ಬೇಡಿಕೆ ಹೆಚ್ಚಳ: ಚಿನ್ನದ ಬೆಲೆ ದಾಖಲೆ ಏರಿಕೆ, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಹಳದಿ ಲೋಹ

ನೂತನ ವರ್ಷಾರಂಭದಲ್ಲೇ ಹಳದಿ ಲೋಹ ಚಿನ್ನದ ದರ ಮತ್ತೆ ದಾಖಲೆಯ ಮಟ್ಟಕ್ಕೇರಿದ್ದು, ಈ ಹಿಂದಿನ ಹಳೆಯ ದಾಖಲೆಗಳನ್ನು ಹಿಂದಿಕ್ಕಿ ನೂತನ ಗರಿಷ್ಠ ಮಟ್ಟಕ್ಕೇರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ನೂತನ ವರ್ಷಾರಂಭದಲ್ಲೇ ಹಳದಿ ಲೋಹ ಚಿನ್ನದ ದರ ಮತ್ತೆ ದಾಖಲೆಯ ಮಟ್ಟಕ್ಕೇರಿದ್ದು, ಈ ಹಿಂದಿನ ಹಳೆಯ ದಾಖಲೆಗಳನ್ನು ಹಿಂದಿಕ್ಕಿ ನೂತನ ಗರಿಷ್ಠ ಮಟ್ಟಕ್ಕೇರಿದೆ.

MCX ಗೋಲ್ಡ್ ಫ್ಯೂಚರ್ಸ್ ನ ವರದಿಯಂತೆ ಶುಕ್ರವಾರ 10 ಗ್ರಾಂ ಚಿನ್ನದ ದರ 56,245 ರೂ.ಗೆ ಏರಿದ್ದು, ಆಗಸ್ಟ್ 2020 ರಲ್ಲಿ ಹಿಂದಿನ ದಾಖಲೆಯ 56,191 ದಾಖಲೆಯನ್ನು ಹಿಂದಿಕ್ಕಿ ನೂತನ ದಾಖಲೆ ನಿರ್ಮಾಣ ಮಾಡಿದೆ. 

ಬೆಲೆ ಏರಿಕೆಯಿಂದಾಗಿ ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಸಿದಿದೆ. ಇಂದು 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ 200 ರೂ. ಹೆಚ್ಚಾಗಿದ್ದು, 24 ಕ್ಯಾರೆಟ್​​ನ 10 ಗ್ರಾಂ ಬಂಗಾರದ ದರ 220 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 100 ರೂ. ಹೆಚ್ಚಾಗಿದೆ. ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಆರ್ಥಿಕ ಹಿಂಜರಿತ, ಹೆಚ್ಚಿನ ಹಣದುಬ್ಬರ, ಕುಸಿಯುತ್ತಿರುವ ಡಾಲರ್ ಮತ್ತು ಅನಿಶ್ಚಿತ ಭೌಗೋಳಿಕ ರಾಜಕೀಯ ಪರಿಸ್ಥಿತಿಯೊಂದಿಗೆ, ಚಿನ್ನವು 2023 ರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾಗರೋತ್ತರ ಮಾರುಕಟ್ಟೆಯಲ್ಲಿ, ಚಿನ್ನದದರ ಪ್ರತಿ ಔನ್ಸ್‌ಗೆ 1,898 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದ್ದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದರದಲ್ಲಿ ಶೇ. 0.21% ರಷ್ಟು ಏರಿಕೆಯಾಗಿ ರೂ 55,990 ಕ್ಕೆ ಕೊನೆಗೊಂಡಿತು. ಜಾಗತಿಕ ಅಂಶಗಳು ಚಿನ್ನದ ಬೆಲೆ ಏರಿಕೆಯ ಹಿಂದಿನ ಪ್ರಮುಖ ಅಂಶಗಳಾಗಿವೆ. ಅಮೆರಿಕದಲ್ಲಿ ಚಿಲ್ಲರೆ ಹಣದುಬ್ಬರವು 14 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿರುವುದು ಮತ್ತು ಡಾಲರ್‌ನ ದುರ್ಬಲತೆಯು ಚಿನ್ನದ ಬೆಲೆಗಳು ಏರಿಕೆಯಲ್ಲಿ ಪಾತ್ರವಹಿಸಿದೆ ಎನ್ನಲಾಗಿದೆ.

