ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ: ಪ್ರತಿ ಡಾಲರ್ ಗೆ 81.18 ರೂ.
ಗುರುವಾರವಷ್ಟೇ ದಾಖಲೆಯ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಶುಕ್ರವಾರ ಮತ್ತೆ ಸಾರ್ವಕಾಲಿಕ ಇಳಿಕೆ ಕಂಡಿದ್ದು, ಪ್ರತೀ ಡಾಲರ್ ಗೆ ರೂಪಾಯಿ ಮೌಲ್ಯ 81.18ರೂಗೆ ಕುಸಿತವಾಗಿದೆ.
Published: 23rd September 2022 11:51 AM | Last Updated: 23rd September 2022 01:32 PM | A+A A-

ಸಂಗ್ರಹ ಚಿತ್ರ
ಮುಂಬೈ: ಗುರುವಾರವಷ್ಟೇ ದಾಖಲೆಯ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಶುಕ್ರವಾರ ಮತ್ತೆ ಸಾರ್ವಕಾಲಿಕ ಇಳಿಕೆ ಕಂಡಿದ್ದು, ಪ್ರತೀ ಡಾಲರ್ ಗೆ ರೂಪಾಯಿ ಮೌಲ್ಯ 81.18ರೂಗೆ ಕುಸಿತವಾಗಿದೆ.
ಶುಕ್ರವಾರದ ಆರಂಭಿಕ ವಹಿವಾಟಿನಲ್ಲೇ ಭಾರತದ ರೂಪಾಯಿ ಮೌಲ್ಯವು 44 ಪೈಸೆ ಕುಸಿದಿದ್ದು, ಅಮೆರಿಕ ಡಾಲರ್ ಎದುರು 81.18 ರೂಕ್ಕೆ ಇಳಿಯುವ ಮೂಲಕ ಸಾರ್ವಕಾಲಿಕ ಕುಸಿತ ದಾಖಲಿಸಿದೆ.
ಇದನ್ನೂ ಓದಿ: ಷೇರುಪೇಟೆ ಕುಸಿತದ ಬೆನ್ನಲ್ಲೇ ರೂಪಾಯಿ ಮೌಲ್ಯದಲ್ಲೂ ದಾಖಲೆಯ ಇಳಿಕೆ!
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಕರೆನ್ಸಿಯ ಬಲ, ದೇಶೀಯ ಷೇರುಗಳಲ್ಲಿನ ನಕಾರಾತ್ಮಕ ಪ್ರವೃತ್ತಿ ಮತ್ತು ಉಕ್ರೇನ್‌ನಲ್ಲಿನ ಭೌಗೋಳಿಕ ರಾಜಕೀಯ ಅಪಾಯದ ಹೆಚ್ಚಳವು ದೇಶೀಯ ಕರೆನ್ಸಿಯ ಮೌಲ್ಯ ಕುಸಿತಕ್ಕೆ ಕಾರಣವಿರಬಹುದು ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಯುಎಸ್ ಫೆಡರಲ್ ರಿಸರ್ವ್ ನಿರೀಕ್ಷೆಗಳಿಗೆ ಅನುಗುಣವಾಗಿ ರೆಪೊ ದರವನ್ನು 75 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಅಂತರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ ಮೌಲ್ಯವು 81.08ರಂತೆ ವಹಿವಾಟು ಪ್ರಾರಂಭಿಸಿ, 44 ಪೈಸೆ ಕುಸಿತ ಕಂಡು 81.23ರೂಕ್ಕೆ ಇಳಿದು ವಹಿವಾಟು ನಡೆಸುತ್ತಿದೆ.
ಇದನ್ನೂ ಓದಿ: ಮೂನ್‌ಲೈಟಿಂಗ್ ಮಾಡುತ್ತಿದ್ದ 300 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ: ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ
ಗುರುವಾರ, ರೂಪಾಯಿ ಮೌಲ್ಯವು 83 ಪೈಸೆಗಳಷ್ಟು ಕುಸಿದು, 7 ತಿಂಗಳುಗಳಲ್ಲಿ ಒಂದೇ ದಿನ ಅತ್ಯಧಿಕ ಕುಸಿತ ಕಂಡಿತ್ತು. ಅಮೆರಿಕ ಡಾಲರ್ ಎದುರು 80.79ಕ್ಕೆ ವಹಿವಾಟು ಅಂತ್ಯಗೊಳಿಸುವ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.