ಬೆಂಗಳೂರು: ಪ್ರಪಂಚದಲ್ಲೇ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಎನ್ನುವ ಹೆಸರಿಗೆ ಪಾತ್ರವಾಗಿದ್ದ ಜಿಯೊ ಫೋನ್ 'ನೆಕ್ಸ್ಟ್' ಗೆ ಮೈಕ್ರೊ ಚಿಪ್ ಕೊರತೆ ಉಂತಾಗಿದೆ. ಈ ಕಾರಣಕ್ಕೆ ಹೊಸ ಮಾಡೆಲ್ ಜಿಯೊ ಫೋನ್ ಬಿಡುಗಡೆ ವಿಳಂಬವಾಗಲಿದೆ. ರಿಲಯನ್ಸ್ ಜಿಯೊ ಮತ್ತು ಗೂಗಲ್ ಸಹಯೋಗದಲ್ಲಿ ಈ ಫೋನ್ ತಯಾರಾಗುತ್ತಿದೆ.
ಇದನ್ನೂ ಓದಿ: 5ಜಿ ನೆಟ್ವರ್ಕ್ ಹೊಂದಿರಲಿರುವ "ಜಿಯೋ ಫೋನ್ ನೆಕ್ಸ್ಟ್" ಸೆಪ್ಟೆಂಬರ್ ನಲ್ಲಿ ಬಿಡುಗಡೆ
ಸದ್ಯ ಲಭ್ಯವಿರುವ ಮಾಹಿತಿಯಂತೆ ದೀಪಾವಳಿಯ ಸಮಯದಲ್ಲಿ ಜಿಯೊ ಸ್ಮಾರ್ಟ್ ಫೋನ್ ಬಿಡುಗಡೆಯಾಗಲಿದೆ. ಈ ಬಜೆಟ್ ಸ್ಮಾರ್ಟ್ ಫೋನ್ ಬೆಲೆ 3,500 ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಂಸ್ಥೆ ಇದುವರೆಗೂ ಅಧಿಕೃತ ಬೆಲೆ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಕೋವಿಡ್ ಸಂಕಷ್ಟ: ಜಿಯೋ ಫೋನ್ ಬಳಕೆದಾರರಿಗೆ ಪ್ರತಿ ತಿಂಗಳು 300 ನಿಮಿಷಗಳ ಔಟ್ ಗೋಯಿಂಗ್ ಕರೆ ಉಚಿತ
ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಸೆಮಿಕಂಡಕ್ಟರ್ ಮೈಕ್ರೊ ಚಿಪ್ ಗಳ ಕೊರತೆ ಕಂಡುಬಂಡಿದೆ. ಈ ಹಿಂದೆ ಈ ಮೊಬೈಲ್ ಬೆಲೆ 3,500 ಎಂದು ಹೇಳಲಾಗಿತ್ತಾದರೂ, ಇದೀಗ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ಮೊಬೈಲ್ ಫೋನ್ ಬೆಲೆಯೂ ಏರಿಕೆ ಕಾಣಲಿದೆ ಎನ್ನಲಾಗುತ್ತಿದೆ.
ಇದೇ ವೇಳೆ ಚಿಪ್ ಕೊರತೆಯಿಂದ ಇತರೆ ಸಂಸ್ಥೆಗಳ ಮೊಬೈಲ್ ಫೋನ್ ಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪರಿಣತರು ಆಂದಾಜಿಸಿದ್ದಾರೆ.
ಇದನ್ನೂ ಓದಿ: ದೆಹಲಿ ರೈತರ ಪ್ರತಿಭಟನೆ ಬೆಂಬಲಿಸಿ ಮೈಸೂರಿನಲ್ಲಿ ರಿಲಯನ್ಸ್ ಮುಂದೆ ರೈತರಿಂದ ಜಿಯೋ ಸಿಮ್ ತಿರಸ್ಕಾರ ಚಳುವಳಿ