ಚೀನಾವನ್ನು ಹಿಂದಿಕ್ಕಿ ವಿಶ್ವದ ಕಾರ್ಖಾನೆಯಾಗಲು ಭಾರತ ಒಂದು ಜಿಗಿತದ ದೂರದಲ್ಲಿದೆ: ಆನಂದ್ ಮಹೀಂದ್ರಾ

ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಕಾರ್ಖಾನೆಯಾಗಿ ಬದಲಾಗಲು ಒಂದು ಜಿಗಿತದ ದೂರದಲ್ಲಿದೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಶುಕ್ರವಾರ ಹೇಳಿದ್ದಾರೆ. 
ಆನಂದ್ ಮಹೀಂದ್ರಾ
ಆನಂದ್ ಮಹೀಂದ್ರಾ

ನವದೆಹಲಿ: ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಕಾರ್ಖಾನೆಯಾಗಿ ಬದಲಾಗಲು ಒಂದು ಜಿಗಿತದ ದೂರದಲ್ಲಿದೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಶುಕ್ರವಾರ ಹೇಳಿದ್ದಾರೆ. 

ಮಹೀಂದ್ರಾ ಆ್ಯಂಡ್ ಮಹೀಂದ್ರಾ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಅವರು. ಕೋವಿಡ್ ನಂತರದ ಪೂರೈಕೆ ಸರಪಳಿ ಅಡೆತಡೆಗಳು ದೇಶದ ಪರವಾಗಿ ಕೆಲಸ ಮಾಡಿದೆ. ಭಾರತ ವಿಶ್ವದ ಕಾರ್ಖಾನೆಯಾಗಿ ಬದಲಾಗಲು ಒಂದು ಜಿಗಿತದ ದೂರದಲ್ಲಿದೆ ಎಂದು ಆನಂದ್ ಮಹೀಂದ್ರಾ ಹೇಳಿದರು. 

ಯಶಸ್ವಿ ಜಿಗಿತವನ್ನು ಮಾಡಲು, ಅನೇಕ ವಿಷಯಗಳನ್ನು ಒಟ್ಟಿಗೆ ತರಬೇಕು. ಭಾರತವು ಪೋಲ್ ವಾಲ್ಟ್(ಜಿಗಿತ) ಮಾಡಲು ಸಿದ್ಧವಾಗುತ್ತಿರುವ ಇಂದಿನ ಕಾಲದಲ್ಲಿ ಈ ಹೋಲಿಕೆಯು ಹೆಚ್ಚು ಸೂಕ್ತವಾಗಿದೆ. ನಾವು ಇದಕ್ಕಾಗಿ ಚೆನ್ನಾಗಿ ಸಿದ್ಧರಿದ್ದೇವೆ. ಹಲವು ದೇಶಗಳು ಆರ್ಥಿಕ ಹಿಂಜರಿತದತ್ತ ಸಾಗುತ್ತಿರುವಾಗ ಭಾರತದ ಆರ್ಥಿಕತೆ ಶೇ.7ರ ದರದಲ್ಲಿ ಬೆಳೆಯುತ್ತಿದೆ ಎಂದು ಆನಂದ್ ಮಹೀಂದ್ರಾ ಹೇಳಿದರು.

ಚೀನಾದೊಂದಿಗಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಳಿಂದ ಅನೇಕ ಸಂಸ್ಥೆಗಳು ಭಾರತಕ್ಕೆ ಬರುವುದನ್ನು ಪರಿಗಣಿಸುವಂತೆ ಒತ್ತಾಯಿಸುತ್ತಿವೆ. ಆದರೆ ಇದು ಒಂದೇ ಕಾರಣವಲ್ಲ ಎಂದು ಮಹೀಂದ್ರಾ ಹೇಳಿದರು. ಇದರಲ್ಲಿ ಅರ್ಥಶಾಸ್ತ್ರವೂ ಸೇರಿಕೊಂಡಿದೆ. ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಉತ್ಪಾದನಾ ವೆಚ್ಚವು ವಾಸ್ತವವಾಗಿ ಅಗ್ಗವಾಗಿದೆ. ಆಪಲ್, ಸ್ಯಾಮ್‌ಸಂಗ್, ಬೋಯಿಂಗ್ ಮತ್ತು ತೋಷಿಬಾದಂತಹ ದೊಡ್ಡ ಕಂಪನಿಗಳು ತಮ್ಮ ಉತ್ಪಾದನಾ ಚಟುವಟಿಕೆಗಳ ಪ್ರಮುಖ ಭಾಗವನ್ನು ಭಾರತಕ್ಕೆ ವರ್ಗಾಯಿಸಿರುವುದು ಆಶ್ಚರ್ಯವೇನಿಲ್ಲ ಎಂದರು.

ಇದು ಪಾಶ್ಚಿಮಾತ್ಯ ದೇಶಗಳ ಬಗ್ಗೆ ಮಾತ್ರವಲ್ಲ. ಸಿಂಗಾಪುರ್ ಭಾರತದಲ್ಲಿ ಎರಡನೇ ಅತಿ ದೊಡ್ಡ ಹೂಡಿಕೆದಾರ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ವಿಶ್ವದ ಕಾರ್ಖಾನೆಯಾಗಿ ಚೀನಾವನ್ನು ಬದಲಿಸಲು ನಾವು ತುಂಬಾ ಹತ್ತಿರವಾಗಿದ್ದೇವೆ ಎಂದರು.

ಚೀನಾದ ಮೇಲಿನ ಅನುಮಾನ ಮತ್ತು ಕೋವಿಡ್ ನಂತರದ ಪೂರೈಕೆ ಸರಪಳಿ ಅಡೆತಡೆಗಳು ಸಹ ಭಾರತದ ಪರವಾಗಿ ಕೆಲಸ ಮಾಡಿದೆ. ನಾವು ಅದರ ಲಾಭವನ್ನು ಪಡೆಯುವ ಸ್ಥಿತಿಯಲ್ಲಿರುತ್ತೇವೆ. ನಾವು ವಿಶ್ವಬ್ಯಾಂಕ್‌ನ 'ಲಾಜಿಸ್ಟಿಕ್ಸ್ ಪರ್ಫಾರ್ಮೆನ್ಸ್ ಇಂಡೆಕ್ಸ್'ನಲ್ಲಿ ನಮ್ಮ ಸ್ಥಾನವನ್ನು ಬೃಹತ್ ಪ್ರಮಾಣದಲ್ಲಿ ಸುಧಾರಿಸಿದ್ದೇವೆ. ಮೂಲಸೌಕರ್ಯಕ್ಕೆ ನಾವು ನೀಡಿರುವ ಒತ್ತು ಫಲ ನೀಡುತ್ತಿದೆ ಎಂದರು.

ಇಂದು ಜಗತ್ತು ಡಿಜಿಟಲ್ ಆಗಿ ಕೆಲಸ ಮಾಡುತ್ತಿದೆ. ಅದಕ್ಕಾಗಿಯೇ ಭಾರತವು ಡಿಜಿಟಲ್ ಮೂಲಸೌಕರ್ಯದಲ್ಲಿ ಉತ್ತಮ ಸ್ಥಾನದಲ್ಲಿದೆ. ಭಾರತದಲ್ಲಿ 1GB ಮೊಬೈಲ್ ಡೇಟಾದ ವೆಚ್ಚವು ಇತರ ದೇಶಗಳಿಗಿಂತ ಅತ್ಯಂತ ಕಡಿಮೆಯಾಗಿದೆ. ಮೊಬೈಲ್ ಇಂಟರ್ನೆಟ್‌ನ ಬೆಲೆಯೂ ಅಷ್ಟೇ. ನಾವು ದಕ್ಷಿಣ ಕೊರಿಯಾಕ್ಕಿಂತ 73 ಪಟ್ಟು ಅಗ್ಗವಾಗಿದ್ದೇವೆ. ಭಾರತವು ಅದ್ಭುತ ರೀತಿಯಲ್ಲಿ ಪುಟಿದೇಳಲು ಮತ್ತು ಮುನ್ನುಗ್ಗಲು ಸಾಕಷ್ಟು ಶಕ್ತಿಯನ್ನು ಹೊಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com