ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕಕ್ಕೆ ವಿಶ್ವದಲ್ಲೇ ಅತ್ಯಧಿಕ ಮಹಿಳಾ ಉದ್ಯೋಗಿಗಳಿರುವ ಕಾರ್ಖಾನೆ ಗೌರವ: ಸಿಇಒ ಗುರಿ

ಭಾರತ ಜಗತ್ತಿನಲ್ಲೇ ಮುಂಚೂಣಿ ಉತ್ಪಾದನಾ ರಾಷ್ಟ್ರವಾಗಬೇಕಾದರೆ ಮಹಿಳೆಯರಿಗೆ ತರಬೇತಿ ನೀಡಿ ಅವರನ್ನು ಎಲ್ಲಾ ಬಗೆಯ ತಾಂತ್ರಿಕ ಕೆಲಸಗಳಿಗೂ ತಯಾರು ಮಾಡಬೇಕಾದ ಅಗತ್ಯವಿದೆ ಎಂದು ಓಲಾ ಸಂಸ್ಥಾಪಕ ಭವೀಶ್ ಒತ್ತಿ ಹೇಳಿದ್ದಾರೆ. 
ಓಲಾ ಎಲೆಕ್ಟ್ರಿಕ್ ಸ್ಕೂಟರ್
ಓಲಾ ಎಲೆಕ್ಟ್ರಿಕ್ ಸ್ಕೂಟರ್

ಬೆಂಗಳೂರು: ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿರುವ ಕಾರ್ಖಾನೆ ಎನ್ನುವ ಗೌರವಕ್ಕೆ ಭಾರತದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ ಪಾತ್ರವಾಗಲಿದೆ ಎಂದು ಓಲಾ ಸಂಸ್ಥಾಪಕ ಭವೀಶ್ ಅಗ್ಗರ್ವಾಲ್ ಹೇಳಿದ್ದಾರೆ.

ಭಾರತ ಯೋಜನೆ ಸಫಲವಾಗಲು ಆತ್ಮನಿರ್ಭರ್ ಮಹಿಳೆ ಯೋಜನೆ ಕಾರ್ಯಗತಗೊಳ್ಳಬೇಕು ಎಂಬುದು ಅವರ ಅಭಿಪ್ರಾಯ. ಮುಂಬರುವ ದಿನಗಳಲ್ಲಿ ಘಟಕವನ್ನು ಪೂರ್ತಿಯಗಿ ಮಹಿಳೆಯರೇ ನಿರ್ವಹಿಸುವ ವ್ಯವಸ್ಥೆ ತಮ್ಮ ಘಟಕದಲ್ಲಿ ಜಾರಿಗೆ ಬರಲಿದೆ ಎಂದವರು ಹೇಳಿದ್ದಾರೆ. 

ಭಾರತ ಜಗತ್ತಿನಲ್ಲೇ ಉತ್ಪಾದನಾ ರಾಷ್ಟ್ರವಾಗಬೇಕಾದರೆ ಮಹಿಳೆಯರಿಗೆ ತರಬೇತಿ ನೀಡಿ ಅವರನ್ನು ಎಲ್ಲಾ ಕೆಲಸಗಳಿಗೂ ತಯಾರು ಮಾಡಬೇಕಾದ ಅಗತ್ಯವಿದೆ ಎಂದು ಭವೀಶ್ ಒತ್ತಿ ಹೇಳಿದ್ದಾರೆ. 

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಎರಡು ಮಾದರಿಗಳಲ್ಲಿ ಲಭ್ಯವಾಗಲಿದೆ. ಎಸ್1 ಮತ್ತು ಎಸ್1 ಪ್ರೊ. ಮೊದಲ ಮಾದರಿಯ ಬೆಲೆ 99,999 ರೂ. ಎರಡನೆಯ ಮಾದರಿ ಬೆಲೆ 1,29,000 ರೂ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸೆಪ್ಟೆಂಬರ್ 8ರಂದು ಬಿಡುಗಡೆಯಾಗಬೇಕಿತ್ತು. ಆದರೆ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟು ಇದೀಗ ಸೆಪ್ಟೆಂಬರ್ 15ರಂದು ಬಿಡುಗಡೆಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ. ಸ್ಕೂಟರ್ ಪೂರ್ತಿ ಚಾರ್ಜ್ ಮಾಡಿದರೆ 181 ಕಿ.ಮೀ ಮೈಲೇಜ್ ದೊರೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com