GDP: 3ನೇ ತ್ರೈಮಾಸಿಕ ನಿಧಾನಗತಿಯಲ್ಲಿ ಜಿಡಿಪಿ; ಡಿಸೆಂಬರ್ ಕ್ವಾರ್ಟರ್​ನಲ್ಲಿ ಶೇ. 4.4 ದರಕ್ಕೆ ಆರ್ಥಿಕತೆ ಸೀಮಿತ

ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ 3ನೇ ತ್ರೈಮಾಸಿಕ ಅವಧಿಯ ಜಿಡಿಪಿ ಡಾಟಾ (GDP Data) ಬಿಡುಗಡೆ ಆಗಿದ್ದು, ಶೇ. 4.4ರ ದರಕ್ಕೆ ಆರ್ಥಿಕತೆ ಸೀಮಿತವಾಗಿದೆ ಎನ್ನಲಾಗಿದೆ.
ಭಾರತದ ಜಿಡಿಪಿ
ಭಾರತದ ಜಿಡಿಪಿ
Updated on

ನವದೆಹಲಿ: ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ 3ನೇ ತ್ರೈಮಾಸಿಕ ಅವಧಿಯ ಜಿಡಿಪಿ ಡಾಟಾ (GDP Data) ಬಿಡುಗಡೆ ಆಗಿದ್ದು, ಶೇ. 4.4ರ ದರಕ್ಕೆ ಆರ್ಥಿಕತೆ ಸೀಮಿತವಾಗಿದೆ ಎನ್ನಲಾಗಿದೆ.

ಹಿಂದಿನ ವರ್ಷ ಶೇ. 11.2ರಷ್ಟು ಬೆಳವಣಿಗೆ ಸಾಧಿಸಿದ್ದ ಭಾರತದ ಆರ್ಥಿಕತೆ 3ನೇ ತ್ರೈಮಾಸಿಕ ಅವಧಿಯಲ್ಲಿ ಕೇವಲ ಶೇ. 4.4ರಷ್ಟು ಮಾತ್ರ ಪ್ರಗತಿ ಹೊಂದಿದೆ. ರಾಷ್ಟ್ರೀಯ ಅಂಕಿ-ಅಂಶ ಕಚೇರಿ (NSO- National Statistical Office) ಇಂದು ಮಂಗಳವಾರ 3ನೇ ತ್ರೈಮಾಸಿಕ ಅವಧಿಯ ಜಿಡಿಪಿ ವಿವರಗಳಿರುವ ವರದಿಯನ್ನು ಬಿಡುಗಡೆ ಮಾಡಿದೆ. ಹಿಂದಿನ ಕ್ವಾರ್ಟರ್​ನಲ್ಲಿ, ಅಂದರೆ 2022 ಜುಲೈನಿಂದ ಸೆಪ್ಟಂಬರ್​ವರೆಗಿನ ತ್ರೈಮಾಸಿಕದಲ್ಲಿ ಶೇ. 6.3 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿತ್ತು. ಮೂರನೇ ತ್ರೈಮಾಸಿಕದಲ್ಲಿ ಬೆಳವಣಿಗೆ ಮಂದಗೊಂಡಿದ್ದರೂ 2022-23ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7ರಷ್ಟು ಬೆಳೆಯುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಆರ್ ಬಿಐ ಲೆಕ್ಕಾಚಾರಕ್ಕಿಂತ ಭಿನ್ನ ವರದಿ
ಇನ್ನು ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ವರದಿಗಿಂತ ಹಾಲಿ ವರದಿ ಭಿನ್ನವಾಗಿದ್ದು, 2022-23ರ ಹಣಕಾಸು ವರ್ಷದಲ್ಲಿ ಶೇ. 7ರಷ್ಟು ಜಿಡಿಪಿ ಬೆಳೆಯಬಹುದು ಎಂದು ಹಿಂದೆ ಅಂದಾಜು ಮಾಡಿದ್ದ ಆರ್​ಬಿಐ ಡಿಸೆಂಬರ್ ತಿಂಗಳಲ್ಲಿ ತನ್ನ ಅಂದಾಜನ್ನು ಶೇ. 6.8ಕ್ಕೆ ಇಳಿಸಿತ್ತು. ಐಎಂಫ್, ಎಡಿಬಿ ಸಂಸ್ಥೆಗಳೂ ಕೂಡ ಭಾರತದ ಆರ್ಥಿಕತೆ ಶೇ. 6.8ರ ದರದಲ್ಲಿ ಬೆಳೆಯಬಹುದು ಎಂದು ಅಂದಾಜು ಮಾಡಿದ್ದವು. ಆದರೆ ಹಾಲಿ ಜಿಡಿಪಿ ದರ ಶೇ4.4 ಸೀಮಿತವಾಗಿದೆ.

