
ಮುಂಬೈ: ವಾರದ ಆರಂಭದ ಮೊದಲ ದಿನವೇ ಭಾರತೀಯ ಷೇರುಮಾರುಕಟ್ಟೆ ಏರಿಕೆ ದಾಖಲಿಸಿದ್ದು, ಸೆನ್ಸೆಕ್ಸ್ 612 ಅಂಕಗಳ ಏರಿಕೆ ಕಂಡರೆ, ನಿಫ್ಟಿ 25 ಸಾವಿರ ಗಡಿ ದಾಟಿ ಚೇತೋಹಾರಿ ವಹಿವಾಟು ನಡೆಸಿದೆ.
ಏರಿಕೆಯೊಂದಿಗೆ ಕಳೆದ ವಾರದ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಈ ವಾರದ ಆರಂಭಿಕ ದಿನ ಸೋಮವಾರವೂ ಕೂಡ ಅದೇ ಪ್ರದರ್ಶನ ತೋರುವ ಮುನ್ಸೂಚನೆ ನೀಡಿದೆ.
ಇಂದು ಸೆನ್ಸೆಕ್ಸ್ ದಿನದ ವಹಿವಾಟು ಅಂತ್ಯಕ್ಕೆ 612 ಅಂಕ ಏರಿಕೆಯಾಗಿ ಒಟ್ಟು 81,698.11 ಅಂಕಗಳಿಗೆ ಏರಿಕೆಯಾಗಿದ್ದು, Nifty50 ಕೂಡ 187.46 ಅಂಕಗಳ ಏರಿಕೆಯೊಂದಿಗೆ 25,010.60. ಅಂಕಗಳಿಗೆ ಏರಿಕೆಯಾಗಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ಪಟ್ಟಿಮಾಡಲಾದ 50 ಷೇರುಗಳ ಪೈಕಿ ಬರೊಬ್ಬರಿ 33 ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಪ್ರಮುಖವಾಗಿ HCL Tech, Hindalco, NTPC, ONGC, and Bajaj Finserv ಸಂಸ್ಥೆಗಳ ಷೇರು ಮೌಲ್ಯದಲ್ಲಿ ಶೇ.4.24ರಷ್ಟು ಏರಿಕೆಯಾಗಿದೆ. ನಿಫ್ಟಿ ಮಿಡ್ ಕ್ಯಾಪ್ 100 ಷೇರುಗಳ ಮೌಲ್ಯ ಶೇ.0.64ರಷ್ಟು ಏರಿಕೆಯಾಗಿದ್ದು, ಐಟಿ, ಮೆಟಲ್, ರಿಯಾಲಿಟಿ ಮತ್ತು ಒಎಂಸಿ ಷೇರುಗಳ ಮೌಲ್ಯ ಶೇ.2.16ರಷ್ಟು ಏರಿಕೆಯಾಗಿದೆ.
ಕುಸಿದ ಪೇಟಿಎಂ ಷೇರು
ಆದರೆ ವ್ಯತಿರಿಕ್ತ ಎಂಬಂತೆ ಪೇಟಿಎಂ ಮಾತೃಸಂಸ್ಥೆ One 97 Communications ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಪ್ರತೀ ಷೇರಿನ ಮೌಲ್ಯದಲ್ಲಿ 505.25ರೂ ಅಂದರೆ ಶೇ.8.88 ರಷ್ಟು ಮೌಲ್ಯ ಕುಸಿತವಾಗಿದೆ.
ಪೇಟಿಎಂ ಷೇರು ಕುಸಿತಕ್ಕೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಗೆ ಸೆಬಿ ಶೋಕಾಸ್ ನೋಟಿಸ್ ನೀಡಿರುವುದು ಕಾರಣ ಎಂದು ಹೇಳಲಾಗಿದೆ. ಇದು ಮಾರುಕಟ್ಟೆಯಲ್ಲಿ ಪೇಟಿಎಂ ಷೇರುಗಳ ಖರೀದಿಗೆ ಹೂಡಿಕೆದಾರರು ನಿರಾಸಕ್ತಿ ತೋರಲು ಕಾರಣ ಎನ್ನಲಾಗಿದೆ.
Advertisement