
ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಇಂದು ಚೇತೋಹಾರಿ ವಹಿವಾಟು ನಡೆದಿದ್ದು, ಸೆನ್ಸೆಕ್ಸ್ ಇಂದು 622 ಅಂಕಗಳ ಏರಿಕೆಯಾಗಿ ಹೂಡಿಕೆದಾರರಿಗೆ ಇಂದು 1.17 ಲಕ್ಷ ಕೋಟಿ ಲಾಭವಾಗಿದೆ.
ಹೌದು.. ಭಾರತೀಯ ಷೇರುಮಾರುಕಟ್ಟೆ ಇಂದು ಮತ್ತೊಂದು ಸಾರ್ವಕಾಲಿಕ ದಾಖಲೆ ಬರೆದಿದ್ದು, ಬಿಎಸ್ ಇ ಲಿಸ್ಟೆಡ್ ಸಂಸ್ಥೆಗಳ ಹೂಡಿಕೆ ಮೊದಲ ಬಾರಿಗೆ 452.38 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇಂದು ಒಂದೇ ದಿನ ಹೂಡಿಕೆದಾರರಿಗೆ 1.17 ಲಕ್ಷ ಕೋಟಿ ಲಾಭವಾಗಿದೆ.
ಸೆನ್ಸೆಕ್ಸ್ ಏರಿಕೆ
ಇನ್ನು ಇಂದು ಬಿಎಸ್ ಇ ಸೆನ್ಸೆಕ್ಸ್ ಇಂದಿನ ವಹಿವಾಟು ಅಂತ್ಯಕ್ಕೆ 622 ಅಂಕ ಏರಿಕೆಯಾಗಿ ಶೇ.0.78%ರಷ್ಟು ಏರಿಕೆಯೊಂದಿಗೆ 80,519.34ಕ್ಕೆ ಏರಿಕೆಯಾಗಿದೆ. ಅಂತೆಯೇ ನಿಫ್ಟಿ 50 ಕೂಡ 186.20 ಅಂಕಗಳ ಏರಿಕೆಯಾಗಿ ಶೇ.0.77ರಷ್ಟು ಏರಿಕೆಯೊಂದಿಗೆ 24,502.15 ಅಂಕಗಳಿಗೆ ಏರಿಕೆಯಾಗಿದೆ.
ಐಟಿ ಷೇರುಗಳ ಮೌಲ್ಯ ಏರಿಕೆ
ಇಂದಿನ ವಹಿವಾಟಿನಲ್ಲಿ ಐಟಿ ಷೇರುಗಳ ಮೌಲ್ಯದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಪ್ರಮುಖವಾಗಿ ಟಿಸಿಎಸ್ ಸಂಸ್ಥೆಯ ಷೇರುಗಳ ಮೌಲ್ಯ ಏರಿಕೆಯಾಗಿದೆ. ಮಾರುಕಟ್ಟೆ ಏರಿಕೆಗೆ ಅಮೆರಿಕದಲ್ಲಿನ ಹಣದುಬ್ಬರ ಕೂಡ ಕಾರಣ ಎಂದು ಹೇಳಲಾಗುತ್ತಿದ್ದು, ಅಮೆರಿಕ ಮಾರುಕಟ್ಟೆಗೆ ಭಾರತೀಯ ಮಾರುಕಟ್ಟೆಯನ್ನು ಪರ್ಯಾಯವಾಗಿ ಹೂಡಿಕೆದಾರರು ನೋಡುತ್ತಿರುವುದು ಭಾರತೀಯ ಮಾರುಕಟ್ಟೆಯ ಚೇತೋಹಾರಿ ವಹಿವಾಟಿಗೆ ಕಾರಣ ಎನ್ನಲಾಗುತ್ತಿದೆ.
Advertisement