ಜಾಗತಿಕ ಆರ್ಥಿಕತೆಯಲ್ಲಿ ಈಗ ಭಾರತವೇ ಆಶಾಕಿರಣ: ವಿಶ್ವಸಂಸ್ಥೆಯ ಟಾಪ್ ಅರ್ಥಶಾಸ್ತ್ರಜ್ಞ
ಜಾಗತಿಕ ಆರ್ಥಿಕತೆಯಲ್ಲಿ ಈಗ ಭಾರತವೇ ಆಶಾಕಿರಣ ಎಂದು ವಿಶ್ವಸಂಸ್ಥೆಯ ಉನ್ನತ ಅರ್ಥಶಾಸ್ತ್ರಜ್ಞರು ಹೇಳಿದ್ದು, ಭಾರತ ಸದೃಢವಾದ ಹೆಜ್ಜೆಗಳನ್ನಿಡುತ್ತಿದೆ ಎಂದಿದ್ದಾರೆ.
Published: 26th January 2023 03:47 PM | Last Updated: 28th January 2023 03:53 PM | A+A A-

ಆರ್ಥಿಕತೆ
ವಿಶ್ವಸಂಸ್ಥೆ: ಜಾಗತಿಕ ಆರ್ಥಿಕತೆಯಲ್ಲಿ ಈಗ ಭಾರತವೇ ಆಶಾಕಿರಣ ಎಂದು ವಿಶ್ವಸಂಸ್ಥೆಯ ಉನ್ನತ ಅರ್ಥಶಾಸ್ತ್ರಜ್ಞರು ಹೇಳಿದ್ದು, ಭಾರತ ಸದೃಢವಾದ ಹೆಜ್ಜೆಗಳನ್ನಿಡುತ್ತಿದೆ ಎಂದಿದ್ದಾರೆ.
ಮುಂದಿನ ವರ್ಷ ಶೇ.6.7 ರಷ್ಟು ಬೆಳವಣಿಗೆ ಸಾಧ್ಯವಿದ್ದು, ಉಳಿದ ಜಿ20 ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಆರ್ಥಿಕ ಬೆಳವಣಿಗೆ ದರ ಅಧಿಕವಾಗಿದೆ ಎಂದು ವಿಶ್ವಸಂಸ್ಥೆ ಅರ್ಥಶಾಸ್ತ್ರಜ್ಞ ಹಮೀದ್ ರಶೀದ್ ಹೇಳಿದ್ದಾರೆ.
ಹಮೀದ್ ರಶೀದ್, ವಿಶ್ವಸಂಸ್ಥೆಯ-ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ಜಾಗತಿಕ ಆರ್ಥಿಕ ಮೇಲ್ವಿಚಾರಣಾ ಶಾಖೆಯ ಮುಖ್ಯಸ್ಥರಾಗಿದ್ದು ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯ 2023 ವರದಿಯ ಬಿಡುಗಡೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಈಗ ಭಾರತವೇ ಆಶಾಕಿರಣ ಎಂದು ಹೇಳಿದ್ದಾರೆ.
ವರದಿಯಲ್ಲಿ ಭಾರತದ ಜಿಡಿಪಿ 2023 ರಲ್ಲಿ 5.8 ರಷ್ಟು ಮಧ್ಯಮ ಬೆಳವಣಿಗೆಗೆ ಪ್ರಕ್ಷೇಪಿಸಲಾಗಿದೆ. ದಕ್ಷಿಣ ಏಷ್ಯಾದ ರಾಷ್ಟ್ರಗಳ ಭವಿಷ್ಯ ಸವಾಲಿನಿಂದ ಕೂಡಿದ್ದು, ಭಾರತ 2024 ರಲ್ಲಿ ಶೇ.6.7 ಬೆಳವಣಿಗೆ ದಾಖಲಿಸುವ ಸಾಧ್ಯತೆ ಇದ್ದು, ಜಗತ್ತಿನಲ್ಲಿ ಅತಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ಆರ್ಥಿಕತೆಯಾಗಿರಲಿದೆ ಎಂದು ರಶೀದ್ ಹೇಳಿದ್ದಾರೆ.
ಇದನ್ನೂ ಓದಿ: ಜಾಗತಿಕ ವಿತ್ತ ಜಗತ್ತಿನ 2023ರ ಮುನ್ನೋಟ ಇಲ್ಲಿದೆ... (ಹಣಕ್ಲಾಸು)
ಜಿ-20 ಸದಸ್ಯ ರಾಷ್ಟ್ರಗಳ ಪೈಕಿ ಭಾರತದ್ದೇ ಹೆಚ್ಚಿನ ಬೆಳವಣಿಗೆಯಾಗಿರಲಿದೆ. ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟ್ರ್ಕಿಯೆ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್) ಮತ್ತು ಯುರೋಪಿಯನ್ ಯೂನಿಯನ್ ಜಿ 20 ಸದಸ್ಯ ರಾಷ್ಟ್ರಗಳಾಗಿರಲಿವೆ.
ಇದು ಭಾರತಕ್ಕೆ ಸ್ಥಿರ ಬೆಳವಣಿಗೆಯಾಗಿದ್ದು, ಹೆಚ್ಚಿನ ಮಂದಿ ಬಡತನದಲ್ಲಿ ಜೀವಿಸುತ್ತಿರುವವರಿಗೂ ಇದರಿಂದ ದೊಡ್ಡ ಉತ್ತೇಜನ ಸಿಗಲಿದೆ. ಭಾರತ ಒಂದು ವೇಳೆ ಈ ಬೆಳವಣಿಗೆಯ ದರವನ್ನು ಉಳಿಸಿಕೊಂಡಲ್ಲಿ, ಸ್ಥಿರ ಅಭಿವೃದ್ಧಿಗಳಿಗೆ ಸಂಬಂಧಿಸಿದ ಗುರಿ, ಜಾಗತಿಕ ಮಟ್ಟದಲ್ಲಿ ಬಡತನ ಕಡಿಮೆ ಮಾಡುವ ಉದ್ದೇಶಗಳಿಗೆ ಸಹಕಾರಿಯಾಗಕಿದೆ ಎಂದು ರಶೀದ್ ಹೇಳಿದ್ದಾರೆ.