12,000 ಸಿಬ್ಬಂದಿಗಳ ವಜಾ ಮಾಡದಿದ್ದರೆ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಿತ್ತು: ಗೂಗಲ್ ಸಿಇಒ ಸುಂದರ್ ಪಿಚೈ

ಗೂಗಲ್ ಸಂಸ್ಛೆಯಿಂದ 12 ಸಾವಿರ ಸಿಬ್ಬಂದಿಗಳ ವಜಾ ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಗೂಗಲ್ ಸಿಇಒ ಸುಂದರ್ ಪಿಚೈ ಅವರು, ಸಿಬ್ಬಂದಿಗಳ ವಜಾ ಮಾಡದಿದ್ದರೆ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಿತ್ತು ಎಂದು ಹೇಳಿದ್ದಾರೆ.
ಗೂಗಲ್ ಸಿಇಒ ಸುಂದರ್ ಪಿಚೈ
ಗೂಗಲ್ ಸಿಇಒ ಸುಂದರ್ ಪಿಚೈ

ಬೆಂಗಳೂರು: ಗೂಗಲ್ ಸಂಸ್ಛೆಯಿಂದ 12 ಸಾವಿರ ಸಿಬ್ಬಂದಿಗಳ ವಜಾ ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಗೂಗಲ್ ಸಿಇಒ ಸುಂದರ್ ಪಿಚೈ ಅವರು, ಸಿಬ್ಬಂದಿಗಳ ವಜಾ ಮಾಡದಿದ್ದರೆ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಿತ್ತು ಎಂದು ಹೇಳಿದ್ದಾರೆ.

ಕಂಪನಿಯ ಆಂತರಿಕ ಸಭೆಯಲ್ಲಿ ಪಿಚೈ ಈ ರೀತಿ ಹೇಳಿಕೆ ನೀಡಿದ್ದು, ಇನ್ನಷ್ಟು ಕಠಿಣ ಸಮಸ್ಯೆ ಎದುರಿಸುವುದನ್ನು ತಪ್ಪಿಸಲು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಯ್ತು ಎಂದು ಪಿಚೈ ಹೇಳಿದ್ದಾರೆ.

ಗೂಗಲ್‌ನ ಒಟ್ಟು ಸಿಬ್ಬಂದಿಗಳ ಪೈಕಿ ಶೇ 6 ಅಂದರೆ 12,000 ಮಂದಿಯನ್ನು ಕೆಲಸದಿಂದ ಕಿತ್ತು ಹಾಕಿದ ಬೆನ್ನಲ್ಲೇ, ಅವರು ಈ ರೀತಿಯಾಗಿ ಹೇಳಿದ್ದಾರೆ.

‘ಕಂಪನಿಯ ಸಂಸ್ಥಾಪಕರು ಹಾಗೂ ನಿರ್ದೇಶಕರೊಂದಿಗೆ ಚರ್ಚೆ ಮಾಡಿ ಸಿಬ್ಬಂದಿ ಸಂಖ್ಯೆಯನ್ನು ಶೇ.6 ರಷ್ಟು ಕಡಿಮೆ ಮಾಡಲು ನಿರ್ಧರಿಸಲಾಯಿತು. ಒಂದು ವೇಳೆ ನಾವು ಸ್ಪಷ್ಟವಾಗಿ, ನಿರ್ಣಾಯಕವಾಗಿ ಮತ್ತು ತ್ವರಿತವಾಗಿ ಕೆಲಸ ಮಾಡಿದೇ ಇದ್ದರೆ, ಸಮಸ್ಯೆಗಳು ಹೆಚ್ಚಾಗಿ, ಇದಕ್ಕಿಂತ ಕಠಿಣ ಸಮಸ್ಯೆ ಎದುರಿಸಬೇಕಿತ್ತು. ಹೀಗಾಗಿ ನಾನು ಈ ನಿರ್ಧಾರ ಮಾಡಿದೆ‘ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ಶುಕ್ರವಾರ ಉದ್ಯೋಗ ಕಡಿತದ ಬಗ್ಗೆ ಉದ್ಯೋಗಿಗಳಿಗೆ ಇ–ಮೇಲ್‌ ಮಾಡಿದ್ದ ಅವರು, ‘ನಾನು ನಿಮ್ಮೊಂದಿಗೆ ಬೇಸರದ ಸಂಗತಿಯನ್ನು ಹಂಚಿಕೊಳ್ಳಬೇಕಿದೆ. ನಾವು ನಮ್ಮ ಸಿಬ್ಬಂದಿಯನ್ನು ಸುಮಾರು 12000 ದಷ್ಟು ಕಡಿಮೆ ಮಾಡಲು ಮುಂದಾಗಿದ್ದೇವೆ. ಇದರ ಪರಿಣಾಮ ಎದುರಿಸುವ ಅಮೆರಿಕದ ಉದ್ಯೋಗಿಗಳಿಗೆ ನಾವು ಈಗಾಗಲೇ ಮೇಲ್ ಮಾಡಿದ್ದೇವೆ. ಇತರೆ ರಾಷ್ಟ್ರಗಳಲ್ಲಿ ಅಲ್ಲಿನ ಸ್ಥಳೀಯ ಕಾನೂನಿಗನ್ವಯ ಈ ಪ್ರಕ್ರಿಯೆ ತಡವಾಗಬಹುದು‘ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com