ಚಿನ್ನದ ಬೆಲೆ ದಿಢೀರ್ ಏರಿಕೆ: ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ, ಇಂದಿನ ದರ ಪಟ್ಟಿ ಇಂತಿದೆ

ಚಿನ್ನದ ಬೆಲೆ ದಿಢೀರ್ ಏರಿಕೆ ಕಂಡಿದ್ದು, ಹಳದಿ ಲೋಹದ ದರ ಸೋಮವಾರ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚಿನ್ನದ ಬೆಲೆ ದಿಢೀರ್ ಏರಿಕೆ ಕಂಡಿದ್ದು, ಹಳದಿ ಲೋಹದ ದರ ಸೋಮವಾರ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ.

22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಹಾಗೂ 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 44 ರೂ. ಏರಿಕೆಯಾಗಿದೆ. ಇಂದರೊಂದಿಗೆ 22 ಕ್ಯಾರಟ್‌ನ ಒಂದು ಗ್ರಾಂಗೆ 5,885 ರೂ. ಆದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನಕ್ಕೆ 6,420 ರೂ. ಆಗಿದ್ದು ಇದು ದಾಖಲೆಯ ಗರಿಷ್ಠ ಮಟ್ಟವಾಗಿದೆ.

ಕೆಲ ದಿನಗಳಿಂದ ಚಿನ್ನದ ಬೆಲೆಯು ಸತತವಾಗಿ ಏರಿಕೆಯಾಗುತ್ತಿದ್ದು, ಶುಕ್ರವಾರ (ಡಿಸೆಂಬರ್‌ 1) ಮತ್ತು ಶನಿವಾರ (ಡಿಸೆಂಬರ್‌ 2) ಕೂಡ ಬೆಲೆ ಏರಿಕೆಯಾಗಿತ್ತು. ಆದರೆ ಭಾನುವಾರ (ಡಿಸೆಂಬರ್‌ 3) ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. 22 ಕ್ಯಾರಟ್‌ನ ಚಿನ್ನವು ಗ್ರಾಂಗೆ 5,845 ರೂ. ಹಾಗೂ 24 ಕ್ಯಾರಟ್‌ನ ಚಿನ್ನದ ಬೆಲೆ ಒಂದು ಗ್ರಾಂಗೆ 6,380 ರೂ. ಇತ್ತು. ಆದರೆ ಸೋಮವಾರ ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದೆ.

ವಿವಿಧ ಜಿಲ್ಲೆಗಳ ಚಿನ್ನದ (24k) ದರಪಟ್ಟಿ ಇಂತಿದೆ
ಚೆನ್ನೈ:  Rs.65,180/10g
ದೆಹಲಿ: Rs.64,350/10g
ಮುಂಬೈ: Rs.64,200/10g
ಕೋಲ್ಕತಾ: Rs.64,200/10g

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com