ಷೇರುಮಾರುಕಟ್ಟೆಯಲ್ಲಿ ಹಬ್ಬದ ಸಡಗರ: ಮೊದಲ ಬಾರಿಗೆ 73,000 ತಲುಪಿದ ಸೆನ್ಸೆಕ್ಸ್

ಸಂಕ್ರಾಂತಿ ಹಬ್ಬದ ದಿನವೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಹಬ್ಬದ ಸಡಗರ ಮನೆ ಮಾಡಿದ್ದು, ಮೊದಲ ಬಾರಿಗೆ ಸೆನ್ಸೆಕ್ಸ್ 73,000 ಮಟ್ಟಕ್ಕೇರಿದೆ.
ಭಾರತೀಯ ಷೇರುಮಾರುಕಟ್ಟೆ
ಭಾರತೀಯ ಷೇರುಮಾರುಕಟ್ಟೆ

ಮುಂಬೈ: ಸಂಕ್ರಾಂತಿ ಹಬ್ಬದ ದಿನವೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಹಬ್ಬದ ಸಡಗರ ಮನೆ ಮಾಡಿದ್ದು, ಮೊದಲ ಬಾರಿಗೆ ಸೆನ್ಸೆಕ್ಸ್ 73,000 ಮಟ್ಟಕ್ಕೇರಿದೆ.

ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ದಾಖಲೆಯ ಮಟ್ಟಕ್ಕೇರಿದ್ದು, ಸೆನ್ಸೆಕ್ಸ್ ಮೊದಲ ಬಾರಿಗೆ 73,000 ಅಂಕಗಳಿಗೇರಿದೆ. ನಿಫ್ಟಿ ಕೂಡ ಐತಿಹಾಸಿಕ 22,000-ಮಾರ್ಕ್ ಅನ್ನು ದಾಟಿತು.

ಇಂದಿನ ವಹಿವಾಟಿನಲ್ಲಿ ಐಟಿ ಷೇರುಗಳ ಮೌಲ್ಯದಲ್ಲಿ ಗಣನೀಯ ಏರಿಕೆ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 720.33 ಪಾಯಿಂಟ್‌ಗಳ ಜಿಗಿದು ಸಾರ್ವಕಾಲಿಕ ಗರಿಷ್ಠ 73,288.78 ಅನ್ನು ತಲುಪಿತು. ನಿಫ್ಟಿ ಕೂಡ 187.4 ಅಂಕಗಳ ಏರಿಕೆಯೊಂದಿಗೆ 22,000 ಅಂಕಗಳ ಗಡಿ ದಾಟಿ ಜೀವಮಾನದ ಗರಿಷ್ಠ 22,081.95 ಅಂಕಗಳ ಮೈಲಿಗಲ್ಲು ತಲುಪಿತು.  

ಸೆನ್ಸೆಕ್ಸ್ ಸಂಸ್ಥೆಗಳಲ್ಲಿ ವಿಪ್ರೋ ಸಂಸ್ಥೆಯ ಷೇರುಗಳ ಮೌಲ್ಯ ಸುಮಾರು ಶೇ.11ರಷ್ಟು ಏರಿಕೆ ಕಂಡಿದೆ. ಉಳಿದಂತೆ ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಇತರ ಪ್ರಮುಖ ಲಾಭ ಗಳಿಸಿದವು. 

HCL ಟೆಕ್ನಾಲಜೀಸ್ ಶುಕ್ರವಾರದಂದು ಸೇವೆಗಳು ಮತ್ತು ಸಾಫ್ಟ್‌ವೇರ್ ವ್ಯವಹಾರಗಳೆರಡರ ಬೆಳವಣಿಗೆಯ ಹಿನ್ನೆಲೆಯಲ್ಲಿ ಡಿಸೆಂಬರ್ 2023 ಕ್ಕೆ ಕೊನೆಗೊಂಡ ಮೂರು ತಿಂಗಳಲ್ಲಿ ತ್ರೈಮಾಸಿಕ ವರದಿ ಆಧಾರದ ಮೇಲೆ 4,350 ಕೋಟಿ ರೂ.ಗಳ ಏಕೀಕೃತ ನಿವ್ವಳ ಲಾಭದಲ್ಲಿ ಶೇಕಡಾ 6.2 ರಷ್ಟು ಹೆಚ್ಚಳವಾಗಿದೆ ಎಂದು ವರದಿ ಮಾಡಿತ್ತು. ಇದರ ಬೆನ್ನಲ್ಲೇ ಇಂದು ಷೇರುಮಾರುಕಟ್ಟೆ ಚೇತೋಹಾರಿ ವಹಿವಾಟು ನಡೆಸಿ ದಾಖಲೆಯ ಮಟ್ಟಕ್ಕೇರಿದೆ.

ಅಂತೆಯೇ ಹಿಂದುಸ್ತಾನ್ ಯೂನಿಲಿವರ್, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ ಮತ್ತು ಏಷ್ಯನ್ ಪೇಂಟ್ಸ್ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿತ ಕಂಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com