2022ರಲ್ಲಿ ಶೇ.6.8 ರಿಂದ 2023ರಲ್ಲಿ ಶೇ.6.1ಕ್ಕೆ ಭಾರತದ ಆರ್ಥಿಕತೆ ಇಳಿಕೆ ನಿರೀಕ್ಷೆ: ಐಎಂಎಫ್

ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ನಿಧಾನಗತಿಯಲ್ಲಿ ಸಾಗಬಹುದು. ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯನ್ನು ಶೇಕಡಾ 6.8 ರಿಂದ ಶೇಕಡಾ 6.1 ಕ್ಕೆ ಇಳಿಕೆಯಾಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಹೇಳಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ
ಅಂತಾರಾಷ್ಟ್ರೀಯ ಹಣಕಾಸು ನಿಧಿ

ವಾಷಿಂಗ್ಟನ್: ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ನಿಧಾನಗತಿಯಲ್ಲಿ ಸಾಗಬಹುದು. ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯನ್ನು ಶೇಕಡಾ 6.8 ರಿಂದ ಶೇಕಡಾ 6.1 ಕ್ಕೆ ಇಳಿಕೆಯಾಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಹೇಳಿದೆ.

IMF ಮಂಗಳವಾರ ತನ್ನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್‌ನ ಜನವರಿ ತಿಂಗಳ ಅಂಕಿಅಂಶವನ್ನು ಬಿಡುಗಡೆ ಮಾಡಿದೆ, ಅದರ ಪ್ರಕಾರ ಜಾಗತಿಕ ಬೆಳವಣಿಗೆಯು 2022 ರಲ್ಲಿ ಅಂದಾಜು 3.4 ಶೇಕಡಾದಿಂದ 2023 ರಲ್ಲಿ 2.9 ಶೇಕಡಾಕ್ಕೆ ಕುಸಿಯುತ್ತದೆ, ನಂತರ 2024 ರಲ್ಲಿ 3.1 ಶೇಕಡಾಕ್ಕೆ ಏರುತ್ತದೆ.

"ಭಾರತದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ನಾವು 6.8 ಶೇಕಡಾ ಬೆಳವಣಿಗೆಯನ್ನು ಹೊಂದಿದ್ದೇವೆ, ಇದು ಮಾರ್ಚ್‌ವರೆಗೆ ಮುಂದುವರಿಯುತ್ತದೆ. ನಂತರ ಏಪ್ರಿಲ್ ನಂತರ 2023 ರ ಆರ್ಥಿಕ ವರ್ಷದಲ್ಲಿ 6.1 ಶೇಕಡಾಕ್ಕೆ ನಿಧಾನಗತಿಯಲ್ಲಿ ಸಾಗಿ ಕುಸಿಯಬಹುದು. ಇದಕ್ಕೆ ಬಾಹ್ಯ ಅಂಶಗಳು ಕಾರಣವಾಗುತ್ತವೆ" ಎಂದು IMF ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಪಿಯರೆ-ಒಲಿವಿಯರ್ ಗೌರಿಂಚಸ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

"ಭಾರತದ ಬೆಳವಣಿಗೆಯು 2022 ರಲ್ಲಿ ಶೇಕಡಾ 6.8 ರಿಂದ 2023 ರಲ್ಲಿ ಶೇಕಡಾ 6.1 ಕ್ಕೆ ಇಳಿಯಲಿದೆ, 2024 ರಲ್ಲಿ 6.8 ಶೇಕಡಾಕ್ಕೆ ಏರುತ್ತದೆ, ಬಾಹ್ಯ ಕಾರಣಗಳ ಹೊರತಾಗಿಯೂ ದೇಶದಲ್ಲಿ ಬೇಡಿಕೆ ಹೆಚ್ಚಲಿದೆ'' ಎಂದು IMF ನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ತಿಳಿಸಿದೆ. 

ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದುತ್ತಿರುವ ಏಷ್ಯಾದ ಬೆಳವಣಿಗೆಯು 2023 ಮತ್ತು 2024 ರಲ್ಲಿ ಕ್ರಮವಾಗಿ 5.3 ಶೇಕಡಾ ಮತ್ತು 5.2 ಶೇಕಡಾಕ್ಕೆ ಏರುವ ನಿರೀಕ್ಷೆಯಿದೆ, 2022 ರಲ್ಲಿ ನಿರೀಕ್ಷಿತ ನಿಧಾನಗತಿಯ ನಂತರ 4.3 ಶೇಕಡಾ ಚೀನಾದ ಆರ್ಥಿಕತೆಗೆ ಕಾರಣವಾಗಿದೆ.

2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಚೀನಾದ ನೈಜ GDP ನಿಧಾನಗತಿಯು 2022 ರ ಬೆಳವಣಿಗೆಗೆ 0.2 ಶೇಕಡಾ ಪಾಯಿಂಟ್ ಇಳಿಕೆ ಕಂಡಿದೆ. ಕಳೆದ 40 ವರ್ಷಗಳಲ್ಲಿ ಮೊದಲ ಬಾರಿಗೆ ಚೀನಾದ ಬೆಳವಣಿಗೆಯು ಜಾಗತಿಕ ಸರಾಸರಿಗಿಂತ ಕಡಿಮೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com