ಭಾರತದ ಜಿಡಿಪಿ: ಏಪ್ರಿಲ್‌- ಜೂನ್‌ ನಲ್ಲಿ ಶೇ.13.5% ರಷ್ಟು ಏರಿಕೆ, ಚೀನಾದ್ದು ಕೇವಲ ಶೇ.0.4 ಅಷ್ಟೇ..!

ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ದರ ಗಣನೀಯವಾಗಿ ಏರಿಕೆಯಾಗಿದ್ದು, ಏಪ್ರಿಲ್‌ -ಜೂನ್‌ ಅವಧಿಯ ಜಿಡಿಪಿ ಬೆಳವಣಿಗೆ ಶೇ.13.5% ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ದರ ಗಣನೀಯವಾಗಿ ಏರಿಕೆಯಾಗಿದ್ದು, ಏಪ್ರಿಲ್‌ -ಜೂನ್‌ ಅವಧಿಯ ಜಿಡಿಪಿ ಬೆಳವಣಿಗೆ ಶೇ.13.5% ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಈ ಸಂಖ್ಯಾ ಮಾಹಿತಿಯನ್ನು  ಬಿಡುಗಡೆ ಮಾಡಿದ್ದು, 2021ರ ಈ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ 20.1% ರಷ್ಟು ಏರಿಕೆಯಾಗಿದ್ದು, 2020ರಲ್ಲಿ ಕೊರೊನಾ ಇದ್ದ ಕಾರಣ ಕಡಿಮೆ ಪ್ರಮಾಣದ ಏರಿಕೆಯಾಗಿತ್ತು. ಆದರೆ ಹಾಲಿ ವರ್ಷ ಜಿಡಿಪಿ ದರ ಗಣನೀಯವಾಗಿ ಏರಿಕೆಯಾಗಿದ್ದು, ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (First Quarter) ಶೇ 13.5ರ ಪ್ರಗತಿ ದಾಖಲಿಸಿದೆ. ಏಪ್ರಿಲ್‌- ಜೂನ್‌ ಮೊದಲ ಹಣಕಾಸು ವರ್ಷದಲ್ಲಿ ಆರ್‌ಬಿಐ ಜಿಡಿಪಿ ಬೆಳವಣಿಗೆ 16.2% ರಷ್ಟಿರಬಹುದು ಎಂದು ಅಂದಾಜಿಸಲಾಗಿತ್ತು.

ಭಾರತದ ಆರ್ಥಿಕತೆಯ ಮೂಲಾಂಶಗಳು ಸದೃಢವಾಗಿರುವುದರಿಂದ ಈ ಬಾರಿಯ ಜಿಡಿಪಿ ಪ್ರಗತಿ ಎರಡಂಕಿ ದಾಖಲಾಗಬಹುದು ಎಂದು ಮೊದಲೇ ಹಲವು ಸಂಸ್ಥೆಗಳು ವಿಶ್ಲೇಷಿಸಿದ್ದವು. 2022ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತವು ಶೇ 13ರ ಪ್ರಗತಿ ದಾಖಲಿಸಬಹುದು ಎಂದು ಇಕ್ರಾ (ICRA) ವಿಶ್ಲೇಷಿಸಿತ್ತು. ಭಾರತೀಯ ಸ್ಟೇಟ್​ ಬ್ಯಾಂಕ್​ನ (State Bank of India – SBI) ಅರ್ಥಶಾಸ್ತ್ರಜ್ಞರು ಜಿಡಿಪಿ ಪ್ರಗತಿಯು ಶೇ 15.7 ಇರಬಹುದು ಎಂದು ಅಂದಾಜಿಸಿದ್ದರು. ಇದೇ ತಿಂಗಳ ಆರಂಭದಲ್ಲಿ ಹಣಕಾಸು ಮಾರ್ಗದರ್ಶಿ ಸಮಿತಿ ಸಭೆ (Monetary Policy Committee – MPC) ನಡೆಸಿದ್ದ ಭಾರತೀಯ ರಿಸರ್ವ್​ ಬ್ಯಾಂಕ್ (Reserve Bank of India – RBI) ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಪ್ರಗತಿಯು ಶೇ 16.2 ಇರಬಹುದು ಎಂದು ಅಂದಾಜಿಸಿತ್ತು. 

