
ಮುಂಬೈ: ಗುರುವಾರ ಭಾರತೀಯ ಷೇರುಮಾರುಕಟ್ಟೆ ಮತ್ತೆ ಕುಸಿತವಾಗಿದ್ದು, ಹಣದುಬ್ಬರ ದತ್ತಾಂಶ ಪ್ರಕಟವಾಗುವ ಹಿನ್ನಲೆಯಲ್ಲಿ ಎಚ್ಚರಿಕೆಯಿಂದ ಇರುವ ಹೂಡಿಕೆದಾರರು ಷೇರು ಖರೀದಿಯಲ್ಲಿ ಹಿಂದೆ ಬಿದ್ದ ಕಾರಣ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿದಿವೆ.
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.29ರಷ್ಟು ಮತ್ತು ನಿಫ್ಟಿ ಶೇ.0.38ರಷ್ಟು ಕುಸಿತ ದಾಖಲಿಸಿದೆ.
ಸೆನ್ಸೆಕ್ಸ್ ಕೇವಲ 236.18 ಅಂಕಗಳ ಕುಸಿತದೊಂದಿಗೆ 81,289.96 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 93.10 ಅಂಕಗಳ ಅಲ್ಪ ಕುಸಿತದೊಂದಿಗೆ 24,548.70 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ ವಿಭಾಗದ ಷೇರುಗಳ ಮೌಲ್ಯ ಕುಸಿತವಾಗಿದ್ದು, ಮುಂದಿನ ವಾರ ಅಮೆರಿಕ ಫೆಡರಲ್ ಬ್ಯಾಂಕ್ ದರ ಕಡಿತ ಕುರಿತ ಮಹತ್ವದ ಸಭೆ ಕರೆದಿದೆ.
ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಿದೇಶಿ ಹೂಡಿಕೆದಾರರು ತಟಸ್ಥ ವಹಿವಾಟು ನಡೆಸಿದ್ದಾರೆ. ಇದೂ ಕೂಡ ಇಂದು ಮಾರುಕಟ್ಟೆ ರೆಡ್ ನಲ್ಲಿ ಅಂತ್ಯಗೊಳ್ಳಲು ಕಾರಣ ಎಂದು ಹೇಳಲಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಅದಾನಿ ಎಂಟರ್‌ಪ್ರೈಸಸ್, ಟೆಕ್ ಮಹೀಂದ್ರಾ, ಇಂಡಸ್ ಇಂಡ್ ಬ್ಯಾಂಕ್, ಭಾರ್ತಿ ಏರ್ಟೆಲ್, ಅದಾನಿ ಪೋರ್ಟ್ಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದ್ದು, NTPC, Hero MotoCorp, HAL, ಕೋಲ್ ಇಂಡಿಯಾ ಮತ್ತು ಟಾಟಾ ಕಸ್ಟಮರ್ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿವೆ.
Advertisement