ರಬ್ಬರ್ ವಲಯಕ್ಕೆ ಆರ್ಥಿಕ ನೆರವು ಶೇ.23ರಷ್ಟು ಏರಿಕೆ

ನೈಸರ್ಗಿಕ ರಬ್ಬರ್ ವಲಯದ ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿ' ಅಡಿಯಲ್ಲಿ ರಬ್ಬರ್ ವಲಯಕ್ಕೆ ನೀಡಲಾಗುವ ಆರ್ಥಿಕ ನೆರವನ್ನು ಶೇ.23ರಷ್ಟು ಏರಿಕೆ ಮಾಡಲಾಗಿದೆ.
ರಬ್ಬರ್ ವಲಯಕ್ಕೆ ಆರ್ಥಿಕ ನೆರವು ಶೇ.23ರಷ್ಟು ಏರಿಕೆ
ರಬ್ಬರ್ ವಲಯಕ್ಕೆ ಆರ್ಥಿಕ ನೆರವು ಶೇ.23ರಷ್ಟು ಏರಿಕೆANI

ನವದೆಹಲಿ: ನೈಸರ್ಗಿಕ ರಬ್ಬರ್ ವಲಯದ ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿ' ಅಡಿಯಲ್ಲಿ ರಬ್ಬರ್ ವಲಯಕ್ಕೆ ನೀಡಲಾಗುವ ಆರ್ಥಿಕ ನೆರವನ್ನು ಶೇ.23ರಷ್ಟು ಏರಿಕೆ ಮಾಡಲಾಗಿದೆ.

ಈ ಬಗ್ಗೆ ವಿಸ್ತೃತ ಮಾಹಿತಿ ಹಂಚಿಕೊಂಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಮುಂದಿನ ಎರಡು ಹಣಕಾಸು ವರ್ಷಗಳಾದ 2024-25 ಮತ್ತು 2025-26ರ ಹಣಕಾಸು ವರ್ಷಗಳಲ್ಲಿ ಆರ್ಥಿಕ ನೆರವನ್ನು 576.41 ಕೋಟಿ ರೂ.ಗಳಿಂದ 708.69 ಕೋಟಿ ರೂ.ಗಳಿಗೆ ಅಂದರೆ ಶೇ.23ರಷ್ಟು ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.

ರಬ್ಬರ್ ವಲಯಕ್ಕೆ ಆರ್ಥಿಕ ನೆರವು ಶೇ.23ರಷ್ಟು ಏರಿಕೆ
ಕೇಂದ್ರ ಸರ್ಕಾರ ನಮ್ಮ ವಿರುದ್ಧ ರಬ್ಬರ್ ಗುಂಡು, ಹೊಗೆ ಶೆಲ್ ಗಳನ್ನು ಬಳಸುತ್ತಿದೆ: ರೈತರು

ಭಾರತು ವಿಶ್ವದ ಅತಿದೊಡ್ಡ ರಬ್ಬರ್ ಉತ್ಪಾದಕ ದೇಶಗಳಲ್ಲಿ ಒಂದಾಗಿದೆ ಮತ್ತು ಸರಕಿನ ಮೂರನೇ ಅತಿದೊಡ್ಡ ಗ್ರಾಹಕ ರಾಷ್ಟ್ರವಾಗಿದೆ. ಭಾರತದ ನೈಸರ್ಗಿಕ ರಬ್ಬರ್ ಉತ್ಪಾದನೆಯಲ್ಲಿ ಕೇರಳದ ಪಾಲು ಶೇ.70ರಷ್ಟಿದೆ. ರಬ್ಬರ್ ಉದ್ಯಮವನ್ನು ಬೆಂಬಲಿಸಲು, 2024-25 ಮತ್ತು 2025-26ರಲ್ಲಿ ಸಾಂಪ್ರದಾಯಿಕ ಪ್ರದೇಶಗಳಲ್ಲಿ 12,000 ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ನೆಡುವಿಕೆಯನ್ನು 43.50 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಇದಕ್ಕಾಗಿ, ಸಹಾಯದ ದರವನ್ನು ಪ್ರತಿ ಹೆಕ್ಟೇರ್ಗೆ 25,000 ರೂ.ಗಳಿಂದ 40,000 ರೂ.ಗೆ ಹೆಚ್ಚಿಸಲಾಗಿದೆ.

"ಈ ಕ್ರಮ ಹೆಚ್ಚಿದ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ರಬ್ಬರ್ ನೆಡಲು ಬೆಳೆಗಾರರಿಗೆ ಹೆಚ್ಚುವರಿ ಪ್ರೋತ್ಸಾಹವನ್ನು ನೀಡುತ್ತದೆ" ಎಂದು ಸಚಿವಾಲಯ ಹೇಳಿದೆ. ಇದೇ ಅವಧಿಯಲ್ಲಿ 18.76 ಕೋಟಿ ರೂ.ಗಳ ವೆಚ್ಚದಲ್ಲಿ 3,752 ಹೆಕ್ಟೇರ್ ಪ್ರದೇಶವನ್ನು ಸಾಂಪ್ರದಾಯಿಕವಲ್ಲದ ಪ್ರದೇಶಗಳಲ್ಲಿ ರಬ್ಬರ್ ಕೃಷಿಗೆ ಒಳಪಡಿಸಲಾಗುವುದು. ಪ್ರತಿ ಹೆಕ್ಟೇರ್ ಗೆ 50,000 ರೂ.ಗಳ ಮೌಲ್ಯದ ನಾಟಿ ಸಾಮಗ್ರಿಗಳನ್ನು ರಬ್ಬರ್ ಮಂಡಳಿಯಿಂದ ಪೂರೈಸಲಾಗುವುದು. ಇದು ಈಶಾನ್ಯದಲ್ಲಿ ಇನ್ ರೋಡ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ನೆಡುತೋಪುಗಳಿಗಿಂತ ಹೆಚ್ಚಾಗಿರುತ್ತದೆ.

