ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಸೆನ್ಸೆಕ್ಸ್ 950 ಅಂಕ ಕುಸಿತ, ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ನಷ್ಟ

ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ(Share Market) ರಕ್ತಪಾತವಾಗಿದ್ದು, ಸೆನ್ಸೆಕ್ಸ್ 950 ಅಂಕ ಕುಸಿದಿದೆ.

ಮುಂಬೈ: ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ(Share Market) ರಕ್ತಪಾತವಾಗಿದ್ದು, ಸೆನ್ಸೆಕ್ಸ್ 950 ಅಂಕ ಕುಸಿದಿದೆ.

ಬಾಂಬೆ ಷೇರು ಮಾರುಕಟ್ಟೆ (BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಅಂಕಗಳು ಭಾರೀ ಇಳಿಕೆಯಾಗಿದ್ದು, ಹೂಡಿಕೆದಾರರಿಗೆ ಒಂದೇ ದಿನ ಸುಮಾರು 7 ಲಕ್ಷ ಕೋಟಿ ರೂ. ನಷ್ಟವಾಗಿದೆ.

ಶುಕ್ರವಾರದಿಂದ ಮಾರುಕಟ್ಟೆಯಲ್ಲಿ ಕುಸಿತ ಮುಂದುವರೆದಿದ್ದು, ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 17,000 ಪಾಯಿಂಟ್‌ಗಳಿಗಿಂತ ಕೆಳಕ್ಕೆ ಕುಸಿದಿದೆ ಮತ್ತು ಬಿಎಸ್‌ಇ ಸೆನ್ಸೆಕ್ಸ್ 953.70 ಪಾಯಿಂಟ್‌ ಕುಸಿತ ಕಂಡು, ದಿನದಂತ್ಯಕ್ಕೆ 57,145.22ಕ್ಕೆ ಕುಸಿತವಾಗಿದೆ. ಫ್ಚಿ ಕೂಡ 311.05 ಅಂಕಗಳ ಕುಸಿತ ಕಂಡು 17,016.30 ಅಂಕಗಳಿಗೆ ತಲುಪಿದೆ.

ಸೋಮವಾರದಂದು ರೂಪಾಯಿ ಹೊಸ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿತು, ಇದು ದಾಖಲೆಯ ಮೂರನೇ ಸತತ ಸೆಷನ್ ಅನ್ನು ಉಲ್ಲಂಘಿಸಿದೆ.

30-ಷೇರುಗಳ ಸೆನ್ಸೆಕ್ಸ್ ಪ್ಯಾಕ್‌ಗಳಲ್ಲಿ, ಪವರ್ ಗ್ರಿಡ್, ಟಾಟಾ ಸ್ಟೀಲ್, ಮಾರುತಿ, ಮಹೀಂದ್ರಾ ಮತ್ತು ಮಹೀಂದ್ರಾ, ಎನ್‌ಟಿಪಿಸಿ, ಇಂಡಸ್‌ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಟೈಟಾನ್ ಆರಂಭಿಕ ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ. ಇಂದಿನ ವಹಿವಾಟಿನಲ್ಲಿ ನೆಸ್ಲೆ ಮತ್ತು ಹಿಂದೂಸ್ತಾನ್ ಯೂನಿಲಿವರ್ ಮಾತ್ರ ಲಾಭ ಗಳಿಸಿದವು.  ಏಷ್ಯಾದ ಇತರೆಡೆಗಳಲ್ಲಿ, ಸಿಯೋಲ್, ಟೋಕಿಯೊ ಮತ್ತು ಶಾಂಘೈ ಮಾರುಕಟ್ಟೆಗಳು ಕಡಿಮೆ ವಹಿವಾಟು ನಡೆಸುತ್ತಿದ್ದರೆ, ಹಾಂಗ್ ಕಾಂಗ್ ಮಾರುಕಟ್ಟೆ ವಹಿವಾಟು ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ.

ರೂಪಾಯಿ ಮೌಲ್ಯ ದಾಖಲೆ ಪ್ರಮಾಣದ ಕುಸಿತ 
ಡಾಲರ್‌ ಮುಂದೆ ರೂಪಾಯಿ ಮೌಲ್ಯ ಕೂಡ ಸಾರ್ವಕಾಲಿಕ ಕುಸಿತವಾಗಿದ್ದು, ಸೋಮವಾರ ರೂಪಾಯಿ ಮೌಲ್ಯ 81.55ಕ್ಕೆ ಇಳಿಕೆಯಾಗಿದೆ.

ಮಾರುಕಟ್ಟೆ ಕುಸಿತಕ್ಕೆ ಕಾರಣ ಏನು?
ಅಮೆರಿಕದ ಫೆಡರಲ್‌ ರಿಸರ್ವ್‌ (Federal Reserve) ಬಡ್ಡಿ ದರವನ್ನು ಏರಿಸಿದ ಪರಿಣಾಮ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪರಿಣಾಮ ವಿಶ್ವಾದ್ಯಂತ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ಬಡ್ಡಿದರವನ್ನು ಮತ್ತಷ್ಟು ಏರಿಸುವ ಸಾಧ್ಯತೆಯಿದೆ. ಈ ಬಾರಿ 35 ಬೇಸಿಸ್‌ ಪಾಯಿಂಟ್‌ ಏರಿಸಬಹುದು ಎಂಬ ನಿರೀಕ್ಷೆಯಿದೆ. ಜಪಾನ್‌ನಲ್ಲಿ 20 ತಿಂಗಳಿನಲ್ಲೇ ಕಡಿಮೆ ಪ್ರಮಾಣದಲ್ಲಿ ಕೈಗಾರಿಕ ಪ್ರಗತಿ ದಾಖಲಾಗಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ವಿಶ್ವಾದ್ಯಂತ ಆರ್ಥಿಕ ಬೆಳವಣಿಗೆ ಕುಸಿದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಗಳಲ್ಲಿ ರಕ್ತಪಾತ ಆಗುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com