ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರೇ ಹುಷಾರ್! ಸೈಬರ್ ಚೋರರಿಂದ ವಂಚನೆ, ತಪ್ಪಿಸಿಕೊಳ್ಳುವ ಮಾರ್ಗ

ಆಧುನಿಕತೆ ಹೆಚ್ಚಾದಂತೆ ತಂತ್ರಜ್ಞಾನ ಆಧಾರಿತ ಅಪರಾಧ, ವಂಚನೆ ಪ್ರಕರಣಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ.  ಡಿಜಿಟಲ್ ಅಕೌಂಟ್ ಖಾತೆಗಳು ಹ್ಯಾಕ್ ಆಗುತ್ತಿದ್ದು, ಜನರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.  ಅದರಲ್ಲೂ ದೇಶದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಹೆಸರಿನಲ್ಲೂ ಸೈಬರ್ ಚೋರರು ಜನರಿಗೆ ವಂಚಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಧುನಿಕತೆ ಹೆಚ್ಚಾದಂತೆ ತಂತ್ರಜ್ಞಾನ ಆಧಾರಿತ ಅಪರಾಧ, ವಂಚನೆ ಪ್ರಕರಣಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ.  ಡಿಜಿಟಲ್ ಅಕೌಂಟ್ ಖಾತೆಗಳು ಹ್ಯಾಕ್ ಆಗುತ್ತಿದ್ದು, ಜನರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.  ಅದರಲ್ಲೂ ದೇಶದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಹೆಸರಿನಲ್ಲೂ ಸೈಬರ್ ಚೋರರು ಜನರಿಗೆ ವಂಚಿಸುತ್ತಿದ್ದಾರೆ.

ಎಸ್ ಬಿಐ ಕ್ರೆಡಿಟ್ ಕಾರ್ಡ್ ಸರ್ವೀಸಸ್ (ಮೊಬೈಲ್ ನಂ-9091970642) ಎಂಬ ವಂಚಕ ಜಾಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಈ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರನ್ನು ಸುಲಭವಾಗಿ ವಂಚಿಸುತ್ತಿದೆ. ವಾಟ್ಸಾಪ್, ಫೇಸ್ ಬುಕ್ ಮತ್ತಿತರ ಕಡೆಗಳಲ್ಲಿ ಇದೇ ರೀತಿಯ ಬೋರ್ಡ್ ತಗುಲಿ ಹಾಕಿಕೊಂಡಿರುವ ಚೋರರು, ಜನರನ್ನು ಕ್ಷಣಮಾತ್ರದಲ್ಲಿ ಮರಳು ಮಾಡಿ ವಂಚಿಸುತ್ತಿದೆ. 

ವಂಚಕರ ಕುತಂತ್ರ: ಈ ವಂಚಕರು ಇದಕ್ಕಿದ್ದಂತೆ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಕರೆ ಮಾಡಿ, ನಯವಾಗಿ ಕಾರ್ಡಿನ ಬಗ್ಗೆ ಮಾಹಿತಿ ಪಡೆಯುತ್ತಾರೆ. ಒಂದು ವೇಳೆ ಕಾರ್ಡ್ ಹೊಂದಿದ್ದು, ಅದರಿಂದ ಯಾವುದೇ ವ್ಯವಹಾರ ಮಾಡದಿದ್ದಲ್ಲಿ ಸಂಪೂರ್ಣವಾಗಿ ಕಾರ್ಡ್ ಬ್ಲಾಕ್ ಮಾಡಿಸುವುದಾಗಿ ಹೇಳುತ್ತಾರೆ. ಒಂದು ವೇಳೆ ಕಾರ್ಡ್ ಬ್ಲಾಕ್ ಮಾಡಿ ಅಂತಾ ಹೇಳಿದ್ರೆ ಸಾಕು, ಕ್ರೆಡಿಟ್ ಕಾರ್ಡ್, ಆಧಾರ್ ಕಾರ್ಡ್,  ಫ್ಯಾನ್ ನಂಬರ್ ಮಾಹಿತಿ ಕೇಳುತ್ತಾರೆ. ನಾವು ಮೈ ಮರೆತು ಎಲ್ಲಾ ಮಾಹಿತಿ ನೀಡಿದರೆ ಮುಗೀತು ಒಂದೊಂದಾಗಿಯೇ ಅಕೌಂಟ್ ನ ಎಲ್ಲಾ ಮಾಹಿತಿಯನ್ನು ಬದಲಾವಣೆ ಮಾಡುತ್ತಾ ಹೋಗುತ್ತಾರೆ. ನಾವು ಒಟಿಪಿ ( ಒನ್ ಟೈಂ ಪಾಸ್ ವರ್ಡ್)  ಹೇಳುತ್ತಾ ಹೋದಂತೆ, ಅಕೌಂಟ್ ಸಂಪರ್ಕದ ನಂಬರ್ , ವಿಳಾಸ ಬದಲಾಯಿಸಿ, ಸುಲಭವಾಗಿ ಅವರ ಮೊಬೈಲ್ ನಿಂದ ನಮ್ಮ ಬ್ಯಾಂಕ್ ಆಕೌಂಟ್ ಪ್ರವೇಶಿಸುತ್ತಾರೆ.  ಆಗ ಸೈಬರ್ ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಲ್ಲ. 

