ಮುಂಬೈ: ಹಳದಿ ಲೋಹ ಚಿನ್ನದ ದರದಲ್ಲಿ ಭಾನುವಾರ ಯಾವುದೇ ಏರಿಳಿತಗಳಾಗಿಲ್ಲ.. ಸತತ ಏರಿಕೆಯಿಂದಾಗಿ ವೀಕೆಂಡ್‌ನಲ್ಲಿ ಚಿನ್ನ ಖರೀದಿಸಲು ಆತಂಕಪಡುತ್ತಿದ್ದ ಗ್ರಾಹಕರಲ್ಲಿ ಇದು ತುಸು ನಿರಾಳ ಭಾವ ಮೂಡಿಸಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗುವ ಅಂದಾಜಿತ್ತು. ಆದರೆ, ಭಾನುವಾರ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಶನಿವಾರ (ಏಪ್ರಿಲ್ 6) 22 ಕ್ಯಾರಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 120 ರೂ. ಮತ್ತು 131 ರೂ. ಹೆಚ್ಚಳವಾಗಿತ್ತು. ಹಾಗಾಗಿ, ಭಾನುವಾರ ಕೂಡ ಭಾರಿ ಪ್ರಮಾಣದ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿತ್ತು.
ಆದರೆ ಈ ದರದಲ್ಲಿ ಭಾನುವಾರ ಯಾವುದೇ ಏರಿಳಿತಗಳಾಗಿಲ್ಲ. ಬೆಂಗಳೂರಿನಲ್ಲಿ ಭಾನುವಾರ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 6,535 ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 7,129 ರೂ. ಇದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ 22 ಕ್ಯಾರಟ್ ಚಿನ್ನದ ದರ 65,500ರೂ ಇದ್ದು, 24 ಕ್ಯಾರಟ್ ಚಿನ್ನದ ದರ 71,440ರೂ ಇದೆ. ಅಂತೆಯೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 22 ಕ್ಯಾರಟ್ ಚಿನ್ನದ ದರ 65,350ರೂ ಇದ್ದು, 24 ಕ್ಯಾರಟ್ ಚಿನ್ನದ ದರ 71,290ರೂ ಇದೆ. ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರ 66,150 ರೂ ಇದ್ದು, 24ಕ್ಯಾರೆಟ್ ದರ 72,160ರೂ ಇದೆ.
ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.
Advertisement