ಜಾಗತಿಕ ಮಾರುಕಟ್ಟೆಯಲ್ಲಿ ದಾಖಲೆ ಬರೆದ ಭಾರತೀಯ ಷೇರುಮಾರುಕಟ್ಟೆ

ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಷೇರುಮಾರುಕಟ್ಟೆ ಐತಿಹಾಸಿಕ ದಾಖಲೆ ಬರೆದಿದ್ದು, ಮೊದಲ ಬಾರಿಗೆ ಸೆನ್ಸೆಕ್ಸ್ 71,000 ಗಡಿ ದಾಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ದಾಖಲೆ ಬರೆದ ಭಾರತೀಯ ಷೇರುಮಾರುಕಟ್ಟೆ
ಜಾಗತಿಕ ಮಾರುಕಟ್ಟೆಯಲ್ಲಿ ದಾಖಲೆ ಬರೆದ ಭಾರತೀಯ ಷೇರುಮಾರುಕಟ್ಟೆ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಷೇರುಮಾರುಕಟ್ಟೆ ಐತಿಹಾಸಿಕ ದಾಖಲೆ ಬರೆದಿದ್ದು, ಮೊದಲ ಬಾರಿಗೆ ಸೆನ್ಸೆಕ್ಸ್ 71,000 ಗಡಿ ದಾಟಿದೆ.

ಶುಕ್ರವಾರದಂದು BSE Sensex ಮೊದಲ ಬಾರಿಗೆ 71,000 ಗಡಿ ದಾಟಿ ಐತಿಹಾಸಿಕ ದಾಖಲೆ ಸೃಷ್ಟಿಸಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.37ರಷ್ಟು ಅಂದರೆ 969.55 ಅಂಕಗಳ ಏರಿಕೆಯೊಂದಿಗೆ 71,483.75 ಅಂಕಗಳಿಗೆ ಏರಿಕೆಯಾಗಿದೆ. ಇನ್ನು ನಿಫ್ಟಿ ಕೂಡ ಇಂದು ಶೇ.1.29ರಷ್ಟು ಅಂದರೆ 273.95 ಅಂಕ ಏರಿಕೆಯಾಗಿ 21,456.65 ಅಂಕಗಳಿಗೆ ಏರಿಕೆಯಾಗಿದೆ.

ಇನ್ಫೋಸಿಸ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ವಿಪ್ರೋ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಪ್ರಮುಖ ಲಾಭ ಗಳಿಸಿದವು. ಅಂತೆಯೇ ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್, ನೆಸ್ಲೆ ಇಂಡಿಯಾ, ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿ, ಭಾರ್ತಿ ಏರ್‌ಟೆಲ್ ಮತ್ತು ಬಜಾಜ್ ಆಟೋ ಸಂಸ್ಥೆಗಳು ನಷ್ಟ ಅನುಭವಿಸಿದವು. ಇಂದಿನ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ-ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳ (ಎಂ ಕ್ಯಾಪ್) ದಾಖಲೆಯ ಗರಿಷ್ಠ 357 ಲಕ್ಷ ಕೋಟಿ ರೂ ತಲುಪಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್ ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ. ಗುರುವಾರ ಅಮೆರಿಕದ ಮಾರುಕಟ್ಟೆ ಕೂಡ ಉನ್ನತ ಮಟ್ಟದಲ್ಲಿ ಕೊನೆಗೊಂಡಿತ್ತು. ಐಟಿ ಸ್ಟಾಕ್ ಗಳ ಷೇರುಗಳ ಮೌಲ್ಯ ಶೇ.4ರಷ್ಟು ಮತ್ತು ಪಿಎಸ್‌ಯು ಬ್ಯಾಂಕ್ ಷೇರುಗಳ ಮೌಲ್ಯ ಶೇ.2ರಷ್ಟು ಏರಿಕೆಯಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com