ಎರಡು ವಿದೇಶಿ ಸೋಲಾರ್ ಸಂಸ್ಥೆಗಳು ಮುಕೇಶ್ ಅಂಬಾನಿ ರಿಲಯನ್ಸ್ ವಶ

ಆರ್ ಇ ಸಿ ಸಂಸ್ಥೆಯನ್ನು ರಿಲಯನ್ಸ್ 5.8 ಸಾವಿರ ಕೋಟಿ ರೂ. ಕೊಟ್ಟು ಖರೀದಿಸಿದ್ದರೆ ಸ್ಟೆರ್ಲಿಂಗ್ ಅಂಡ್ ವಿಲ್ಸನ್ ಖರೀದಿಗೆ ರಿಲಯನ್ಸ್ 2.8 ಸಾವಿರ ಕೋಟಿ ರೂ. ನೀಡಿದೆ.
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಎರಡು ಪ್ರಮುಖ ವಿದೇಶಿ ಸೋಲಾರ್ ಉಪಕರಣ ತಯಾರಕ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ. ನಾರ್ವೆ ಮೂಲದ ಆರ್ ಇ ಸಿ, ಸ್ಟೆರ್ಲಿಂಗ್ ಅಂಡ್ ವಿಲ್ಸನ್ ಸಂಸ್ಥೆಗಳಲ್ಲಿ ಅತ್ಯಧಿಕ ಪಾಲನ್ನು ರಿಲಯನ್ಸ್ ಖರೀದಿಸುತ್ತಿದೆ. 

ಆರ್ ಇ ಸಿ ಸಂಸ್ಥೆಯನ್ನು ರಿಲಯನ್ಸ್ 5.8 ಸಾವಿರ ಕೋಟಿ ರೂ. ಕೊಟ್ಟು ಖರೀದಿಸಿದ್ದರೆ ಸ್ಟೆರ್ಲಿಂಗ್ ಅಂಡ್ ವಿಲ್ಸನ್ ಖರೀದಿಗೆ ರಿಲಯನ್ಸ್ 2.8 ಸಾವಿರ ಕೋಟಿ ರೂ. ನೀಡಿದೆ.

ಆರ್ ಇ ಸಿ ಸಂಸ್ಥೆ ಪೇಟೆಂಟ್ ಹೊಂದಿರುವ ತಂತ್ರಜ್ನಾನವನ್ನು ಹೊಂದಿದ್ದು ಅದರಿಂದಾಗಿ ರಿಲಯನ್ಸ್ ಸೋಲಾರ್ ಉದ್ಯಮ ರಫ್ತು ಮಾರುಕಟ್ತೆಗೆ ಕಾಲಿಡಲು ಸುಲಭವಾಗಲಿದೆ ಎನ್ನಲಾಗಿದೆ. ಈ ಹಿಂದೆ ಆರ್ ಇ ಸಿ ಸಂಸ್ಥೆ ಯುರೋಪ್ ಮತ್ತು ಅಮೆರಿಕ ದೇಶಗಳಿಗೆ ಸೋಲಾರ್ ತಂತ್ರಜ್ನಾನ ರಫ್ತು ಮಾಡುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com