ಗುರುವಾರ ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಮೆರಿಕ ಗ್ರಾಹಕ ಬೆಲೆಗಳು ನವೆಂಬರ್‌ನಲ್ಲಿ 7.1% ರಿಂದ ಡಿಸೆಂಬರ್‌ನಲ್ಲಿ 6.5% ಕ್ಕೆ ಇಳಿದವು,

ದರ ಏರಿಕೆಗೆ ಕಾರಣವೇನು?
ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಳ ಮಾಡಿರುವುದು ಮತ್ತು ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಜಗತ್ತಿನ ವಿವಿಧ ದೇಶಗಳಲ್ಲಿ ಚಾಲ್ತಿಯಲ್ಲಿರುವ ಆರ್ಥಿಕ ಹಿಂಜರಿತದಿಂದಾಗಿ ಹಳದಿ ಲೋಹ ಚಿನ್ನದ ದರ ಏರಿಕೆಯಾಗುತ್ತಿದೆ ಎಂದು ಕೊಟಾಕ್ ಸೆಕ್ಯುರಿಟೀಸ್‌ನ ವಿಪಿ-ಹೆಡ್ ಕಮಾಡಿಟಿ ರಿಸರ್ಚ್ ರವೀಂದ್ರ ವಿ ರಾವ್ ಅಭಿಪ್ರಾಯಪಟ್ಟಿದ್ದಾರೆ. CME ಫೆಡ್ ವಾಚ್ ಟೂಲ್ ಪ್ರಕಾರ, ಫೆಬ್ರವರಿ FOMC ಸಭೆಯಲ್ಲಿ ಫೆಡರಲ್ ಬ್ಯಾಂಕ್ 25-bps ಹೆಚ್ಚಳ ಮಾಡಿದ್ದು, ಸಂಭವನೀಯತೆಯು ಶೇಕಡಾ 92.7 ಕ್ಕೆ ಏರಿದೆ. ಇದು 8 ತಿಂಗಳ ಗರಿಷ್ಠವಾದ ಅಂದರೆ 1,884 ಡಾಲರ್ ಪ್ರತಿರೋಧದ ಮೇಲೆ ವ್ಯಾಪಾರ ಮಾಡಲು ಚಿನ್ನದ ಬೆಲೆಗಳ ಏರಿಕೆಯನ್ನು ಬೆಂಬಲಿಸಿದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೇ ಜಾಗತಿಕವಾಗಿ ಡಾಲರ್‌ನ ದುರ್ಬಲಗೊಳ್ಳುವಿಕೆ, ಹಿಂಜರಿತದ ಭಯ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಯು ಡಾಲರ್‌ಗೆ ಬೇಡಿಕೆಯನ್ನು ಹೆಚ್ಚಿಸಬಹುದು. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣ, ಜೀವನ ವೆಚ್ಚದ ಬಿಕ್ಕಟ್ಟು ಮತ್ತು ಪ್ರಮುಖ ಆರ್ಥಿಕತೆಗಳಲ್ಲಿನ ನಿಧಾನಗತಿಯ ನಂತರ ಜಾಗತಿಕ ಆರ್ಥಿಕತೆಯು ಕಷ್ಟಕರ ಸಮಯವನ್ನು ಎದುರಿಸಲಿದೆ. ಅಲ್ಲದೆ, ಚೀನಾದ ಆರ್ಥಿಕ ಬೆಳವಣಿಗೆಯು ಈ ವರ್ಷ ಸುಧಾರಿಸುವ ಸಾಧ್ಯತೆ ಇದ್ದು, ಇದು ಹಳದಿ ಲೋಹದ ಬೇಡಿಕೆಯನ್ನು ಉತ್ತೇಜಿಸುತ್ತದೆ. 2022 ರ ಮೂರನೇ ತ್ರೈಮಾಸಿಕದಲ್ಲಿ ಚಿನ್ನದ ಕೇಂದ್ರ ಬ್ಯಾಂಕ್ ಬೇಡಿಕೆಯಲ್ಲಿ ತೀವ್ರ ಏರಿಕೆಯಾದ ನಂತರ, ಹಳದಿ ಲೋಹದ ಅಧಿಕೃತ ವಲಯದ ಬೇಡಿಕೆಯ ದೃಷ್ಟಿಕೋನವು 2023 ರಲ್ಲಿ ಚೇತರಿಸಿಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com