ಗಮನಾರ್ಹ ಸಂಗತಿ ಎಂದರೆ ಸರ್ಕಾರದ ವಿತ್ತೀಯ ಕೊರತೆ ಅಗಾಧ ಇದೆ. ಉದ್ದೇಶಿತ ಗುರಿಗೆ ಹೋಲಿಸಿದರೆ ವಿತ್ತೀಯ ಕೊರತೆ ಶೇ. 67.8ರಷ್ಟಿದೆ. ಕಡಿಮೆ ಆದಾಯ, ಹೆಚ್ಚು ವೆಚ್ಚ ಇದಕ್ಕೆ ಕಾರಣ. 2022ರ ಏಪ್ರಿಲ್​ನಿಂದ 2023 ಜನವರಿ ಅವಧಿಯಲ್ಲಿ ವೆಚ್ಚ ಮತ್ತು ಆದಾಯದ ನಡುವಿನ ಅಂತರವಾದ ವಿತ್ತೀಯ ಕೊರತೆ ಬರೋಬ್ಬರಿ 11.9 ಲಕ್ಷ ಕೋಟಿ ರೂ ಎಂದು ಸಿಜಿಎ ಬಿಡುಗಡೆ ಮಾಡಿದ ದತ್ತಾಂಶಗಳಿಂದ ತಿಳಿದುಬರುತ್ತದೆ.

ಇನ್ನು ಮೂರನೇ ತ್ರೈಮಾಸಿಕದಲ್ಲಿನ ಜಿಡಿಪಿ ಬೆಳವಣಿಗೆ ವಿಷಯಕ್ಕೆ ಬಂದರೆ ವಿವಿಧ ಹಣಕಾಸು ಸಂಸ್ಥೆಗಳು, ರೇಟಿಂಗ್ ಏಜೆನ್ಸಿಗಳು ಬಹುತೇಕ ಸಮಾನ ರೀತಿಯಲ್ಲಿ ಅಂದಾಜು ಮಾಡಿದ್ದವು. ಆರ್​ಬಿಐ ಶೇ. 4.4ರಷ್ಟು ಜಿಡಿಪಿ ಬೆಳೆಯಬಹುದು ಎಂದು ನಿಖರವಾಗಿ ಅಂದಾಜು ಮಾಡಿತ್ತು. ಇಕ್ರಾ ರೇಟಿಂಗ್ ಏಜೆನ್ಸಿ ಶೇ. 5.1, ಎಸ್​ಬಿಐ ಶೇ. 4.6, ಬಾರ್ಕ್ಲೇಸ್ ಇಂಡಿಯಾ ಶೇ. 5 ರಷ್ಟು ಭಾರತದ ಜಿಡಿಪಿ ಬೆಳೆಯಬಹುದು ಎಂದು ಅಂದಾಜಿಸಿದ್ದವು.

ಎರಡನೇ ಮುಂಗಡ ಅಂದಾಜಿನ ಪ್ರಕಾರ, ಉತ್ಪಾದನೆ, ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ, ನಿರ್ಮಾಣ ಮತ್ತು ಕೃಷಿ ಚಟುವಟಿಕೆಗಳಲ್ಲಿ ನಿಧಾನಗತಿಯಿದ್ದರೆ, ವ್ಯಾಪಾರ, ಹೋಟೆಲ್‌ಗಳು, ಸಾರಿಗೆ, ಸಂವಹನ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಸೇವೆಗಳು ಸೇರಿದಂತೆ ಹಣಕಾಸು, ನೈಜ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು ಸೇವಾ ವಲಯದಲ್ಲಿ ಏರಿಕೆ ನಿರೀಕ್ಷಿಸಲಾಗಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಬೆಳವಣಿಗೆಯ ಪ್ರಕ್ಷೇಪಣವನ್ನು 7% ರಿಂದ 6.8% ಕ್ಕೆ ಇಳಿಸಿದೆ. 

ಏತನ್ಮಧ್ಯೆ, ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF) FY23 ಗಾಗಿ 6.8% ಬೆಳವಣಿಗೆಯನ್ನು ಅಂದಾಜು ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com