ಅಮೆಜಾನ್ ಆನ್ ಲೈನ್ ತಾಣ ಬಳಸಿ ಗಾಂಜಾ ಕಳ್ಳಸಾಗಣೆ: ಸಂಸ್ಥೆ ಪ್ರತಿಕ್ರಿಯೆ

ಶನಿವಾರ ಮಧ್ಯಪ್ರದೇಶ ಪೊಲೀಸರು ಆನ್ ಲೈನ್ ಗಾಂಜಾ ಮಾರಾಟ ಜಾಲವೊಂದನ್ನು ಭೇದಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ ತನ್ನ ಆನ್ ಲೈನ್ ವೇದಿಕೆಯನ್ನು ಗಾಂಜಾ ಕಳ್ಳಸಾಗಣೆ ಮಾಡಲು ಬಳಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ವಿಚಾರಣೆ ನಡೆಸಲಾಗುತ್ತಿರುವುದಾಗಿ ಪ್ರಕಟಣೆ ನೀಡಿದೆ.

ಶನಿವಾರ ಮಧ್ಯಪ್ರದೇಶ ಪೊಲೀಸರು ಆನ್ ಲೈನ್ ಗಾಂಜಾ ಮಾರಾಟ ಜಾಲವೊಂದನ್ನು ಭೇದಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಅಲ್ಲದೆ ಕಾರ್ಯಾಚರಣೆ ವೇಳೆ ಪತ್ತೆಯಾಗಿದ್ದ 20 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು. 

ಬಂಧಿತ ಆರೋಪಿಗಳು ಅಮೆಜಾನ್ ಆನ್ ಲೈನ್ ಮಾರಾಟ ತಾಣವನ್ನು ತಮ್ಮ ದಂಧೆಗೆ ಬಳಸಿಕೊಳ್ಳುತ್ತಿದ್ದಿದ್ದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಈ ವಿಚಾರ ತಮ್ಮ ಗಮನಕ್ಕೆ ಬಂದಿದ್ದು ಈ ಬಗ್ಗೆ ಆಂತರಿಕ ತನಿಖೆ ನಡೆಸಲಾಗುವುದಾಗಿ ಅಮೆಜಾನ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com