ಕ್ವಾರ್ಟರ್ 2 ವರದಿ: 2,112 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ ಮಾರುತಿ ಸುಜುಕಿ

ಪ್ರಮುಖ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಕ್ವಾರ್ಟರ್ 2 ವರದಿ ಬಿಡುಗಡೆ ಮಾಡಿದ್ದು, ಸಂಸ್ಥೆಯು 2,112 ಕೋಟಿ ರೂ ನಿವ್ವಳ ಲಾಭ ದಾಖಲಿಸಿದೆ ಎನ್ನಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಮುಖ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಕ್ವಾರ್ಟರ್ 2 ವರದಿ ಬಿಡುಗಡೆ ಮಾಡಿದ್ದು, ಸಂಸ್ಥೆಯು 2,112 ಕೋಟಿ ರೂ ನಿವ್ವಳ ಲಾಭ ದಾಖಲಿಸಿದೆ ಎನ್ನಲಾಗಿದೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 2,112 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ನಾಲ್ಕುಪಟ್ಟು ಹೆಚ್ಚಳ ಕಂಡುಬಂದಿದೆ.

ಹಿಂದಿನ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 487 ಕೋಟಿ ರೂ ನಿವ್ವಳ ಲಾಭ ದಾಖಲಿಸಿತ್ತು. ಈ ಅಂಕಿಅಂಶಗಳಿಗೆ ಹೋಲಿಕೆ ಮಾಡಿದರೆ ಹಾಲಿ ಲಾಭಾಂಶ ನಾಲ್ಕು ಪಟ್ಟು ಹೆಚ್ಚು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಸಂಸ್ಥೆಯ ಕಾರ್ಯಾಚರಣಾ ವರಮಾನವು 20,550 ಕೋಟಿಯಿಂದ 29,942 ಕೋಟಿ ರೂಗಳಿಗೆ ಅಂದರೆ ಶೇ.46ರಷ್ಟು ಏರಿಕೆಯಾಗಿದೆ. ಮಾರಾಟ ಪ್ರಮಾಣವು ದಾಖಲೆ ಪ್ರಮಾಣದಲ್ಲಿ ಹೆಚ್ಚಳ ಆಗಿರುವುದೇ ಇದಕ್ಕೆ ಕಾರಣ ಎಂದು ಕಂಪನಿ ತಿಳಿಸಿದೆ. 

ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು 5.17 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದು, ತ್ರೈಮಾಸಿಕವೊಂದರಲ್ಲೇ ಆಗಿರುವ ಗರಿಷ್ಠ ಮಾರಾಟ ಇದಾಗಿದೆ. ವಾಹನಗಳ ದೇಶಿ ಮಾರಾಟ 4.54 ಲಕ್ಷ, ರಫ್ತು 63,195ಕ್ಕೆ ತಲುಪಿದೆ ಎಂದು ಕಂಪನಿ ತಿಳಿಸಿದೆ.

ಅಗ್ಗದ ಕಾರುಗಳನ್ನು ಮಾರಾಟ ಮಾಡಲು ಹೆಸರುವಾಸಿಯಾಗಿರುವ ಮಾರುತಿ ಸಂಸ್ಥೆ, ಹೆಚ್ಚಿನ ಸರಕುಗಳ ಬೆಲೆಗಳಿಂದಾಗಿ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚವನ್ನು ಸರಿದೂಗಿಸಲು ವಾಹನಗಳ ಬೆಲೆಯನ್ನು ಹೆಚ್ಚಿಸುತ್ತಿದೆ. ದೆಹಲಿ ಮೂಲದ ಈ ವಾಹನ ತಯಾರಕ ಸಂಸ್ಥೆಯು ಏಪ್ರಿಲ್‌ನಲ್ಲಿ ತನ್ನ ಎಲ್ಲ ಮಾದರಿಗಳಾದ್ಯಂತ ಸರಾಸರಿ 1.3% ರಷ್ಟು ಬೆಲೆ ಏರಿಕೆಯನ್ನು ಘೋಷಿಸಿತ್ತು. ಅದಾಗ್ಯೂ ನಿವ್ವಳ ಲಾಭಾಂಶದಲ್ಲಿ ಏರಿಕೆ ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com