ಷೇರುಪೇಟೆ ಕುಸಿತದ ಬೆನ್ನಲ್ಲೇ ರೂಪಾಯಿ ಮೌಲ್ಯದಲ್ಲೂ ದಾಖಲೆಯ ಇಳಿಕೆ!

ಸತತ 2ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಕುಸಿದ ಬೆನ್ನಲ್ಲೇ ಇತ್ತ ಭಾರತೀಯ ರೂಪಾಯಿ ಮೌಲ್ಯ ಕೂಡ ಮತ್ತೆ ಸಾರ್ವಕಾಲಿಕ ಮಟ್ಟದ ಕುಸಿತ ದಾಖಲಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಸತತ 2ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಕುಸಿದ ಬೆನ್ನಲ್ಲೇ ಇತ್ತ ಭಾರತೀಯ ರೂಪಾಯಿ ಮೌಲ್ಯ ಕೂಡ ಮತ್ತೆ ಸಾರ್ವಕಾಲಿಕ ಮಟ್ಟದ ಕುಸಿತ ದಾಖಲಿಸಿದೆ.

ಅಮೆರಿಕ  ಫೆಡರಲ್ ರಿಸರ್ವ್‌ನ ಬಡ್ಡಿದರ ಹೆಚ್ಚಳ ಮತ್ತು ಹೂಡಿಕೆದಾರರ ನಿರಾಸಕ್ತಿ ಪರಿಣಾಮ ಗುರುವಾರ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದರು ಭಾರತೀಯ ರೂಪಾಯಿ ಮೌಲ್ಯ ಗಣನೀವಾಗಿ ಕುಸಿದಿದೆ. ಇಂದಿನ ವಹಿವಾಟಿನಲ್ಲಿ ರೂಪಾಯಿ ಮೌಲ್ಯದಲ್ಲಿ 51 ಪೈಸೆ ಕುಸಿತವಾಗಿದ್ದು, ಡಾಲರ್‌ ಎದುರು ರೂಪಾಯಿ ಮೌಲ್ಯ 80.47 ಕ್ಕೆ ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ  ಕುಸಿದಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಸ್ಥಳೀಯ ಕರೆನ್ಸಿ ಡಾಲರ್ ವಿರುದ್ಧ 80.47 ನಲ್ಲಿ ವಹಿವಾಟು ನಡೆಸುತ್ತಿದೆ. ಈ ಹಿಂದೆ ರೂಪಾಯಿ 80.27 ನಲ್ಲಿ ವಹಿವಾಟು ಪ್ರಾರಂಭಿಸಿತ್ತು.  

ವಿದೇಶೀ ಮಾರುಕಟ್ಟೆಯಲ್ಲಿ ಅಮೆರಿಕದ ಕರೆನ್ಸಿಯ ಬಲ, ದೇಶೀಯ ಷೇರುಗಳಲ್ಲಿನ ಮ್ಯೂಟ್ ಟ್ರೆಂಡ್, ರಿಸ್ಕ್-ಆಫ್ ಮೂಡ್‌ಗಳು ಮತ್ತು ದೃಢವಾದ ಕಚ್ಚಾ ತೈಲ ಬೆಲೆಗಳು ಸ್ಥಳೀಯ ಘಟಕದ ಮೇಲೆ ಪರಿಣಾಮ ಬೀರುತ್ತಿವೆ ಎಂದು ವಿದೇಶೀ ವಿನಿಮಯ ವ್ಯಾಪಾರಿಗಳು ಹೇಳಿದ್ದಾರೆ. ಬುಧವಾರ ಡಾಲರ್ ಎದುರು ರೂಪಾಯಿ 22 ಪೈಸೆ ಕುಸಿತ ಕಂಡು 79.96ಕ್ಕೆ ತಲುಪಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com