ಪ್ರಿಪೇಯ್ಡ್ ಗ್ರಾಹಕರಿಗೆ ಏರ್ಟೆಲ್ ಶಾಕ್: ಶೇ.20 ರಿಂದ 25ರಷ್ಟು ದರ ಏರಿಕೆ!
ದೇಶದ ಅತೀ ದೊಡ್ಡ ಮೊಬೈಲ್ ಸೇವಾ ಸಂಸ್ಥೆ ಏರ್ಟೆಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ಕೊಟ್ಟಿದ್ದು, ಶೇ.20 ರಿಂದ 25ರಷ್ಟು ದರ ಏರಿಕೆ ಘೋಷಣೆ ಮಾಡಿದೆ.
Published: 22nd November 2021 11:51 AM | Last Updated: 22nd November 2021 01:20 PM | A+A A-

ಸಂಗ್ರಹ ಚಿತ್ರ
ನವದೆಹಲಿ: ದೇಶದ ಅತೀ ದೊಡ್ಡ ಮೊಬೈಲ್ ಸೇವಾ ಸಂಸ್ಥೆ ಏರ್ಟೆಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ಕೊಟ್ಟಿದ್ದು, ಶೇ.20 ರಿಂದ 25ರಷ್ಟು ದರ ಏರಿಕೆ ಘೋಷಣೆ ಮಾಡಿದೆ.
ಈ ಕುರಿತು ಸೋಮವಾರ ಭಾರ್ತಿ ಏರ್ಟೆಲ್ ಅಧಿಕಾರಿಗಳು ದರ ಏರಿಕೆ ಘೋಷಣೆ ಮಾಡಿದ್ದು, ಕರೆಗಳು, ಅನಿಯಮಿತ ಕರೆ ಮತ್ತು ಡಾಟಾ ಪ್ಲಾನ್ ಗಳು ಮತ್ತು ಡೇಟಾ ಟಾಪ್ ಅಪ್‌ಗಳಲ್ಲಿ ಶೇ.20 ರಿಂದ 2ರಷ್ಟು ದರ ಏರಿಕೆ ಕುರಿತು ಘೋಷಣೆ ಮಾಡಿದೆ.
ಇದನ್ನೂ ಓದಿ: ಜಿಯೋಫೋನ್ ನೆಕ್ಸ್ಟ್: ಹೊಸ ಫೋನಿನಲ್ಲಿ ಏನೆಲ್ಲ ಇದೆ? ಬೆಲೆ ಎಷ್ಟು? ವಿವರ ಹೀಗಿದೆ...
ಮೊಬೈಲ್ ಸರಾಸರಿ ಆದಾಯ ಪ್ರತಿ ಬಳಕೆದಾರರಿಗೆ (ARPU) ರೂ 200 ಮತ್ತು ಅಂತಿಮವಾಗಿ ರೂ 300 ಆಗಿರಬೇಕು ಎಂದು ಕಂಪನಿ ಹೇಳುತ್ತಿದ್ದು, ಇದರಿಂದಾಗಿ ಆರ್ಥಿಕವಾಗಿ ಆರೋಗ್ಯಕರ ವ್ಯಾಪಾರ ಮಾದರಿಯನ್ನು ಅನುಮತಿಸುವ ಬಂಡವಾಳದ ಮೇಲೆ ಸಮಂಜಸವಾದ ಲಾಭವನ್ನು ನೀಡುತ್ತದೆ. ಈ ಮಟ್ಟದ ARPU ನೆಟ್‌ವರ್ಕ್‌ಗಳು ಮತ್ತು ಸ್ಪೆಕ್ಟ್ರಮ್‌ನಲ್ಲಿ ಅಗತ್ಯವಿರುವ ಗಣನೀಯ ಹೂಡಿಕೆಗಳನ್ನು ಸಕ್ರಿಯಗೊಳಿಸುತ್ತದೆ ಎಂದು ನಾವು ನಂಬುತ್ತೇವೆ. ಇನ್ನೂ ಮುಖ್ಯವಾಗಿ, ಇದು ಭಾರತದಲ್ಲಿ 5G ತರಂಗಾಂತರ ಜಾರಿಗೆ ತರಲು ಏರ್‌ಟೆಲ್‌ಗೆ ಬೆಂಬಲ ನೀಡುತ್ತದೆ ಎಂದು ಏರ್ಟೆಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: 5ಜಿ ನೆಟ್ವರ್ಕ್ ಹೊಂದಿರಲಿರುವ "ಜಿಯೋ ಫೋನ್ ನೆಕ್ಸ್ಟ್" ಸೆಪ್ಟೆಂಬರ್ ನಲ್ಲಿ ಬಿಡುಗಡೆ
ಇದರ ಮೊದಲ ಹೆಜ್ಜೆಯಾಗಿ, ಕಂಪನಿಯು ನವೆಂಬರ್ ತಿಂಗಳಿನಲ್ಲಿ ದರಗಳನ್ನು ಮರು ಪರಿಷ್ಕರಿಸಿದ್ದು, ಆ ಮೂಲಕ ಶುಲ್ಕ ಪರಿಷ್ಕರಣೆ ಹಂತದಲ್ಲಿ ತಾನೇ ಮೊದಲ ಹೆಜ್ಜೆಯನ್ನಿಟ್ಟಿದೆ. ಹೊಸ ದರಗಳು ನವೆಂಬರ್ 26, 2021 ರಿಂದ ಜಾರಿಗೆ ಬರುತ್ತವೆ.
ದರಗಳ ವಾಯ್ಸ್ ಕಾಲ್ ಪ್ಲಾನ್ ಗಳಲ್ಲಿ ಹೊಸ ದರವು ರೂ 99 ಆಗಿದ್ದು, ಪ್ರಸ್ತುತ ರೂ 79 ರೂಗಳ ಪ್ಲಾನ್ ನಲ್ಲಿ ವಿರುದ್ಧ 28 ದಿನಗಳ ವ್ಯಾಲಿಡಿಟಿ ಇದೆ. ರೂ 99 ಮೌಲ್ಯದ 50 ಪ್ರತಿಶತ ಹೆಚ್ಚಿನ ಟಾಕ್‌ಟೈಮ್ ಮೌಲ್ಯ, 200 MB ಡೇಟಾ, 1p/ಸೆಕೆಂಡ್ ಕಾಲ್ ರೇಟ್ ಅನ್ನು ಏರ್ಟೆಲ್ ನೀಡಲಿದೆ ಎಂದು ಹೇಳಲಾಗಿದೆ.