ತಿಂಗಳ ಮೊದಲ ದಿನವೇ ಗ್ರಾಹಕರಿಗೊಂದು ಸಿಹಿ ಸುದ್ದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ!

ಮೇ ತಿಂಗಳ ಮೊದಲ ದಿನ ತೈಲ ಕಂಪನಿಗಳು ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿವೆ. ಮೇ 1 ರಂದು ವಾಣಿಜ್ಯ ಬಳಕೆಯ ಎಲ್'ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಮಾಡಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮೇ ತಿಂಗಳ ಮೊದಲ ದಿನ ತೈಲ ಕಂಪನಿಗಳು ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿವೆ. ಮೇ 1 ರಂದು ವಾಣಿಜ್ಯ ಬಳಕೆಯ ಎಲ್'ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಮಾಡಿವೆ.

ವಾಣಿಜ್ಯ ಅನಿಲ ಸಿಲಿಂಡರ್‌ ಗಳ ಬೆಲೆಯಲ್ಲಿ ಈ ಕಡಿತವನ್ನು ಸರ್ಕಾರಿ ತೈಲ ಕಂಪನಿಗಳು ಮಾಡಿವೆ. ಇದರೊಂದಿಗೆ ಜೆಟ್ ಇಂಧನ ಬೆಲೆಯನ್ನೂ ಕಡಿತಗೊಳಿಸಲಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳು ಇಂದು 19 ಕೆಜಿ ವಾಣಿಜ್ಯ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 172 ರೂ. ಇಳಿಸಿದೆ.

ತೈಲ ಕಂಪನಿಗಳು ಜೆಟ್ ಇಂಧನ (ವಾಯು ಇಂಧನ) ಬೆಲೆಯನ್ನು 2415 ರೂ.ವರೆಗೆ ಕಡಿಮೆ ಮಾಡಿದೆ. ಹೊಸ ದರಗಳು ಮೇ 1 ರಿಂದ ಜಾರಿಗೆ ಬಂದಿವೆ. ಆದರೆ, ಗೃಹಬಳಕೆಯ ಎಲ್‌ ಪಿ ಜಿ ಸಿಲಿಂಡರ್‌ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ವಾಣಿಜ್ಯ ಗ್ಯಾಸ್ ಸಿಲಿಂಡರ್ ಈ ಹಿಂದೆ ದೆಹಲಿಯಲ್ಲಿ 2028 ರೂ.ಗೆ ಲಭ್ಯವಿತ್ತು, ಆದರೆ, ಈಗ ಅದು 1856.50 ರೂ.ಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ 2132 ರೂ.ಗೆ ಸಿಗುವ ಸಿಲಿಂಡರ್ ಈಗ 1960.50 ರೂ.ಗೆ ಲಭ್ಯವಾಗಲಿದೆ.

ಮುಂಬೈ ಬಗ್ಗೆ ಹೇಳುವುದಾದರೆ, ಈ ಮೊದಲು ವಾಣಿಜ್ಯ ಗ್ಯಾಸ್ ಸಿಲಿಂಡರ್ 1980 ರೂ. ಗೆ ಸಿಗುತ್ತಿತ್ತು. ಈಗ ಅದು 1808.50 ರೂ.ಗೆ ಇಳಿದಿದೆ. ಮತ್ತೊಂದೆಡೆ, ಚೆನ್ನೈನಲ್ಲಿ 2192.50 ರೂ.ಗಳ ಸಿಲಿಂಡರ್ ಗೆ ಈಗ 2021.50 ರೂ.ಗಳನ್ನು ಪಾವತಿಸಬೇಕಾಗುತ್ತದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 14 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ 1115.5 ರೂಪಾಯಿ ಆಗಿದ್ದರೆ, 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯೂ 1856 ರೂಪಾಯಿಯಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com