
ಮುಂಬೈ: ಸೋಮವಾರ ಏರಿಕೆ ದಾಖಲಿಸಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಅಲ್ಪ ಏರಿಕೆಯೊಂದಿಗೆ ಸ್ಥಿರತೆ ಕಾಯ್ದುಕೊಂಡಿದ್ದು, ಸೆನ್ಸೆಕ್ಸ್ ಮತ್ತು NIFTY ಎರಡಂಕಿ ಮೊತ್ತದ ಏರಿಕೆ ಕಂಡಿವೆ.
ಇಂದು ಸೆನ್ಸೆಕ್ಸ್ 14 ಅಂಕಗಳ ಏರಿಕೆ ಕಂಡಿದ್ದರೆ, ನಿಫ್ಟಿ 7.15 ಅಂಕಗಳ ಅಲ್ಪ ಪ್ರಮಾಣದ ಏರಿಕೆಯೊಂದಿಗೆ ಇಂದಿನ ವಹಿವಾಟು ಅಂತ್ಯಗೊಳಿಸಿದೆ. ಸೆನ್ಸೆಕ್ಸ್ 14 ಏರಿಕೆಗಳೊಂದಿಗೆ 81,711.76 ಏರಿಕೆಯಾಗಿದ್ದರೆ, ನಿಫ್ಟಿ 7.15 ಅಂಕಗಳ ಏರಿಕೆಯೊಂದಿಗೆ 25,017.75ಕ್ಕೆ ಏರಿಕೆಯಾಗಿ ವಹಿವಾಟು ಅಂತ್ಯಗೊಳಿಸಿದೆ.
ಸಾರ್ವಕಾಲಿಕ ದಾಖಲೆಯತ್ತ ಸೆನ್ಸೆಕ್ಸ್
ಇನ್ನು ಇಂದಿನ ಸ್ಥಿರ ವಹಿವಾಟಿನ ಹೊರತಾಗಿಯೂ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆಯತ್ತ ದಾಪುಗಾಲಿರಿಸಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 81,711.76 ಅಂಕಗಳಿಗೆ ಏರಿಕೆಯಾಗಿದ್ದು, ಸಾರ್ವಕಾಲಿಕ ದಾಖಲೆ 82 ಸಾವಿರ ಅಂಕಗಳತ್ತ ದಾಪುಗಾಲಿರಿಸಿದೆ. ಇದೇ ವಾರದಲ್ಲೇ ಸೆನ್ಸೆಕ್ಸ್ ಈ ದಾಖಲೆ ನಿರ್ಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇಂದೂ ಕೂಡ ಐಟಿ ಮತ್ತು ಫೈನಾನ್ಸ್ ಸೆಕ್ಟರ್ ನ ಷೇರುಗಳು ಲಾಭಾಂಶ ಕಂಡಿದ್ದು, FMCG ಮತ್ತು ಮೆಟಲ್ ಷೇರುಗಳ ಮೌಲ್ಯದಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡಿದೆ.
Advertisement