ಅಕ್ಟೋಬರ್ 25 ರಿಂದ ಮಂಗಳೂರು- ಮೈಸೂರು ನಡುವೆ ಏರ್ ಇಂಡಿಯಾ ಸೇವೆ ಪ್ರಾರಂಭ

ಅಕ್ಟೋಬರ್ 25ರಿಂದ  ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ.

Published: 15th October 2020 04:49 PM  |   Last Updated: 15th October 2020 08:22 PM   |  A+A-


ಏರ್ ಇಂಡಿಯಾ

Posted By : Raghavendra Adiga
Source : Online Desk

ಮೈಸೂರು: ಅಕ್ಟೋಬರ್ 25ರಿಂದ  ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ.

ಟ್ರಯಲ್ ರನ್ ನಂತರ ಕಾರ್ಯಸಾಧ್ಯತಾ ವರದಿಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈಗ ರಸ್ತೆ ಮತ್ತು ರೈಲು ಮೂಲಕ ಸಂಪರ್ಕ ಹೊಂದಿರುವ ಈ ಎರಡು ನಗರಗಳ ನಡುವೆ ವಿಮಾನ ಸೇವೆ ಪ್ರಾರಂಭಿಸುವಂತೆ  ಲೋಕಸಭಾ ಸದಸ್ಯ ಪ್ರತಾಪ್ ಸಿಂಹ  ಮತ್ತು ಕೆಲವು ಕೈಗಾರಿಕೋದ್ಯಮಿಗಳು ವೈಮಾನಿಕ ಸಂಸ್ಥೆಗೆ ಮನವಿ ಮಾಡಿದ್ದರು.

ಏರ್ ಇಂಡಿಯಾ ಬೆಂಗಳೂರಿನಿಂದ ಮಂಗಳುರಿಗೆ ಬೆಳಿಗ್ಗೆ 6.50 ಕ್ಕೆ ಬರುವ ವಿಮಾನವನ್ನೇ ಮೈಸೂರಿನ ಕಡೆ ತಿರುಗಿಸುವ ಸೂಚನೆ ಇದೆ. ಈ ವಿಮಾನ ಬೆಳಿಗ್ಗೆ  7.55 ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 8.50 ಕ್ಕೆ ಮಂಗಳೂರು ತಲುಪಲಿದೆ.

Stay up to date on all the latest ವಾಣಿಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp