ಒಂದೇ ದಿನ 600 ಕೋಟಿ ರೂ. ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್ ಮಾರಿದ ಓಲಾ: ಸಿಇಒ ಭವೀಶ್ ಘೋಷಣೆ

ಓಲಾ ಸ್ಕೂಟರ್ ಬುಕ್ ಮಾಡಲು ಇಂದು ಗುರುವಾರ ಮಧ್ಯರಾತ್ರಿಯೇ ಗಡುವು ನಿಗದಿಪಡಿಸಲಾಗಿದೆ. ಅಷ್ಟರೊಳಗೆ ಗ್ರಾಹಕರು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ ಮಾಡಬಹುದು. 
ಓಲಾ ಇ ಸ್ಕೂಟರ್
ಓಲಾ ಇ ಸ್ಕೂಟರ್

ಬೆಂಗಳೂರು: ಮೊದಲ ದಿನವೇ ಓಲಾ ಸಂಸ್ಥೆ 600 ಕೋಟಿ ರೂ. ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್ ಮಾರಿದೆ ಎಂದು ಸಿಇಒ ಭವೀಶ್ ಅಗ್ಗರ್ವಾಲ್ ಹೇಳಿದ್ದಾರೆ. 

ಓಲಾ ಸ್ಕೂಟರ್ ಬುಕ್ ಮಾಡಲು ಇಂದು ಗುರುವಾರ ಮಧ್ಯರಾತ್ರಿಯೇ ಗಡುವು ನಿಗದಿಪಡಿಸಲಾಗಿದೆ. ಅಷ್ಟರೊಳಗೆ ಗ್ರಾಹಕರು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ ಮಾಡಬಹುದು. 

ಓಲಾ ತನ್ನ ಎರಡು ಮಾದರಿ ಎಲೆಕ್ಟ್ರಿಕ್ ಸ್ಕೂಟರ್ ಗಳಾದ ಎಸ್1 ಮತ್ತು ಎಸ್2 ಅನ್ನು ಬುಧವಾರದಂದ ಕಾಯ್ದಿರಿಸಲು ಅವಕಾಶ ಮಾಡಿಕೊಟ್ಟಿತ್ತು.    

ಈ ಹಿಂದೆ ಓಲಾದ ಇ ಸ್ಕೂಟರ್ ಸೆ.8ರಂದು ಮಾರಾತಕ್ಕೆ ಲಭ್ಯವಾಗುತ್ತದೆಂದು ಸಂಸ್ಥೆ ತಿಳಿಸಿತ್ತು. ಆದರೆ ತಾಂತ್ರಿಕ ದೋಷದ ಕಾರಣ ಸೆ.15ಕ್ಕೆ ಮುಂದೂಡಲಾಯಿತು. 

ಗ್ರಾಹಕರು ಓಲಾ ಇ ಸ್ಕೂಟರ್ ಅನ್ನು ಓಲಾ ಆಪ್ ಮುಖಾಂತರವೇ ಬುಕ್ ಮಾಡಬೇಕು. ಸದ್ಯ ಓಲಾ ವೆಬ್ ಸೈಟಿನಲ್ಲಿ ಇ ಸ್ಕೂಟರ್ ಬುಕ್ ಮಾಡುವ ಸವಲತ್ತನ್ನು ನೀಡಲಾಗಿಲ್ಲ. ಓಲಾ ಬುಕ್ ಮಾಡುವಾಗ ಗ್ರಾಹಕರು 20,000 ರೂ. ಮುಂಗಡ ಹಣ ತೆರಬೇಕು.

ಆರ್ಡರ್ ಪ್ರಕಾರ ಸರದಿಯಂತೆ ಅಕ್ಟೋಬರ್ ನಂತರ ಇ ಸ್ಕೂಟರ್ ಡೆಲಿವರಿ ಪ್ರಾರಂಭಗೊಳ್ಳಲಿದೆ. ಬುಕ್ ಮಾಡಿದ 72 ಗಂಟೆಗಳ ನಂತರ ಗ್ರಾಹಕರಿಗೆ ಸ್ಕೂಟರ್ ಯಾವಾಗ ಡೆಲಿವರಿ ಮಾಡಲಾಗುವುದು ಎನ್ನುವ ಸಂದೇಶವನ್ನು ಸಂಸ್ಥೆ ಕಳಿಸುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com