NDTV ಪ್ರತಿ ಷೇರಿಗೆ ಹೆಚ್ಚುವರಿ 48.65 ರೂ..; ಅದಾನಿ ಗ್ರೂಪ್ ಆಫರ್

ಖ್ಯಾತ ರಾಷ್ಟ್ರೀಯ ಸುದ್ದಿವಾಹಿನಿ ಎನ್ ಡಿಟಿವಿ ಷೇರು ಖರೀದಿ ಪ್ರಕ್ರಿಯೆಗೆ ಮುಂದಾಗಿರುವ ಅದಾನಿ ಸಮೂಹ ಇದೀಗ ಸುದ್ದಿವಾಹಿನಿ ಸಂಸ್ಥೆಗೆ ಮತ್ತೊಂದು ಆಫರ್ ನೀಡಿದ್ದು, ಈ ಹಿಂದೆ ತಾನು ಘೋಷಣೆ ಮಾಡಿದ್ದ ದರಕ್ಕಿಂತ ಪ್ರತೀ ಷೇರಿಗೆ ಹೆಚ್ಚುವರಿ 48.65 ರೂ ನೀಡುವುದಾಗಿ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಖ್ಯಾತ ರಾಷ್ಟ್ರೀಯ ಸುದ್ದಿವಾಹಿನಿ ಎನ್ ಡಿಟಿವಿ ಷೇರು ಖರೀದಿ ಪ್ರಕ್ರಿಯೆಗೆ ಮುಂದಾಗಿರುವ ಅದಾನಿ ಸಮೂಹ ಇದೀಗ ಸುದ್ದಿವಾಹಿನಿ ಸಂಸ್ಥೆಗೆ ಮತ್ತೊಂದು ಆಫರ್ ನೀಡಿದ್ದು, ಈ ಹಿಂದೆ ತಾನು ಘೋಷಣೆ ಮಾಡಿದ್ದ ದರಕ್ಕಿಂತ ಪ್ರತೀ ಷೇರಿಗೆ ಹೆಚ್ಚುವರಿ 48.65 ರೂ ನೀಡುವುದಾಗಿ ಘೋಷಣೆ ಮಾಡಿದೆ.

ಹೌದು.. ಅದಾನಿ ಗ್ರೂಪ್ NDTV ಮತ್ತೊಂದು ಓಪನ್ ಆಫರ್ ನೀಡಿದ್ದು, ಈ ಹಿಂದೆ ತಾನು ಖರೀದಿಸಿದ ಎನ್‌ಡಿಟಿವಿ ಷೇರುಗಳಿಗೆ ರೂ 48.65/ಷೇರಿಗೆ ಹೆಚ್ಚುವರಿ ಬೆಲೆಯನ್ನು ಪಾವತಿಸಲು ನಿರ್ಧರಿಸಿದೆ. ಈ ಹಿಂದೆ ತಾನು ಪ್ರತೀ ಷೇರಿಗೆ 294 ರೂ ನೀಡಿ ಖರೀದಿಸುವುದಾಗಿ ಹೇಳಿತ್ತು. ಇದೀಗ ಇದೇ ದರಕ್ಕೆ ಮತ್ತೆ ಹೆಚ್ಚುವರಿ 48.65 ರೂ ಸೇರಿಸಿ ಪ್ರತೀ ಷೇರಿಗೆ ಒಟ್ಟು  342.65 ರೂ ನೀಡುವುದಾಗಿ ಅದಾನಿ ಸಂಸ್ಥೆ ಘೋಷಣೆ ಮಾಡಿದೆ. 

ಈ ಹಿಂದೆ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (VCPL) ಸಂಸ್ಥೆಯ ಹೆಸರಿನಲ್ಲಿ ಅದಾನಿ ಸಮೂಹದ ಎಎಮ್‌ಜಿ ಮೀಡಿಯಾ, ಪರೋಕ್ಷವಾಗಿ ಎನ್‌ಡಿಟಿವಿಯ ಶೇ. 26 ರಷ್ಟು ಷೇರುಗಳ ಖರೀದಿ ಮಾಡಲು ನಿರ್ಧರಿಸಿತ್ತು.  ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಎಎಂಜಿ ಮೀಡಿಯಾ ನೆಟ್‌ವರ್ಕ್ಸ್‌ ಲಿಮಿಟೆಡ್ (AMNL) ಸಂಸ್ಥೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.

ಎನ್ ಡಿಟಿವಿ ಮೂರು ದಶಕಗಳಿಂದ ಪ್ರಮುಖ ಮಾಧ್ಯಮ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಂಪನಿಯು ಮೂರು ರಾಷ್ಟ್ರೀಯ ಸುದ್ದಿ ವಾಹಿನಿಗಳನ್ನು(NDTV 24x7, NDTV India and NDTV Profit) ಹೊಂದಿದೆ.

2022ರ ಆರ್ಥಿಕ ವರ್ಷದಲ್ಲಿ ಎನ್‌ಡಿಟಿವಿ ಒಟ್ಟು 421 ಕೋಟಿ ಆದಾಯ ಸಂಗ್ರಹಿಸಿತ್ತು. ಈ ಪೈಕಿ 85 ಕೋಟಿ ಲಾಭ ದಾಖಲಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com