ಮಾವು ರಫ್ತು
ಮಾವು ರಫ್ತು

ಕೆಂಪೇಗೌಡ ವಿಮಾನ ನಿಲ್ದಾಣದ ಮಾವು ರಫ್ತು ಪ್ರಮಾಣದಲ್ಲಿ ಶೇ.124 ರಷ್ಟು ಹೆಚ್ಚಳ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (KIAB/BLR ವಿಮಾನ ನಿಲ್ದಾಣ) ಮಾವು ರಫ್ತಿನಲ್ಲಿ ಗಮನಾರ್ಹ ಏರಿಕೆ ದಾಖಲಿಸಿದೆ.
Published on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (KIAB/BLR ವಿಮಾನ ನಿಲ್ದಾಣ) ಮಾವು ರಫ್ತಿನಲ್ಲಿ ಗಮನಾರ್ಹ ಏರಿಕೆ ದಾಖಲಿಸಿದೆ.

ರಫ್ತಿನಲ್ಲಿ ಸ್ಥಿರವಾದ ಮೇಲ್ಮುಖ ಪ್ರವೃತ್ತಿಯನ್ನು ಪ್ರದರ್ಶಿಸುವ ಮೂಲಕ, BLR ವಿಮಾನ ನಿಲ್ದಾಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಋತುವಿನಲ್ಲಿ ಮಾವು ರಫ್ತಿನಲ್ಲಿ ಶೇ. 124ರಷ್ಟು ಏರಿಕೆ ಕಂಡಿದ್ದು, ಮೂರು ವರ್ಷಗಳ ದಾಖಲೆಯನ್ನು ನಿರ್ಮಿಸಿದೆ.

2023 ರಲ್ಲಿ, BLR ವಿಮಾನ ನಿಲ್ದಾಣವು 6,84,648 ಕೆ.ಜಿ.ಯಷ್ಟು ಮಾವಿನಹಣ್ಣನ್ನು ರಫ್ತು ಮಾಡಿದೆ, ಹಿಂದಿನ ವರ್ಷದಲ್ಲಿ ರಫ್ತು ಮಾಡಲಾದ 3,05,521 ಕೆ.ಜಿ.ಗಿಂತ ಗಮನಾರ್ಹ ಏರಿಕೆಯನ್ನು ತೋರಿಸುತ್ತದೆ. ಇದಲ್ಲದೆ, ಈ ಋತುವಿನಲ್ಲಿ ಕಾಯಿಗಳ ರಫ್ತಿನಲ್ಲಿ ಪ್ರಭಾವಶಾಲಿ ಶೇ.86 ಹೆಚ್ಚಳ ಕಂಡಿದೆ, ಸರಿಸುಮಾರು 17 ಲಕ್ಷ ಮಾವಿನಹಣ್ಣುಗಳನ್ನು ರಫ್ತು ಮಾಡಲಾಗಿದೆ.

BLR ವಿಮಾನ ನಿಲ್ದಾಣದ ವಿಸ್ತಾರವಾದ ರಫ್ತು ಜಾಲವು 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ವ್ಯಾಪಿಸಿದೆ. ಈ ವರ್ಷ ಯುನೈಟೆಡ್ ಸ್ಟೇಟ್ಸ್‌ಗೆ ಮಾವಿನಹಣ್ಣಿನ ರಫ್ತು ವಿಶೇಷವಾಗಿ ಗಮನಾರ್ಹವಾಗಿದೆ. ಅಲ್ಲಿ ಡಲ್ಲಾಸ್ ಫೋರ್ಟ್ ವರ್ತ್, ವಾಷಿಂಗ್ಟನ್ ಡಿಸಿ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಂತಹ ಪ್ರಮುಖ ಮೆಟ್ರೋಪಾಲಿಟನ್ ಪ್ರದೇಶಗಳು ಈ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್ ಮಾತನಾಡಿ, “ಬಿಎಲ್‌ಆರ್ ವಿಮಾನ ನಿಲ್ದಾಣವು ಭಾರತದಿಂದ ಫೆರಿಷಬಲ್‌ ರಫ್ತುಗಳನ್ನು ಸುಗಮಗೊಳಿಸುವಲ್ಲಿ ಚಾಲನಾ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಗಣನೀಯ ಪ್ರಮಾಣದ ಷೇರುಗಳೊಂದಿಗೆ, ದಕ್ಷಿಣ ಭಾರತದ ಮಾವಿನಹಣ್ಣಿನ ಜಾಗತಿಕ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ನಮ್ಮ ಪಾತ್ರದ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ.

ಸುವ್ಯವಸ್ಥಿತ ಕೂಲ್-ಪೋರ್ಟ್ ರಫ್ತು ಕಾರ್ಯಾಚರಣೆಗಳಿಗೆ ನಮ್ಮ ಅಚಲ ಬದ್ಧತೆಯು BLR ವಿಮಾನ ನಿಲ್ದಾಣದ ಮಹತ್ವವನ್ನು ಒತ್ತಿ ಹೇಳುತ್ತದೆ, ಇದು ನಮ್ಮ ಪ್ರದೇಶದ ಶ್ರೀಮಂತ ಉತ್ಪನ್ನಗಳಿಗೆ ಜಗತ್ತನ್ನು ಸಂಪರ್ಕಿಸುವ ಪ್ರಮುಖ ಗೇಟ್‌ವೇ ಆಗಿದೆ ಎಂದರು."

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com