ರಬ್ಬರ್ ವಲಯಕ್ಕೆ ಆರ್ಥಿಕ ನೆರವು ಶೇ.23ರಷ್ಟು ಏರಿಕೆ
ಭಾರತದ ನೈಸಗಿಕ ರಬ್ಬರ್ ಉತ್ಪಾದನೆ ಶೇ.23 ರಷ್ಟು ಏರಿಕೆ!

ಸಾಂಪ್ರದಾಯಿಕವಲ್ಲದ ಪ್ರದೇಶಗಳಲ್ಲಿನ ಎಸ್ ಸಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ಗೆ 2,00,000 ರೂ.ಗಳಂತೆ ಸಸಿ ನೆಡುವ ನೆರವು ನೀಡಲಾಗುವುದು. ಉತ್ತಮ ಗುಣಮಟ್ಟದ ನಾಟಿ ಸಾಮಗ್ರಿಗಳನ್ನು ಉತ್ಪಾದಿಸಲು ಸಾಂಪ್ರದಾಯಿಕವಲ್ಲದ ಪ್ರದೇಶಗಳಲ್ಲಿ ಪ್ರಾಯೋಜಿತ ನರ್ಸರಿಗಳನ್ನು ಮಂಡಳಿಯು ಉತ್ತೇಜಿಸುತ್ತದೆ. ಅಂತಹ 20 ನರ್ಸರಿಗಳಿಗೆ 2,50,000 ರೂ.ಗಳ ನೆರವು ನೀಡಲಾಗುವುದು ಎಂದು ಸಚಿವಾಲಯ ಮಾಹಿತಿ ನೀಡಿದೆ. ರಬ್ಬರ್ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕ್ರಮಗಳನ್ನು ಸರ್ಕಾರ ಯೋಜಿಸುತ್ತಿದೆ. ಈ ನಿಟ್ಟಿನಲ್ಲಿ, 67,000 ಹೆಕ್ಟೇರ್ ಪ್ರದೇಶದಲ್ಲಿ (ಸಾಂಪ್ರದಾಯಿಕ 60,000, ಸಾಂಪ್ರದಾಯಿಕವಲ್ಲದ 5,000 ಮತ್ತು ಈಶಾನ್ಯದಲ್ಲಿ 2000) ಮಳೆ ಕಾವಲು ಮತ್ತು 22,000 ಹೆಕ್ಟೇರ್ ಪ್ರದೇಶದಲ್ಲಿ ಸಸ್ಯ ಸಂರಕ್ಷಣೆ (ಸಿಂಪಡಣೆ) ಮತ್ತು 22,000 ಹೆಕ್ಟೇರ್ (ಸಾಂಪ್ರದಾಯಿಕ 20,000 ಮತ್ತು 2000 ಸಾಂಪ್ರದಾಯಿಕವಲ್ಲದ) ಪ್ರದೇಶದಲ್ಲಿ ಸಸ್ಯ ಸಂರಕ್ಷಣೆ (ಸಿಂಪಡಣೆ) ಬೆಂಬಲವನ್ನು ಒದಗಿಸಲಾಗುವುದು.

ರಬ್ಬರ್ ವಲಯಕ್ಕೆ ಆರ್ಥಿಕ ನೆರವು ಶೇ.23ರಷ್ಟು ಏರಿಕೆ
ಫೆಬ್ರವರಿ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ.5.6 ಕ್ಕೆ ಅಲ್ಪ ಏರಿಕೆ

ಮುಂದಿನ ಎರಡು ವರ್ಷಗಳಲ್ಲಿ ಇದಕ್ಕಾಗಿ 35.60 ಕೋಟಿ ರೂ.ಗಳನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. ರಬ್ಬರ್ ಸಂಶೋಧನೆಗೆ ಧನಸಹಾಯ ನೀಡಲು ಮುಂದಿನ ಎರಡು ವರ್ಷಗಳಲ್ಲಿ 29.00 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ರಬ್ಬರ್ ಕೃಷಿಯನ್ನು ಹೊಸ ಪ್ರದೇಶಗಳಿಗೆ ವಿಸ್ತರಿಸಲು ದೇಶದ ವಿವಿಧ ಕೃಷಿ-ಹವಾಮಾನ ಪ್ರದೇಶಗಳಿಗೆ ಸೂಕ್ತವಾದ ರಬ್ಬರ್ ಕ್ಲೋನ್ ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಇದು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com