ತಪ್ಪಿಸಿಕೊಳ್ಳುವ ಮಾರ್ಗ: ಡಿಜಿಟಲ್ ಅಕೌಂಟ್ ಹ್ಯಾಕ್ ಆಗುತ್ತಿದ್ದಂತೆ ನಿಮ್ಮ ಮೊಬೈಲ್ ಗೆ ಮೇಸೆಜ್  ಹಾಗೂ  ಇ-ಮೇಲ್ ವಿಳಾಸಕ್ಕೆ ಮೇಲ್ ಬರುತ್ತಿರುತ್ತದೆ. ಅದನ್ನು ಕಡ್ಡಾಯವಾಗಿ ನೋಡಿಕೊಳ್ಳಬೇಕು, ಇಲ್ಲವಾದರೆ ಸುಲಭವಾಗಿ ವಂಚಕರ ಕುತಂತ್ರಕ್ಕೆ ಬಲಿಪಶುವಾಗುತ್ತೀರಾ. ಅದರಲ್ಲೂ ಮುಖ್ಯವಾಗಿ ಒಟಿಪಿಯನ್ನು ಯಾವುದೇ ಕಾರಣಕ್ಕೂ ಅನಾಮಿಕರೊಂದಿಗೆ ಹಂಚಿಕೊಳ್ಳಬಾರದು. ಒಂದು ವೇಳೆ ಹ್ಯಾಕ್ ಆದರೂ ತಕ್ಷಣ ಕೆಡ್ರಿಟ್ ಕಾರ್ಡ್ ಹಿಂಬಾಗದಲ್ಲಿನ ಟೋಲ್ ಫ್ರೀ ನಂಬರ್ ಗೆ ಕರೆ ಮಾಡುವ ಮೂಲಕ ಕಾರ್ಡ್ ಬ್ಲಾಕ್ ಮಾಡಿಸಬೇಕು. ಒಂದು ಬಾರಿ ಕಾರ್ಡ್ ಬ್ಲಾಕ್ ಆಗುತ್ತಿದ್ದಂತೆ ಚೋರರು ಏನೇ ಮಾಡಿದರೂ ಹಂಚ ದೋಚಲು ಸಾಧ್ಯವಿರುವುದಿಲ್ಲ. ಇಲ್ಲವಾದರೆ ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಅಧಿಕೃತ ಎಸ್ ಬಿಟಿ ಕ್ರೆಡಿಟ್ ಸರ್ವಿಸ್ ಸೆಂಟರ್ ಸಂಪರ್ಕಿಸಿ ಕಾರ್ಡ್ ನ್ನು ತಾತ್ಕಾಲಿಕವಾಗಿ ಅಥವಾ ಸಂಪೂರ್ಣವಾಗಿ ಬಂದ್ ಮಾಡಿಸಬಹುದು

ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಗ್ಗೆಗಿನ ಸಂಪೂರ್ಣ ಮಾಹಿತಿಗೆ: ಎಂಬೆಸ್ಸಿ ಹೈಟ್ಸ್, ಎ ಬ್ಲಾಕ್, 10ನೇ ಮಹಡಿ, ಮ್ಯಾಗ್ರತ್ ರಸ್ತೆ, ಅಶೋಕ ನಗರ, ಬೆಂಗಳೂರು-560025 ಸಂಪರ್ಕಿಸಬಹುದು.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com