ಆದಾಯ ತೆರಿಗೆ ಸಲ್ಲಿಕೆ (ಸಂಗ್ರಹ ಚಿತ್ರ)
ಆದಾಯ ತೆರಿಗೆ ಸಲ್ಲಿಕೆ (ಸಂಗ್ರಹ ಚಿತ್ರ)

3 ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ: ತೆರಿಗೆ ಇಲಾಖೆ

ಈ ವರೆಗೂ 3 ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗಳಾಗಿವೆ ಎಂದು ಕೇಂದ್ರ ಆದಾಯ ತೆರಿಗೆ ಇಲಾಖೆ ಬುಧವಾರ ಮಾಹಿತಿ ನೀಡಿದೆ.

ನವದೆಹಲಿ: ಈ ವರೆಗೂ 3 ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗಳಾಗಿವೆ ಎಂದು ಕೇಂದ್ರ ಆದಾಯ ತೆರಿಗೆ ಇಲಾಖೆ ಬುಧವಾರ ಮಾಹಿತಿ ನೀಡಿದೆ.

2022-23ನೇ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯಕ್ಕಾಗಿ 3 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಇಲ್ಲಿಯವರೆಗೆ ಸಲ್ಲಿಸಲಾಗಿದೆ, ಅದರಲ್ಲಿ 91 ಪ್ರತಿಶತವನ್ನು ವಿದ್ಯುನ್ಮಾನವಾಗಿ ಪರಿಶೀಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತಿಳಿಸಿದೆ.

ಜುಲೈ 18, 2023 ರವರೆಗೆ ಸಲ್ಲಿಸಲಾದ 3.06 ಕೋಟಿ ಐಟಿಆರ್‌ಗಳಲ್ಲಿ, 2.81 ಕೋಟಿ ಐಟಿಆರ್‌ಗಳನ್ನು ಇ-ಪರಿಶೀಲನೆಗೊಳಪಡಿಸಲಾಗಿದೆ. ಅಂದರೆ ಸಲ್ಲಿಸಿದ ಶೇಕಡಾ 91 ಕ್ಕೂ ಹೆಚ್ಚು ಐಟಿಆರ್‌ಗಳನ್ನು ಇ-ಪರಿಶೀಲನೆದೊಳಪಡಿಸಲಾಗಿದೆ. ಇ-ದೃಢೀಕೃತ ಐಟಿಆರ್‌ಗಳಲ್ಲಿ 1.50 ಕೋಟಿಗೂ ಹೆಚ್ಚು ಐಟಿಆರ್‌ಗಳು ಈಗಾಗಲೇ ಪ್ರಕ್ರಿಯೆಗೊಳಿಸಲಾಗಿದೆ" ಎಂದು ಐಟಿ ಇಲಾಖೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಯಲ್ಲಿ 3 ಕೋಟಿ ಮೈಲಿಗಲ್ಲು ಈ ವರ್ಷ 7 ದಿನಗಳ ಮೊದಲೇ ತಲುಪಿದೆ ಎಂದು ಆದಾಯ ಇಲಾಖೆ ಮಾಹಿತಿ ನೀಡಿದೆ.
 

Related Stories

No stories found.

Advertisement

X
Kannada Prabha
www.kannadaprabha.com