ತಿದೆ, ಆದಾಗ್ಯೂ, ಹಣಕಾಸು ಮಾರುಕಟ್ಟೆಗಳನ್ನು ಮುಚ್ಚದೆಇರಲು ಜಗತ್ತಿನ ಬಲಾಢ್ಯ ದೇಶಗಳು ಪಣತೊಟ್ಟಿವೆ.

ಮಾರುಕಟ್ಟೆಗಳನ್ನು ಮುಚ್ಚಲು ಸಾಧ್ಯವಾಗದೆ ಇರಲು ಮೂರು ಬಲವಾದ ಕಾರಣಗಳಿದೆ.

ಒಂದು: ಒಂದೊಮ್ಮೆ ಮಾರುಕಟ್ಟೆ ಲಾಕ್‌ಡೌನ್ ಆದಲ್ಲಿ ಷೇರು ವ್ಯಾಪಾರಿಗಳಿಗೆ ತಮ್ಮ ಆಸ್ತಿಗಳನ್ನು ತಲುಪಲು ಸಾಧ್ಯವಾಗುವುದಿಲ್ಲ ಇದು ಅವರಲ್ಲಿ ಭಯಕ್ಕೆ ಕಾರಣವಾಗಬಹುದು.  ಇದನ್ನು ಬ್ಯಾಂಕಿಂಗ್ ಪರಿಭಾಷೆಯಲ್ಲಿ ಹೇಳುವುದಾದರೆ, ಇದು ಬ್ಯಾಂಕ್ ಮೆಂತಾಲಿಟಿಯಲ್ಲಿನ ಅನಿರ್ದಿಷ್ಟ ಓಟವಾಗಿದೆ. ಅಲ್ಲದೆ ಮುಂದೊಮ್ಮೆ ಎಲ್ಲಾ ಸರಿಯಾಗಿ ಸೂಚ್ಯಾಂಕಗಳು ತೆರೆದುಕೊಂಡಾಗಲೂಯ್ ಬೆಲೆಗಳು ಮತ್ತೆ ಮತ್ತೆ ಕುಸಿತಕ್ಕೆ ಈಡಾಗಲಿದೆ. ಹಾಗಾಗಿ ಬಲವಂತದಿಂದ ಮಾರುಕಟ್ಟೆಯನ್ನು ಮುಚ್ಚುವುದು ಅಪಾಯಕಾರಿ. ಕಳೆದ ವಾರ ಫಿಲಿಪೈನ್ಸ್ ಮಾರುಕಟ್ಟೆಯನ್ನು ಬಲವಂತವಾಗಿ ಒಂದು ದಿನದ ಮಟ್ಟಿಗೆ ಮುಚ್ಚಿಸಿದಾಗ ಶೇಕಡಾ 25 ರಷ್ಟು ಭಾರಿ ಕುಸಿತ ಕಂಡಿತ್ತು ಎನ್ನುಬುದನ್ನು ನಾವಿಲ್ಲಿ ನೆನೆಯಬೇಕು.

ಎರಡು: ದು ವ್ಯವಸ್ಥಿತ ಅಪಾಯಗಳಿಗೆ ಕಾರಣವಾಗುತ್ತದೆ ಮತ್ತು ದ್ರವ್ಯತೆ ಮೇಲೆ ಪರಿಣಾಮ ಬೀರಲಿದೆ. ಅಂತಿಮ ಕರೆಗಳನ್ನು (ಮಾರ್ಜಿನ್ ಕಾಲ್) ತಪ್ಪಿಸಲು ಸರ್ಕಾರಗಳು ಮಾರುಕಟ್ಟೆಗೆ ಸ್ವತ್ತುಗಳ ಮೌಲ್ಯದ ಕುರಿತು ಖಾತರಿಪಡಿಸಬೇಕು. ಆದರೆ ಈ ವಿಧಾನವು ಸಂಕೀರ್ಣ ಮತ್ತು ಅಸ್ತವ್ಯಸ್ತವಾಗಿರುವ ವ್ಯವಸ್ಥೆಗೆ ಕಾರಣವಾಗಬಹುದು ಮತ್ತು ಈ ಪ್ರಕ್ರಿಯೆಯಲ್ಲಿ ಷೇರುಗಳ ಮೌಲ್ಯವನ್ನು ಮಾತ್ರವಲ್ಲದೆ  ಸರ್ಕಾರಿ ಬಾಂಡ್‌ಗಳನ್ನು ಸಹ ದುರ್ಬಲಗೊಳಿಸಬಹುದು .

