ಭಾರತದ ಆರ್ಥಿಕತೆ ಚೇತರಿಸಿಕೊಂಡಿದೆಯೇ: ವಿ ಶೇಪ್ ಪ್ರಗತಿ ಎಷ್ಟು ನಿಜ ಎಷ್ಟು ಸುಳ್ಳು?

ಕಳೆದ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಭಾರದ ಜಿಡಿಪಿ ಶೇ.25 ಪ್ರತಿಶತದಷ್ಟು ಕುಸಿತ ಕಂಡಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇತ್ತೀಚಿಗೆ ಭಾರತದ ಆರ್ಥಿಕತೆ ವಿ ಶೇಪ್ ಪ್ರಗತಿ ಕಾಣುತ್ತಿದೆ ಎನ್ನುವ ಮಾತುಗಳು ಸರ್ಕಾರ ಮಟ್ಟದಲ್ಲಿ ಕೇಳಿಬಂದಿದ್ದವು. ಭಾರತೀಯ ಅಂಕಿ ಅಂಶ ಇಲಾಖೆ ಕಚೇರಿ ಇತ್ತೀಚಿಗೆ 2021- 22 ಮೊದಲ ತ್ರೈಮಾಸಿಕ ಅವಧಿಯ(ಎಪ್ರಿಲ್- ಜೂನ್)  ಜಿಡಿಪಿ ಯನ್ನು ಬಹಿರಂಗಪಡಿಸಿತ್ತು. 

ಅದರಲ್ಲಿ ಭಾರತದ ಜಿಡಿಪಿಯನ್ನು ಕಳೆದ ಬಾರಿಗೆ ಹೋಲಿಸಿದರೆ ಶೇ.20.1 ರಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿತ್ತು. ಕಳೆದ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಭಾರದ ಜಿಡಿಪಿ ಶೇ.25 ಪ್ರತಿಶತದಷ್ಟು ಕುಸಿತ ಕಂಡಿತ್ತು. ಭಾರತದ ಆರ್ಥಿಕತೆ ಸ್ವಾತಂತ್ರ್ಯ ಪೂರ್ವದ ದಿನಗಳಿಗೆ ಹಿಂದಿರುಗಿತ್ತು.   

ಮುಖ್ಯ ಆರ್ಥಿಕ ಸಲಹಾಗಾರರು ಅಂಕಂಶ ಇಲಾಖೆ ನೀಡಿದ ಮಾಹಿತಿ ಆಧರಿಸಿ ಭಾರತ ವಿ ಶೇಪ್ ಪ್ರಗತಿ ಕಾಣುತ್ತಿದೆ ಎಂಡು ಉದ್ಗರಿಸಿದ್ದರು. ಭಾರತ ಆರ್ಥಿಕ ಸಂಕಷ್ಟದಿಂದ ಮೇಲೆ ಬಂದಿದ್ದೇ ಅಲ್ಲದೆ, ಪೆಟ್ರೋಲಿಯಂ ಮತ್ತು ಆಟೊಮೊಬೈಲ್ ಕ್ಷೇತ್ರದಲ್ಲಿ ಪ್ರಗತಿ ದಾಖಲಿಸಿದೆ ಎಂದಿದ್ದರು.

ಅಸಲಿಗೆ ಜಿಡಿಪಿಯನ್ನು ಹೋಲಿಕೆ ಮಾಡಬೇಕಿರುವುದು ಕಳೆದ ವರ್ಷಕ್ಕಲ್ಲ, ಕೊರೊನಾ ಪೂರ್ವಕಾಲದ ಜಿಡಿಪಿಗೆ ಎಂದು ಎಂದು ಆರ್ಥಿಕ ತಜ್ನ, ಜೆ ಎನ್ ಯು ಉಪನ್ಯಾಸಕ ಬಿಸ್ವಜಿತ್ ಧರ್  ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಪೂರ್ವ ಕಾಲಕ್ಕೆ ಹೋಲಿಸಿದರೆ ಭಾರತದ ಜಿಡಿಪಿ ಚೇತರಿಕೆಗೆ ಸಾಗಬೇಕಾದ ಹಾದಿ ದೂರವಿದೆ ಎಂದಿದ್ದಾರೆ ಆರ್ಥಿಕ ಪರಿಣತರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com