50 ಸಾವಿರ ಕಾಲೋಚಿತ ಉದ್ಯೋಗ ಸೃಷ್ಟಿ: ಅಮೆಜಾನ್ ಇಂಡಿಯಾ

ತನ್ನ ಸೇವೆಗಳನ್ನು ಅವಲಂಬಿಸಿರುವ ಜನರ ಬೇಡಿಕೆ ಪೂರೈಸುವ ಸಲುವಾಗಿ ವಿಶೇಷವಾಗಿ ಸಾರ್ವಜನಿಕ ಸೇವೆಯಿಂದ ಹೊರಗುಳಿದಿರುವವರಿಗಾಗಿ ಸುಮಾರು 50 ಸಾವಿರ ಕಾಲೋಚಿತ ಉದ್ಯೋಗವಕಾಶಗಳನ್ನು ಸೃಷ್ಟಿಸುವುದಾಗಿ ಅಮೆಜಾನ್ ಇಂಡಿಯಾ ಶುಕ್ರವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತನ್ನ ಸೇವೆಗಳನ್ನು ಅವಲಂಬಿಸಿರುವ ಜನರ ಬೇಡಿಕೆ ಪೂರೈಸುವ ಸಲುವಾಗಿ ವಿಶೇಷವಾಗಿ ಸಾರ್ವಜನಿಕ ಸೇವೆಯಿಂದ ಹೊರಗುಳಿದಿರುವವರಿಗಾಗಿ  ಸುಮಾರು 50 ಸಾವಿರ ಕಾಲೋಚಿತ ಉದ್ಯೋಗವಕಾಶಗಳನ್ನು ಸೃಷ್ಠಿಸುವುದಾಗಿ ಅಮೆಜಾನ್ ಇಂಡಿಯಾ ಶುಕ್ರವಾರ ಹೇಳಿದೆ.

ಅಮೆಜಾನ್ ನಡಿ  ಸ್ವತಂತ್ರ ಗುತ್ತಿಗೆದಾರರಾಗಿ ಪಾರ್ಟ್ ಟೈಮ್ ಕೆಲಸ ಸೇರಿದಂತೆ ಡೆಲಿವರಿ ನೆಟ್ ವರ್ಕ್ ಹಾಗೂ ಅವರ ಅವಲಂಬಿತ ಕೇಂದ್ರಗಳಲ್ಲಿ ಇದು ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಲಿದೆ ಎಂದು ಹೇಳಿಕೆಯಲ್ಲಿ ಅಮೆಜಾನ್ ಇಂಡಿಯಾ ತಿಳಿಸಿದೆ.

ಈ ಉದ್ಯೋಗಿಗಳು ಇತರ ಸಾವಿರಾರು ಸಹವರ್ತಿಗಳನ್ನು ಸೇರಲಿದ್ದು, ಸರಕುಗಳನ್ನು ಪ್ಯಾಕ್ ಮಾಡುವ, ಗ್ರಾಹಕರಿಗೆ  ತಲುಪಿಸುವ ಕಾರ್ಯವನ್ನು ದಕ್ಷತೆಯಿಂದ ಮಾಡಲಿದ್ದಾರೆ ಎಂದು ಹೇಳಿದೆ. 

ಸಣ್ಣ ವ್ಯವಹಾರ ಹಾಗೂ ಆರ್ಥಿಕತೆಯಲ್ಲಿ ಅಮೆಜಾನ್  ಮತ್ತು ಇ- ಕಾಮರ್ಸ್ ಹೇಗೆ ನಮ್ಮ ಗ್ರಾಹಕರಿಗಾಗಿ ಹೇಗೆ ವ್ಯವಹಾರ ಮಾಡಬಹುದು ಎಂಬುದನ್ನು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಕಲಿತುಕೊಂಡಿರುವುದಾಗಿ ಅಮೆಜಾನ್ ಉಪಾಧ್ಯಕ್ಷ ಅಕಿಲ್ ಸಾಕ್ಸೆನಾ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com