ಮೂರು: ಇದು ದೇಶದ ಆಂತರಿಕ ದೌರ್ಬಲ್ಯವನ್ನು ಸೂಚಿಸುತ್ತದೆ. ಅಂತ್ಯವಿಲ್ಲದ ಜಾಗತಿಕ ಮಾರುಕಟ್ಟೆ ಅಲ್ಲೋಲ ಕಲ್ಲೋಲದ ಹೊರತಾಗಿಯೂ ಯಾವೊಂದು ರಾಷ್ಟ್ರವೂ ಮಾರುಕಟ್ತೆ ವ್ಯವಹಾರಕ್ಕೆ ತೆರೆ ಎಳೆದಿಲ್ಲ.

"ಅದು ತಪ್ಪು ಅಭಿಪ್ರಾಯವನ್ನು ನೀಡುತ್ತದೆ. ಯಾವುದೇ ದೇಶವು ಇದನ್ನು ಮಾಡುತ್ತಿಲ್ಲ. 1929 ರಲ್ಲಿ (ಜಾಗತಿಕ ಕುಸಿತ) ಆದಾಗಲೂ  ಮಾರುಕಟ್ಟೆಗಳು ಚಾಲನೆಯಲ್ಲಿದ್ದವು. ಮಾರುಕಟ್ಟೆಯು ಪದೇ ಪದೇ ಏರಿಳಿತ ಕಾಣುತ್ತಿರುವುದು ಬಿಕ್ಕಟ್ಟಿನ ಲಕ್ಷಣಗಳಾಗಿವೆ,  ಆದರೆ ಇದು ಅಲ್ಪಕಾಲದ ಸಮಸ್ಯೆ.  ಮುಂದಿನ 15 ದಿನಗಳಲ್ಲಿ ವೈರಸ್ ಪ್ರಕರಣಗಳು ಖಂಡಿತವಾಗಿಯೂ ಕಡಿಮೆಯಾಗುತ್ತವೆ ಮತ್ತು ಮಾರುಕಟ್ಟೆಗಳು ಚೇತರಿಸಿಕೊಳ್ಳುತ್ತವೆ.ಆದ್ದರಿಂದ ಮಾರುಕಟ್ಟೆಗಳನ್ನು ಮುಚ್ಚುವುದು ಉತ್ತರವಲ್ಲ "ಎಂದು ಐಎಸ್‌ಬಿಯ ಪ್ರಸನ್ನ ತಂತ್ರ ಹೇಳಿದರು.

9/11 ರ ನಂತರ ಅಥವಾ ಡಬ್ಲ್ಯುಡಬ್ಲ್ಯು 1 ಸಮಯದಲ್ಲಿ ನಾಲ್ಕು ತಿಂಗಳ ಕಾಲ ಎನ್ವೈಎಸ್ಇ ಮುಚ್ಚಲ್ಪಟ್ಟಿತ್ತು.ಆದರೆ ಮುಂಬೈ ಭಯೋತ್ಪಾದಕ ದಾಳಿ ಮತ್ತು 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಸೆನ್ಸೆಕ್ಸ್ ಮತ್ತು ನಿಫ್ಟಿ ಮುಕ್ತವಾಗಿ ವ್ಯವಹಾರ ನಡೆಸಿದ್ದವು.

ದೇಶದಲ್ಲಿ ಕೊರೋನಾ ಹಾವಳಿ ತಡೆಗಟ್ತಲು  75 ಜಿಲ್ಲೆಗಳನ್ನು ಲಾಕ್‌ಡೌನ್  ಮಾಡಲಾಗಿದೆ. ಆದರೆ ಭಾನುವಾರ, ಸೆಬಿವಿನಿಮಯ ಕೇಂದ್ರಗಳು  ಎಂದಿನಂತೆ ವ್ಯವಹಾರ ನಡೆಸಲಿದೆ ಎಂದು ಹೇಳಿದೆ.

ಇನ್ನು ಎನ್‌ಎಸ್‌ಇ, ಬಿಎಸ್‌ಇ ಮತ್ತು ಎಂಸಿಎಕ್ಸ್ ಸೇರಿದಂತೆ ವಿನಿಮಯ ಕೇಂದ್ರಗಳು ದಲ್ಲಾಳಿಗಳಿಗೆ ವ್ಯವಹಾರದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಮನೆಯಿಂದ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com