ಭಾರತ-ರಷ್ಯಾ
ವಾಣಿಜ್ಯ
ರಷ್ಯಾಗೆ ಭಾರತದ ರಫ್ತು ಶೇ.3.7 ಏರಿಕೆ; ಅಕ್ಟೋಬರ್ ನಲ್ಲಿ 280 ಮಿಲಿಯನ್ ಡಾಲರ್ ಮೌಲ್ಯದ ರಫ್ತು
ಉಕ್ರೇನ್ ಮೇಲೆ ಯುದ್ಧ ಘೊಷಿಸಿರುವ ಪರಿಣಾಮ ಈಗಾಗಲೇ ಹಲವು ರೀತಿಯ ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾ, ಗ್ರಾಹಕ ಉತ್ಪನ್ನಗಳಿಗಾಗಿ ಭಾರತದ ಮೇಲೆ ಹೆಚ್ಚು ಅವಲಂಬನೆ ತೋರುತ್ತಿದೆ.
ನವದೆಹಲಿ: ಉಕ್ರೇನ್ ಮೇಲೆ ಯುದ್ಧ ಘೊಷಿಸಿರುವ ಪರಿಣಾಮ ಈಗಾಗಲೇ ಹಲವು ರೀತಿಯ ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾ, ಗ್ರಾಹಕ ಉತ್ಪನ್ನಗಳಿಗಾಗಿ ಭಾರತದ ಮೇಲೆ ಹೆಚ್ಚು ಅವಲಂಬನೆ ತೋರುತ್ತಿದೆ. ಪರಿಣಾಮ ರಷ್ಯಾಗೆ ಭಾರತದ ರಫ್ತು ಅಕ್ಟೋಬರ್ ತಿಂಗಳಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡಿದೆ.
ಅಕ್ಟೋಬರ್ ನಲ್ಲಿ ಏರಿಕೆಯಾಗಿರುವ ರಫ್ತು ಪ್ರಮಾಣ ಸತತ ಎರಡನೇ ತಿಂಗಳ ಏರಿಕೆಯಾಗಿದೆ. ಈ ಹಿಂದೆ ಮಾರ್ಚ್ ನಿಂದ 6 ತಿಂಗಳವರೆಗೆ ಸತತ ಇಳಿಕೆ ಕಂಡಿತ್ತು ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಡೇಟಾದಲ್ಲಿ ತೋರಿದೆ.
ತರಕಾರಿ, ಟೀ, ಕಾಫಿ, ರಾಸಾಯನಿಕಗಳು ಹಾಗೂ ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಫ್ತು ಹೆಚ್ಚಾಗಿದೆ.
ಇದಕ್ಕೂ ಮುನ್ನ ಸೆಪ್ಟೆಂಬರ್ ನಲ್ಲಿ ಭಾರತ ರಷ್ಯಾಗೆ 297.61 ಬಿಲಿಯನ್ ಡಾಲರ್ ಮೊತ್ತದ ಸರಕು ರಫ್ತು ಮಾಡುವುದರ ಮೂಲಕ ಶೇ.6 ರಷ್ಟು ರಫ್ತು ಏರಿಕೆಯಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