ಚೀನಾಗಿಂತ ಹೆಚ್ಚು
ಇದೇ ಅವಧಿಯಲ್ಲಿ ಚೀನಾದ ಶೇ 0.4ರ ಜಿಡಿಪಿ ಪ್ರಗತಿ ದಾಖಲಿಸಿದೆ. ಆದರೂ, ಆರ್ಥಿಕ ಚಟುವಟಿಕೆಯ ಹೊಡೆತದಿಂದ ಏಪ್ರಿಲ್ - ಜೂನ್‌ ತ್ರೈಮಾಸಿಕ ಹಾಗೂ ಮುಂದಿನ 2 ತ್ರೈಮಾಸಿಕಗಳಲ್ಲಿ ಜಿಡಿಪಿ ವೇಗವು  ತೀವ್ರವಾಗಿ ನಿಧಾನಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಚಿಲ್ಲರೆ ಹಣದುಬ್ಬರವು ಈ ವರ್ಷ ಸೆಂಟ್ರಲ್ ಬ್ಯಾಂಕಿನ ಮಧ್ಯಮ-ಅವಧಿಯ ಗುರಿಯ 2-6 ಶೇಕಡಾದ ಮೇಲಿನ ಮಿತಿಯನ್ನು ಮೀರಿದೆ ಮತ್ತು 2022 ರ ಉಳಿದ ಭಾಗದಲ್ಲಿ ಅಷ್ಟೇ ಉಳಿಯುತ್ತದೆ ಎಂದು ಊಹಿಸಲಾಗಿದೆ. 

ವಲಯವಾರು ಅಂಶಗಳು
ಭಾರತದ ಇತರ ಡೇಟಾ ಬಿಡುಗಡೆಗಳು ಬುಧವಾರದಂದು ಪ್ರಮುಖ ವಲಯದ ಉತ್ಪಾದನೆಯನ್ನು ತೋರಿಸಿದ್ದು, ಮೂಲಸೌಕರ್ಯ ಕಾರ್ಖಾನೆಗಳ ಉತ್ಪಾದನೆಯು ಜುಲೈನಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 4.5  ವಿಸ್ತರಣೆ ಕಂಡಿದೆ.  ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ - ಹೀಗೆ 8 ಮೂಲಸೌಕರ್ಯ ವಲಯಗಳ ಉತ್ಪಾದನಾ ಬೆಳವಣಿಗೆಯು ಈ ಹಣಕಾಸು ವರ್ಷದ ಏಪ್ರಿಲ್-ಜುಲೈನಲ್ಲಿ ಶೇಕಡಾ 11.5 ರಷ್ಟಿತ್ತು. ಆದರೆ, ಇದು ವರ್ಷದ ಹಿಂದೆ ಶೇಕಡಾ 21.4 ರಷ್ಟಿತ್ತು ಎಂದು ತಿಳಿದುಬಂದಿದೆ. 

ಯಾವುದು ಎಷ್ಟು ಬೆಳವಣಿಗೆ?
ಕೃಷಿ ವಲಯ: Q1FY23 ರಲ್ಲಿ 4.5% ಮತ್ತು Q4FY22 ರಲ್ಲಿ 4.1%
ಗಣಿಗಾರಿಕೆ: 6.5% Vs 6.7%
ಉತ್ಪಾದನೆ 4.8% Vs -0.2%
ನಿರ್ಮಾಣ: 16.8% Vs 2%
ವ್ಯಾಪಾರ, ಹೋಟೆಲ್, ಸಾರಿಗೆ, ಸಂವಹನ: 25.7% Vs 5.3%
ಹಣಕಾಸು, ರಿಯಲ್ ಎಸ್ಟೇಟ್, ವೃತ್ತಿಪರ ಸೇವೆಗಳು: 9.2% Vs 4.3%
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com