
ನಿರುದ್ಯೋಗ ಪ್ರಮಾಣ ಹೆಚ್ಚು!
ನವದೆಹಲಿ: ಭಾರತದ ನಿರುದ್ಯೋಗ ದರ 3 ತಿಂಗಳಲ್ಲೇ ಗರಿಷ್ಠ ಪ್ರಮಾಣ ತಲುಪಿದ್ದು ಮಾರ್ಚ್ ತಿಂಗಳಲ್ಲಿ ಶೇ.7.8 ಕ್ಕೆ ಏರಿಕೆಯಾಗಿದೆ
ದೇಶದ ಕಾರ್ಮಿಕ ಮಾರುಕಟ್ಟೆ ಕುಸಿದಿರುವ ಪರಿಣಾಮ ನಿರುದ್ಯೋಗ ಹೆಚ್ಚಳವಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಹೇಳಿದೆ.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ನಂಬರ್ 4: ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ
2022 ರ ಡಿಸೆಂಬರ್ ನಲ್ಲಿ ದೇಶದ ನಿರುದ್ಯೋಗ ದರ ಶೇ.8.30 ರನ್ನು ತಲುಪಿತ್ತು ಇದು ಜನವರಿ ತಿಂಗಳಲ್ಲಿ ಶೇ.7.14 ರಷ್ಟಕ್ಕೆ ಇಳಿಕೆಯಾಗಿತ್ತು. ಬಳಿಕ ಮತ್ತೆ ಫೆಬ್ರವರಿ ತಿಂಗಳಲ್ಲಿ ಮತ್ತೆ ಶೇ.7.45 ಕ್ಕೆ ಏರಿಕೆಯಾಗಿತ್ತು ಎಂದು ಸಿಎಂಐಇ ಡೇಟಾ ತಿಳಿಸಿದೆ.
ಮಾರ್ಚ್ ವೇಳೆಗೆ ನಿರುದ್ಯೋಗ ದರ ನಗರ ಪ್ರದೇಶಗಳಲ್ಲಿ ಶೇ.8.4 ರಷ್ಟಿದ್ದರೆ ಗ್ರಾಮೀಣ ಪ್ರದೇಶಗಳಲ್ಲಿ ಶೇ.7.5 ರಷ್ಟಿದೆ.