ಶೇ. 27 ರಷ್ಟು ಬಿಪಿಓಗಳು ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಮಾದರಿಗೆ ಬದಲಾಗುವ ಸಾಧ್ಯತೆ: ಸಮೀಕ್ಷೆ

ಕೋವಿಡ್-19 ಸಾಂಕ್ರಾಮಿಕ ರೋಗದ ನಂತರದ ವಾತಾವರಣದಲ್ಲಿ ಶೇ.27 ರಷ್ಟು ಬಿಪಿಓ ಕಂಪನಿಗಳು ವರ್ಕ್ ಫ್ರಮ್ ಹೋಮ್ ಮಾದರಿಗೆ ಶಾಶ್ವತವಾಗಿ ಬದಲಾಗುವ ಸಾಧ್ಯತೆಯಿರುವುದಾಗಿ ಒಜೊನೆಟಲ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ನಂತರದ ವಾತಾವರಣದಲ್ಲಿ ಶೇ.27 ರಷ್ಟು ಬಿಪಿಓ ಕಂಪನಿಗಳು ವರ್ಕ್ ಫ್ರಮ್ ಹೋಮ್ ಮಾದರಿಗೆ ಶಾಶ್ವತವಾಗಿ ಬದಲಾಗುವ ಸಾಧ್ಯತೆಯಿರುವುದಾಗಿ ಒಜೊನೆಟಲ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗವು ಕಾಲ್ ಸೆಂಟರ್ ಉದ್ಯಮದ ಮೇಲೆ ಬೀರಿರುವ ಪರಿಣಾಮವನ್ನು ಎತ್ತಿ ತೋರಿಸಿರುವ ಸಮೀಕ್ಷೆಯು, ಸಾಂಕ್ರಾಮಿಕ ರೋಗದ ಸಂದರ್ಭದದಲ್ಲಿ ಕಾಲ್ ಸೆಂಟರ್ ಏಂಜೆಟರ ಉತ್ಪಾದಕತೆಯ ಶೇಕಡಾ 53 ರಷ್ಟು ವ್ಯವಹಾರಗಳು ಕುಸಿತಕ್ಕೆ ಸಾಕ್ಷಿಯಾಗಿದೆ ಎಂದು ವರದಿ ಮಾಡಿದೆ.

ಮನೆಯಿಂದ ಕೆಲಸ ಮಾಡುವಾಗ ಇಂಟರ್ ನೆಟ್ ಸಂಪರ್ಕತೆ, ಟೆಲಿಕಾಮ್ ಸಮಸ್ಯೆ, ಖಾಸಗಿಯತೆ ಕೊರತೆ, ಜಾಗತಿ, ಡೆಸ್ಕ್ ಟಾಪ್ , ಲ್ಯಾಪ್ ಟಾಪ್ ಗಳ ಕೊರತೆಯಿಂದಾಗಿ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಪಿಓ ಉತ್ಪಾದಕತೆಯಲ್ಲಿ ಕುಸಿತವಾಗಿದೆ.

ಇಂಟರ್ ನೆಟ್ ಸಂಪರ್ಕತೆ ಉತ್ಪಾದನೆ ಮೇಲೆ ದೊಡ್ಡ ಅಡ್ಡಿಯನ್ನುಂಟು ಮಾಡಿದ್ದಾಗಿ ಶೇ. 71ರಷ್ಟು ಕಾಲ್ ಸೆಂಟರ್ ಏಜೆಂಟರು ತಿಳಿಸಿದ್ದಾರೆ. ಆದಾಗ್ಯೂ, ಹಲವು ಸವಾಲುಗಳ ನಡುವೆಯೂ ಬಹುತೇಕ ಕಂಪನಿಗಳು ಸಿಬ್ಬಂದಿಯ ಆರೋಗ್ಯದಿಂದಾಗಿ ವರ್ಕ್ ಫ್ರಮ್ ಹೋಮ್  ಅನುಸರಿಸುತ್ತಿವೆ.

ಸಮೀಕ್ಷೆಯ ಪ್ರಕಾರ, ಶೇಕಡಾ 55 ರಷ್ಟು ಕಾಲ್ ಸೆಂಟರ್ ಗಳು ಏಜೆಂಟರಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುತ್ತಿದ್ದರೆ, ಶೇಕಡಾ 16 ರಷ್ಟು ಜನರು ಕಚೇರಿಗಳನ್ನು ತೆರೆಯುತ್ತಿಲ್ಲ ಮತ್ತು ಮನೆಯಿಂದ ಕೆಲಸವನ್ನು ಕಡ್ಡಾಯವಾಗಿ ಇಟ್ಟುಕೊಳ್ಳುತ್ತಿಲ್ಲ.

ಧೀರ್ಘ ಕಾಲೀನ ಕಾರ್ಯತಂತ್ರವಾಗಿ ಶೇ.27 ರಷ್ಟು ಕಂಪನಿಗಳು ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಮಾದರಿಗಳಿಗೆ ಬದಲಾಗುವ ನಿರೀಕ್ಷೆಯಿದೆ. ಆದಾಗ್ಯೂ, ಇಷ್ಟೇ ಪ್ರಮಾಣದ ಕಂಪನಿಗಳು ಕಚೇರಿಗಳಿಗೆ ಮರಳಲು ಬಯಸುತ್ತವೆ ಎಂದು ಸಮೀಕ್ಷೆ ತಿಳಿಸಿದೆ.

ಮಾರ್ಚ್‌ನಲ್ಲಿ ಲಾಕ್‌ಡೌನ್ ಪ್ರಾರಂಭವಾದಾಗ, ವ್ಯವಹಾರ ಮುಂದುವರಿಕೆಗೆ ನೆರವಾಗಲು ವರ್ಕ್ ಫ್ರಮ್ ಹೋಮ್ ಗೆ ಬದಲಾಯಿಸುವಂತೆ ನಮ್ಮ ಗ್ರಾಹಕರಲ್ಲಿ ಅನೇಕ ಏಜೆಂಟರಿಗೆ ಹೇಳಿರುವುದಾಗಿ ಓಜೊನೆಟಲ್ ಮುಖ್ಯ ಅನ್ವೇಷಕಾಧಿಕಾರಿ ಚೈತನ್ಯ ಚೊಕ್ಕರೆಡ್ಡಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com