
ಬೀಜಿಂಗ್: ಜಾಗತಿಕ ಟೆಕ್ ದೈತ್ಯ ಸಂಸ್ಥೆ ಇಂಟರ್ನ್ಯಾಷನಲ್ ಬಿಸಿನೆಸ್ ಮೆಷಿನ್ಸ್ ಕಾರ್ಪೊರೇಷನ್ (IBM) ಚೀನಾದಲ್ಲಿನ ತನ್ನ ಪ್ರಮುಖ ಸಂಶೋಧನಾ ವಿಭಾಗವನ್ನು ಮುಚ್ಚುತ್ತಿದ್ದು, 1,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ.
ಹೌದು.. ಆರ್ಥಿಕ ಕುಸಿತ ಮತ್ತು ಹೆಚ್ಚಿದ ನಿಯಂತ್ರಕ ಪರಿಶೀಲನೆಯಾಗಿ ಚೀನಾಕ್ಕೆ ತಮ್ಮ ಯೋಜನೆಗಳ ಹಿಂತೆಗೆಯುತ್ತಿರುವ ಕಂಪನಿಗಳ ಪಟ್ಟಿಗೆ ಐಬಿಎಂ ಸೇರುತ್ತಿದ್ದು, ಐಬಿಎಂ ಕಂಪನಿಯು ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಪರೀಕ್ಷೆಯಲ್ಲಿ ಪರಿಣತಿ ಹೊಂದಿರುವ ಎರಡು ವ್ಯಾಪಾರ ವಿಭಾಗಗಳನ್ನು ಮುಚ್ಚುತ್ತಿದೆ, ಬದಲಿಗೆ ಖಾಸಗಿ ಉದ್ಯಮಗಳಿಗೆ ಸೇವೆ ಸಲ್ಲಿಸುವ ಕಡೆಗೆ ಬದಲಾಯಿಸುತ್ತದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಈಗಾಗಲೇ ಮೋರ್ಗಾನ್ ಸ್ಟಾನ್ಲಿ(Morgan Stanley)ಯಂತಹ ಸಂಸ್ಥೆಗಳು ವಿದೇಶಕ್ಕೆ ತಮ್ಮ ಕೆಲವು ಕಾರ್ಯಾಚರಣೆಗಳನ್ನು ವರ್ಗಾಯಿಸಿವೆ. ಇದೀಗ ಈ ಪಟ್ಟಿಗೆ ಐಬಿಎಂ ಕೂಡ ಸೇರುತ್ತಿದೆ.
ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ
ಇನ್ನು ಐಬಿಎಂ ತನ್ನ ಚೀನೀ ಆರ್ & ಡಿ ಕಾರ್ಯಗಳನ್ನು ಬೇರೆಡೆ ಕಚೇರಿಗಳಿಗೆ ಸ್ಥಳಾಂತರಿಸಲು ಯೋಜಿಸಿದೆ. ಭಾರತ, ಬೆಂಗಳೂರು ಸೇರಿದಂತೆ ಸ್ಥಳಗಳಲ್ಲಿ ಎಂಜಿನಿಯರ್‌ಗಳು ಮತ್ತು ಸಂಶೋಧಕರನ್ನು ವರ್ಗಾಯಿಸುವುದಾಗಿ ಅಮೆರಿಕ ಮೂಲದ ಕಂಪನಿ ಕೆಲವು ಉದ್ಯೋಗಿಗಳಿಗೆ ತಿಳಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅನೇಕ ಉದ್ಯೋಗಿಗಳ ಪೋಸ್ಟ್‌ಗಳನ್ನು ಉಲ್ಲೇಖಿಸಿ, ನ್ಯೂಯಾರ್ಕ್‌ನ ಅರ್ಮಾಂಕ್ ಮೂಲದ ಕಂಪನಿಯು ಸೋಮವಾರ ಬೆಳಿಗ್ಗೆ ಆಂತರಿಕ ಸಭೆಯಲ್ಲಿ ಉದ್ಯೋಗ ಕಡಿತವನ್ನು ಅಧಿಕೃತವಾಗಿ ಘೋಷಿಸಿತು ಎಂದು ವರದಿ ಹೇಳಿದೆ.
ಐಬಿಎಂ ಸ್ಥಳೀಯ ಕಾರ್ಯತಂತ್ರವು ಚೀನೀ ಕಂಪನಿಗಳಿಗೆ ವಿಶೇಷವಾಗಿ ಖಾಸಗಿ ಸ್ವಾಮ್ಯದ ಸಂಸ್ಥೆಗಳಿಗೆ ಅದರ "ಗಣನೀಯ ತಂತ್ರಜ್ಞಾನ ಮತ್ತು ಸಲಹಾ ಪರಿಣತಿಯನ್ನು" ಸೆಳೆಯುವ ಮೂಲಕ ಹೈಬ್ರಿಡ್ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ (AI) ಸೆಲ್ಯೂಷನ್‌ಗಳನ್ನು ರಚನೆಗೆ ಸಹಾಯ ಮಾಡಲು ಸರಿಯಾದ ಕೌಶಲ್ಯಗಳೊಂದಿಗೆ ಸರಿಯಾದ ತಂಡಗಳನ್ನು ಹೊಂದುವುದರ ಮೇಲೆ ಕೇಂದ್ರೀಕರಿಸಿದೆ ಎಂದು ವರದಿಯಾಗಿದೆ.
ಚೀನಾದಲ್ಲಿ ಕಾರ್ಯಾಚರಣೆ ಸ್ಥಗಿತ
ಚೀನಾ ಸರ್ಕಾರ ಸ್ಥಳೀಯ ಕಂಪನಿಗಳಿಗೆ ಒಲವು ತೋರುತ್ತಿದೆ ಎಂಬ ಕಳವಳದಿಂದಾಗಿ ವಿದೇಶಿ ಹೂಡಿಕೆ ನಿಧಾನವಾಗಿದೆ ಎಂದು ಐಬಿಎಂ ಮೂಲಗಳು ತಿಳಿಸಿದ್ದು, ಸಂಸ್ಥೆ ಬಹುತೇಕ ಚೀನಾದಿಂದ ಕಾಲ್ತೆಗೆಯಲು ನಿರ್ಧರಿಸಿದೆ ಎನ್ನಲಾಗಿದೆ. ಅಂದಹಾಗೆ ಐಬಿಎಂ ಚೀನಾದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಿದ ಮೊದಲ ಕಂಪನಿಯೇನೂ ಅಲ್ಲ.
ಚೀನಾ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಉಂಟಾಗಿರುವುದರಿಂದ ಈ ಬೆಳವಣಿಗೆಯು ಬಂದಿದ್ದು, Ericsson, Tesla, Amazon.com ಮತ್ತು Intel ನಂತಹ ಕಂಪನಿಗಳು ಸಹ ಈ ಹಿಂದೆ ಇದೇ ರೀತಿಯ ಕ್ರಮ ಕೈಗೊಂಡಿದ್ದವು. ಈ ಕಂಪೆನಿಗಳ ಕ್ರಮದಿಂದಾಗಿ ಚೀನಾ ಆಧಾರಿತ ಉದ್ಯೋಗಿಗಳು ಇಲ್ಲಿ ಕೆಲಸ ಕಳೆದುಕೊಂಡಿದ್ದಾರೆ.
Advertisement